janadhvani

Kannada Online News Paper

ಸೌದಿ: ರೀ ಎಂಟ್ರಿ ಹಾಗೂ ಹೊಸ ಪ್ರವೇಶಕ್ಕೆ”ಕರೋನಾ ಮುಕ್ತ” ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯ

ರಿಯಾದ್:ಕರೋನವೈರಸ್ ಹರಡುವುದನ್ನು ತಡೆಯಲು ಭಾರತ ಸಮೇತವಿರುವ ಕೋವಿಡ್-19 ದೃಢೀಕರಿಸಿದ ದೇಶಗಳಿಂದ ಸೌದಿ ಅರೇಬಿಯಾಕ್ಕೆ ಬರುವವರಿಗೆ ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ.

24 ಗಂಟೆಗಳ ಮುಂಚಿತವಾಗಿ ಸೌದಿ ಕಾನ್ಸುಲೇಟ್ ಅನುಮೋದಿಸಿದ ಆರೋಗ್ಯ ಕೇಂದ್ರಗಳಿಂದ ಪಡೆದ ಪ್ರಮಾಣಪತ್ರಗಳನ್ನು ಹಾಜರುಪಡಿಸಬೇಕು.ಹೊಸ ನಿರ್ಧಾರವು ರಜಾ ನಿಮಿತ್ತ ಊರಿಗೆ ಮರಳಿದವರ ಮೇಲೆ ಪರಿಣಾಮ ಬೀರಲಿದೆ.


ಪ್ರಮಾಣಪತ್ರಗಳನ್ನು ಪರಿಶೀಲಿಸುವ ಮತ್ತು ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ ನೀಡುವ ಜವಾಬ್ದಾರಿಯನ್ನು ವಿಮಾನಯಾನ ಸಂಸ್ಥೆಗಳು ಹೊಂದಿವೆ.ಕರೋನಾ ಪೀಡಿತ ದೇಶಗಳಲ್ಲಿನ ವಿಮಾನ ನಿಲ್ದಾಣಗಳಿಗೆ ಸೂಚನೆ ನೀಡಲಾಗಿದೆ.

ಸೌದಿ ಆಂತರಿಕ ಸಚಿವಾಲಯ ಹೊರಡಿಸಿದ ಸುತ್ತೋಲೆಯ ಪ್ರಕಾರ, ಹೊಸ ಆಗಮನ ಅಥವಾ ಮರು ಪ್ರವೇಶಿಸುವವರು ಎರಡು ವಾರಗಳಿಗಿಂತ ಹೆಚ್ಚು ಕಾಲ ಕೋವಿಡ್‌-19 ದೃಢಪಡಿಸಿದ ದೇಶದಲ್ಲಿದ್ದರೆ ಆರೋಗ್ಯ ಪ್ರಮಾಣಪತ್ರವನ್ನು ತೋರಿಸಬೇಕಾಗುತ್ತದೆ.ಇದು ಎಂದಿನಿಂದ ಜಾರಿಗೆ ಬರಲಿದೆ ಎಂದು ಸುತ್ತೋಲೆ ಹೇಳುತ್ತಿಲ್ಲ.

ಯುಎಇ, ಕುವೈತ್ ಮತ್ತು ಬಹ್ರೇನ್‌ನಿಂದ ರಸ್ತೆ ಮಾರ್ಗವಾಗಿ ಸೌದಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

error: Content is protected !! Not allowed copy content from janadhvani.com