janadhvani

Kannada Online News Paper

ಭಾರತೀಯರು ಕುವೈತ್ ಪ್ರವೇಶಿಸಲು ‘ಕೋವಿಡ್ 19 ಮುಕ್ತ’ ಪ್ರಮಾಣ ಪತ್ರ ಅಗತ್ಯ

ಕುವೈತ್ ಸಿಟಿ: ಭಾರತ ಸೇರಿದಂತೆ ಹತ್ತು ದೇಶಗಳ ಪ್ರಯಾಣಿಕರಿಗೆ ಕುವೈತ್ ಪ್ರವೇಶಿಸಲು ಅವಕಾಶ ಲಭಿಸಬೇಕಾದರೆ ಕೋವಿಡ್ 19 ಸೋಂಕು ತಗುಲದ ಬಗ್ಗೆ ಖಚಿತಪಡಿಸುವ ಪ್ರಮಾಣ ಪತ್ರವನ್ನು ಹಾಜರು ಪಡಿಸಬೆಎಕು ಎಂದು ನಾಗರಿಕ ವಿಮಾನಯಾನ ಇಲಾಖೆ ಹೇಳಿದೆ. ಕೋವಿಡ್ 19 ಮುಕ್ತರೆನ್ನುವ ಪ್ರಮಾಣ ಪತ್ರವನ್ನು ಅವರು ತಮ್ಮ ದೇಶದ ಕುವೈತ್ ರಾಯಭಾರ ಕಚೇರಿಯ ಅಧಿಕೃತ ಆರೋಗ್ಯ ಕೇಂದ್ರಗಳಿಂದ ಪಡೆದುಕೊಳ್ಳಬೇಕು. ಮಾರ್ಚ್ 8 ರಿಂದ ಹೊಸ ನಿರ್ಧಾರ ಜಾರಿಗೆ ಬರಲಿದೆ.

ಭಾರತದ ಜೊತೆಗೆ, ಫಿಲಿಪೈನ್ಸ್, ಬಾಂಗ್ಲಾದೇಶ, ಈಜಿಪ್ಟ್, ಸಿರಿಯಾ, ಅಜೆರ್ಬೈಜಾನ್, ಟರ್ಕಿ, ಶ್ರೀಲಂಕಾ, ಜಾರ್ಜಿಯಾ ಮತ್ತು ಲೆಬನಾನ್ ದೇಶಗಳ ಪ್ರಯಾಣಿಕರಿಗೂ ಇದು ಅನ್ವಯಿಸುತ್ತದೆ. ಈ ದೇಶಗಳಿಂದ ಬರುವ ಪ್ರಯಾಣಿಕರು ಮಾರ್ಚ್ 8ರಿಂದ ಮುಂದಿನ ಸೂಚನೆ ಬರುವವರೆಗೆ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಕುವೈತ್‌ನ ರಾಯಭಾರ ಕಚೇರಿಯಿಲ್ಲದ ದೇಶಗಳಲ್ಲಿ, ಆಯಾ ದೇಶಗಳ ಅಧಿಕಾರಿಗಳು ಅನುಮೋದಿಸಿದ ಆರೋಗ್ಯ ಕೇಂದ್ರಗಳ ಪ್ರಮಾಣೀಕರಣವು ಸಾಕಾಗುತ್ತದೆ.ಹೊಸತಾಗಿ ಆಗಮಿಸುವವರು ಮತ್ತು ರಜಾದಿನ ಮುಗಿದು ಮರಳುವವರಿಗೂ ಆದೇಶ ಅನ್ವಯಿಸುತ್ತದೆ.

ವೈದ್ಯಕೀಯ ಪ್ರಮಾಣಪತ್ರವನ್ನು ಹಾಜರುಪಡಿಸದಿದ್ದರೆ, ಅದೇ ವಿಮಾನದಲ್ಲಿ ತನ್ನ ಸ್ವಂತ ವೆಚ್ಚದಲ್ಲಿ ಹಿಂತಿರುಗಿಸಲಾಗುತ್ತದೆ. ವಾಪಸಾತಿ ವೆಚ್ಚವನ್ನು ಕುವೈತ್ ಭರಿಸುವುದಿಲ್ಲ. ಈ ನಿರ್ದೇಶನವು ಮೇಲಿನ ದೇಶಗಳಿಂದ ಬಂದ ಕುವೈತ್ ಪ್ರಜೆಗಳಿಗೆ ಅನ್ವಯಿಸುವುದಿಲ್ಲ, ಆದರೆ ನಾಗರಿಕರನ್ನು ವಿಮಾನ ನಿಲ್ದಾಣದಲ್ಲಿ ಕಡ್ಡಾಯ ಪರಿಶೋಧನೆಗೆ ಒಳಪಡಿಸಲಾಗುವುದು ಎಂದು ನಿರ್ದೇಶನಾಲಯ ತಿಳಿಸಿದೆ.

error: Content is protected !! Not allowed copy content from janadhvani.com