janadhvani

Kannada Online News Paper

ಯುಎಇ: ಕರೋನವೈರಸ್ ಬಗ್ಗೆ ಭಾರತೀಯ ದೂತವಾಸದಿಂದ ಜಾಗೃತಿ ನಿರ್ದೇಶನ

ದುಬೈ: ಯುಎಇಯಲ್ಲಿರುವ ಭಾರತೀಯರಿಗೆ ಕರೋನವೈರಸ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಭಾರತದ ಕಾನ್ಸುಲೇಟ್ ನಿರ್ದೇಶನ ನೀಡಿದ್ದು, ಈ ಬಗೆಗಿನ ಪ್ರಸ್ತಾಪಗಳನ್ನು ದೂತಾವಾಸದ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಕಟಿಸಲಾಗಿದೆ.

ಯುಎಇ ಆರೋಗ್ಯ ಸಚಿವಾಲಯ ಹೊರಡಿಸಿದ ಕರೋನವೈರಸ್ ಮಾರ್ಗಸೂಚಿಗಳನ್ನು ಎಲ್ಲಾ ವಲಸಿಗ ಭಾರತೀಯರು ಅನುಸರಿಸಬೇಕೆಂದು ದೂತಾವಾಸವು ವಿನಂತಿಸಿದೆ. ವೈದ್ಯಕೀಯ ನೆರವು ಅಗತ್ಯವಿರುವವರು ದುಬೈ ಆರೋಗ್ಯ ಇಲಾಖೆಯನ್ನು 800342 ಅಥವಾ ಯುಎಇ ಆರೋಗ್ಯ ಸಚಿವಾಲಯವನ್ನು 042301000 ಸಂಖ್ಯೆಯ ಮೂಲಕ ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ದುಬೈನ ಭಾರತೀಯ ದೂತಾವಾಸವ ಕೇಂದ್ರದ ದೂರವಾಣಿ ಸಂಖ್ಯೆ: 043971222, 043971333. ಮೂಲಕ ಮತ್ತು ಕಾನ್ಸುಲೇಟ್‌ನ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪುಟಗಳ ಮೂಲಕವೂ ಸಂಪರ್ಕಿಸಬಹುದು.

ಸೂಚನೆಗಳು

  • ಜೀವಂತ ಅಥವಾ ಸತ್ತ ಪ್ರಾಣಿಗಳ ಸಂಪರ್ಕವನ್ನು ತಪ್ಪಿಸಿರಿ, ಪ್ರಾಣಿಗಳ ಮಾರುಕಟ್ಟೆ ಮತ್ತು ಬೇಯಿಸದ ಮಾಂಸದಂತಹ ಪ್ರಾಣಿ ಉತ್ಪನ್ನಗಳಿಂದ ದೂರ ಇರಿ.
  • ಉಸಿರಾಟದ ಲಕ್ಷಣಗಳನ್ನು ಹೊಂದಿರುವ ಜನರೊಂದಿಗೆ ನಿಕಟ ಸಂಪರ್ಕದಲ್ಲಿರಬೇಡಿ.
  • ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನಿನಿಂದ ತೊಳೆಯಿರಿ.
  • ಸೋಪ್ ಮತ್ತು ನೀರು ಲಭ್ಯವಿಲ್ಲದಿದ್ದರೆ, ಹ್ಯಾಂಡ್ ಸ್ಯಾನಿಟೈಜರ್ ಬಳಸಿ.
  • ಸೀನು ಮತ್ತು ಕೆಮ್ಮುವಾಗ ಟವೆಲ್ ಉಪಯೋಗಿಸಿ ಮುಚ್ಚಿ.
  • ನೀವು ರೋಗಲಕ್ಷಣಗಳನ್ನು ಹೊಂದಿದ್ದರೆ ಪ್ರವಾಸಗಳನ್ನು ತಪ್ಪಿಸಿ.

error: Content is protected !! Not allowed copy content from janadhvani.com