janadhvani

Kannada Online News Paper

ಚಿನ್ನಾಭರಣದಂತಹ ದುಬಾರಿ ವಸ್ತುಗಳನ್ನು ಸಾಗಿಸುವುದಕ್ಕೆ ಕಠಿಣ ನಿಯಮ

ದೋಹಾ: ಕರೆನ್ಸಿ ಮತ್ತು ಚಿನ್ನಾಭರಣಗಳಂತಹ ದುಬಾರಿ ವಸ್ತುಗಳನ್ನು ದೇಶಕ್ಕೆ ತರುವುದು ಮತ್ತು ದೇಶದಿಂದ ಸಾಗಿಸುವುದಕ್ಕೆ ಖತರ್ ಹೊಸ ನಿಯಮಗಳನ್ನು ಜಾರಿಗೊಳಿಸಿದೆ.

ಐವತ್ತು ಸಾವಿರ ಖತರ್ ರಿಯಾಲ್ ಮೌಲ್ಯದ ಸರಕುಗಳನ್ನು ಯಾವುದೇ ಮಾರ್ಗದಿಂದ ಸಾಗಿಸುವವರಾದರೂ ಕೂಡ ಕಸ್ಟಮ್ಸ್ ಇಲಾಖೆಯ ವಿಶೇಷ ಸರಕು ಅಫಿಡವಿಟ್ ಅನ್ನು ಭರ್ತಿ ಮಾಡಿ ನೀಡಬೇಕಾಗುತ್ತದೆ.

ಕಪ್ಪುಹಣವನ್ನು ಸಕ್ರಮಗೊಳಿಸುವುದು ಮತ್ತು ಭಯೋತ್ಪಾದಕರಿಗೆ ಹಣಕಾಸು ಸಹಾಯ ನೀಡುವುದನ್ನು ನಿಗ್ರಹಿಸಲು ಖತರ್ ಜಾರಿಗೊಳಿಸಿದ ಹೊಸ ಕಾನೂನನ್ನು ಆಧರಿಸಿ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ.

ವಾಯು, ಸಮುದ್ರ ಅಥವಾ ಭೂಮಿ ಮಾರ್ಗ ಮೂಲಕ ಐವತ್ತು ಸಾವಿರ ರಿಯಾಲ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಸರಕುಗಳನ್ನು ದೇಶಕ್ಕೆ ಅಥವಾ ದೇಶದಿಂದ ಹೊರಗೆ ತರಬೇಕಾದರೆ ಇನ್ನು ಮುಂದೆ, ಅಫಿಡವಿಟ್ ಅನ್ನು ಭರ್ತಿ ಮಾಡಬೇಕು. ಪ್ರಶ್ನಾವಳಿಯು, ಈ ವಸ್ತುಗಳನ್ನು ಹೇಗೆ ಪಡೆಯಲಾಗಿದೆ, ಅವುಗಳನ್ನು ಏಕೆ ಸಾಗಿಸಲಾಗುತ್ತದೆ ಮುಂತಾದ ಎಲ್ಲಾ ಪ್ರಶ್ನೆಗಳನ್ನು ಒಳಗೊಂಡಿದೆ.

ಅಫಿಡವಿಟ್ ಅನ್ನು ಪರಿಶೀಲಿಸಿ, ಮತ್ತು ದೃಢೀಕರಿಸಿದ ಬಳಿಕ ಮಾತ್ರ ಅಂತಹ ವಹಿವಾಟುಗಳನ್ನು ಅನುಮತಿಸಲಾಗುತ್ತದೆ. ಹೊಸ ನಿಯಮವು ಎಲ್ಲಾ ಕರೆನ್ಸಿಗಳು, ಚಿನ್ನ, ಬೆಳ್ಳಿ, ವಜ್ರಗಳು, ಆಭರಣಗಳು, ನಗದು ಚೆಕ್‌ಗಳಿಗೂ ಅನ್ವಯಿಸುತ್ತದೆ.

ಸುಳ್ಳು ಮಾಹಿತಿ ನೀಡುವುದು ಅಥವಾ ಅಫಿಡವಿಟ್‌ನ ಕೆಲವು ಭಾಗಗಳನ್ನು ಭರ್ತಿ ಮಾಡದಿದ್ದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಮತ್ತು ಒಂದು ಲಕ್ಷ ರಿಯಾಲ್‌ ವರೆಗೆ ದಂಡ ವಿಧಿಸಲಾಗುತ್ತದೆ.

error: Content is protected !! Not allowed copy content from janadhvani.com