janadhvani

Kannada Online News Paper

ಭಾರತೀಯರ ಬೇಡಿಕೆಗೆ ಸ್ಪಂದಿಸಿದ ಕುವೈತ್- “ವೈರಸ್ ಮುಕ್ತ ಪ್ರಮಾಣಪತ್ರ” ನಿಯಮ ರದ್ದು

ಕುವೈತ್ ಸಿಟಿ: ಕುವೈತ್‌ಗೆ ಪ್ರವೇಶ ಪಡೆಯಲು ಕರೋನ ವೈರಸ್ ಮುಕ್ತ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎನ್ನುವ ನಿಯಮವನ್ನು ರದ್ದುಪಡಿಸಲಾಗಿದ್ದು, ಕುವೈತ್‌ನ ಸಂಪುಟ ಸಭೆಯು ತಾತ್ಕಾಲಿಕವಾಗಿ ಈ ಕ್ರಮವನ್ನು ಸ್ಥಗಿತಗೊಳಿಸಿದೆ.

ಭಾರತ ಸೇರಿದಂತೆ 10 ದೇಶಗಳಿಂದ ಬರುವ ಎಲ್ಲ ಪ್ರಯಾಣಿಕರಿಗೆ ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಬೇಕು ಎನ್ನುವ ಸರ್ಕ್ಯುಲೆರ್ ಹೊರಡಿಲಾತ್ತು. ಈ ದೇಶಗಳಿಂದ ಪ್ರಮಾಣೀಕರಣ ಪಡೆಯುವಲ್ಲಿನ ತಾಂತ್ರಿಕ ತೊಂದರೆಗಳಿಂದಾಗಿ ಈ ನಿರ್ಧಾರವನ್ನು ರದ್ದುಪಡಿಸಲಾಗಿದೆ ಎಂದು ಆರೋಗ್ಯ ಮೂಲಗಳು ತಿಳಿಸಿವೆ.

ಅಂತಹ ಪ್ರಮಾಣಪತ್ರವನ್ನು ಪಡೆಯುವ ಪ್ರಾಯೋಗಿಕ ತೊಂದರೆಗಳನ್ನು ಭಾರತೀಯ ಮೂಲಗಳು ಗುರುತಿಸಿವೆ. ಇದು ಕುವೈತ್‌ನಲ್ಲಿ ಕೆಲಸ ಮಾಡುವ ಅನೇಕ ಭಾರತೀಯರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸೂಚಿಸಲಾಗಿದೆ. ಮುಂದಿನ ರವಿವಾರದಿಂದ ಭಾರತದಲ್ಲಿ ರಜಾ ಅವಧಿ ಪ್ರಾರಂಭವಾಗುತ್ತದೆ ಎಂಬುದು ಆತಂಕವನ್ನು ಉಂಟುಮಾಡಿದ್ದವು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ತಾತ್ಕಾಲಿಕ ರದ್ದತಿಗೆ ಭಾರತೀಯ ಸಮುದಾಯ ನೀಡಿದ ಕೋರಿಕೆಯ ಮೇರೆಗೆ ಕುವೈತ್ ಈ ಕಾನೂನನ್ನು ತಾತ್ಕಾಲಿಕವಾಗಿ ರದ್ದುಪಡಿಸಿದೆ ಎನ್ನಲಾಗಿದೆ.

error: Content is protected !! Not allowed copy content from janadhvani.com