janadhvani

Kannada Online News Paper

ತ್ರಿಶೂರ್‌: ದೇವಾಲಯದ ಶೌಚಾಲಯದಲ್ಲಿ ‘ಬ್ರಾಹ್ಮಣರಿಗೆ ಸೀಮಿತ’ ಬೋರ್ಡ್- ಭಾರೀ ವಿವಾದ

ತ್ರಿಶೂರ್‌: ಕೇರಳದ ದೇವಾಲಯದ ಶೌಚಗೃಹದಲ್ಲಿ ಹಾಕಲಾಗಿದ್ದ ‘ಬ್ರಾಹ್ಮಣರಿಗೆ ಮಾತ್ರ’ ಎಂಬ ನಾಮಫಲಕ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಕೇರಳದ ತ್ರಿಶೂರಿನ ಕುಟ್ಟು ಮುಕ್ಕು ಮಹದೇವ ದೇವಸ್ಥಾನದಲ್ಲಿ ಒಟ್ಟು 3 ಶೌಚಗೃಹಗಳಿವೆ. ಈ ಮೂರು ಶೌಚಗೃಹಗಳೂ ನಾಮಫಲಕವನ್ನು ಹೊಂದಿವೆ. ಒಂದು ಕೇವಲ ಮಹಿಳೆಯರಿಗೆ ಮೀಸಲಿದ್ದರೆ, ಮತ್ತೊಂದು ಪುರುಷರಿಗೆ ಮೀಸಲಾಗಿದೆ. ಉಳಿದ ಇನ್ನೊಂದು ಶೌಚಗೃಹಕ್ಕೆ ‘ಬ್ರಾಹ್ಮಣರಿಗೆ ಮಾತ್ರ’ ಎಂಬ ನಾಮಫಲಕ ಹಾಕಲಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.

ಅರ್ಚಕರು ಹಾಗೂ ದೇಗುಲದ ಆಡಳಿತ ಮಂದಿ ಮಾತ್ರವೇ ಬಳಸುತ್ತಿದ್ದ ಈ ಟಾಯ್ಲೆಟ್‌ ಅನ್ನು ಕಳೆದ 20 ವರ್ಷಗಳಿಂದಲೂ ಹೀಗೇ ಪ್ರತ್ಯೇಕವಾಗಿ ಬಳಸಿಕೊಂಡು ಬರಲಾಗುತ್ತಿದೆ. ಇದುವರೆಗೂ ಯಾರೊಬ್ಬರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ ಎಂದು ದೇಗುಲದ ಆಡಳಿತ ಸಮಿತಿಯ ಅಧಿಕಾರಿ ಕಣ್ಣನ್ ತಿಳಿಸಿದ್ದಾರೆ. ಪತ್ರಕರ್ತರು ಒಳ್ಳೆಯ ವಿಷಯಗಳನ್ನು ಮಾತ್ರ ಸಮಾಜಕ್ಕೆ ನೀಡಬೇಕು: ಡಾ.ವೀರೇಂದ್ರ ಹೆಗ್ಗಡೆ ಇದೀಗ ‘ಬ್ರಾಹ್ಮಣರಿಗೆ ಮಾತ್ರ’ ಬೋರ್ಡ್ ಕಿತ್ತೊಗೆದು, ‘ಸಿಬ್ಬಂದಿಗೆ ಮಾತ್ರ’ ಎಂದು ಹೊಸ ಬೋರ್ಡ್‌ ನೇತು ಹಾಕಲಾಗಿದೆ ಎಂದು ಕಣ್ಣನ್ ತಿಳಿಸಿದ್ದಾರೆ

error: Content is protected !! Not allowed copy content from janadhvani.com