janadhvani

Kannada Online News Paper

ಹರಂಗಳಲ್ಲಿ ಮತ್ತಷ್ಟು ನಿಯಂತ್ರಣ- ಝಂಝಂ ನೀರು ಸಂಗ್ರಹಣೆಗೆ ತಾತ್ಕಾಲಿಕ ನಿಷೇಧ

ರಿಯಾದ್: ಕೊರೋನ ಭೀತಿಯ ಹಿನ್ನೆಲೆಯಲ್ಲಿ, ಮಕ್ಕಾ ಮದೀನಾಗಳ ಹರಮ್‌ಗಳನ್ನು ಸೋಂಕು ಮುಕ್ತಗೊಳಿಸುವುದರ ಭಾಗವಾಗಿ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗಿದೆ. ಕ‌ಅಬಾ ಪ್ರಾಂಗಣವನ್ನು ಇಂದು ಸಂಪೂರ್ಣವಾಗಿ ಜನರಿಂದ ಮುಕ್ತಗೊಳಿಸಲಾಯಿತು.

ಹರಮ್‌ಗಳ ಸುತ್ತ ಬ್ಯಾರಿಕೇಡ್ ಸ್ಥಾಪನೆ

ಕ‌ಅಬಾದ ಸುತ್ತಲೂ ಬೆಲ್ಟ್ ನಿರ್ಮಿಸಲಾಗಿದ್ದು, ಈ ಪ್ರದೇಶದಲ್ಲಿನ ದಟ್ಟಣೆಯನ್ನು ಇದು ಕಡಿಮೆ ಮಾಡಲಿದೆ. ತವಾಫ್ ನಿರ್ವಹಣೆಗೆ ಕ‌ಅಬಾ ಸುತ್ತ ಇರುವ ಮಾತಾಫ್ ಸಮುಚ್ಚಯವನ್ನು ಉಪಯೋಗಿಸಬಹುದಾಗಿದೆ.

ಕೋವಿಡ್ 19 ರಕ್ಷಣೆಯ ಭಾಗವಾಗಿ ಹರಮ್ ಮಸೀದಿಯ ಬಳಿ ವಿವಿಧ ಬೋರ್ಡ್‌ಗಳ ಸ್ಥಾಪನೆ

ಕೋವಿಡ್ 19 ರಕ್ಷಣೆಯ ಭಾಗವಾಗಿ ಹರಮ್ ಮಸೀದಿಯ ಬಳಿ ವಿವಿಧ ಬೋರ್ಡ್‌ಗಳನ್ನು ಸ್ಥಾಪಿಸಲಾಗಿದ್ದು,
ಪ್ರತಿದಿನ ಇಶಾ ನಮಾಝ್‌ನ ನಂತರ, ಎರಡೂ ಹರಮ್‌ಗಳನ್ನು ಮುಚ್ಚಲಾಗುತ್ತದೆ. ಪ್ರತೀ ದಿನ 6 ಬಾರಿ ಅಣುಮುಕ್ತಗೊಳಿಸಿ, ಸುಬಹಿ ನಮಾಝ್‌ಗಿಂತ ಒಂದು ಗಂಟೆ ಮೊದಲು ತೆರೆಯಲಾಗುತ್ತದೆ. ಪ್ರಾರ್ಥನೆ ಸಮಯ ಹೊರತುಪಡಿಸಿ ಕಠಿಣ ಅಣು ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಈ ನಿರ್ಧಾರ ಹೊಂದಿದೆ ಎಂದು ಸಚಿವಾಲಯವನ್ನು ಉದ್ದರಿಸಿ ಸೌದಿ ಮಾಧ್ಯಮ ವರದಿ ಮಾಡಿದೆ.

ಮಗ್ರಿಬ್ ನಮಾಜಿಗೆ ಹರಮ್ ಮಸೀದಿಯ ಮೇಲ್ಭಾಗಕ್ಕೆ ಬಂದ ಜನರು

ಝಂಝಂ ನೀರು ಸಂಗ್ರಹಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಹರಮ್ ಮಸೀದಿಯೊಳಗಿನ ಎಲ್ಲಾ ಝಂಝಂ ಬಾಟಲಿಗಳನ್ನು ಬದಲಾಯಿಸಲಾಗುತ್ತಿದೆ.

ನಿರ್ಬಂಧವಿದ್ದರೂ, ಕ‌ಅಬಾಲಯವು ಭಕ್ತರಿಂದ ತುಂಬಿದೆ.

ಅದೇ ಸಮಯದಲ್ಲಿ, ಮತಾಫ್ನಲ್ಲಿನ ದಟ್ಟಣೆ ಸ್ವಲ್ಪ ಕಡಿಮೆಯಾಗಿದೆ. ವಿಶ್ವಾಸಿಗಳು ಇನ್ನೂ ಪ್ರಾರ್ಥನೆಗಾಗಿ ತಲುಪುತ್ತಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ ಬಳಿಕ ಇ‌ಅ್‌ತಿಕಾಫ್ ಕೂರುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮಸೀದಿಯ ಒಳಗೆ ಯಾವುದೇ ಆಹಾರ ಪದಾರ್ಥವನ್ನು ಅನುಮತಿಸಲಾಗುವುದಿಲ್ಲ.

ರಾತ್ರಿ ಹರಮ್ ಮಸೀದಿಯ ಹೊರಗಿನ ನೋಟ

ನಿಯಮಗಳು ಮದೀನಾ ಮಸೀದಿಗೂ ಅನ್ವಯಿಸುತ್ತವೆ. ಪ್ರವಾದಿಯವರ ಕುಟುಂಬ, ಸಹಚರರು ಮತ್ತು ಇತರ ಗಣ್ಯರನ್ನು ಸಮಾಧಿ ಮಾಡಲಾದ ಮದೀನಾದ ಜನ್ನತುಲ್ ಬಕೀಅ‌್‌ಗೆ ಭೇಟಿ ನೀಡುವುದನ್ನು ಕೂಡ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

error: Content is protected !! Not allowed copy content from janadhvani.com