janadhvani

Kannada Online News Paper

ಸೌದಿ: ಸಣ್ಣ ಉದ್ಯಮ ಕೇಂದ್ರಗಳಲ್ಲೂ ಆನ್‌ಲೈನ್ ಪಾವತಿ ಕಡ್ಡಾಯ

ರಿಯಾದ್: ಸೌದಿ ಅರೇಬಿಯಾದ ಕ್ಷೌರಿಕ ಅಂಗಡಿಗಳು, ಲಾಂಡ್ರಿಗಳು ಮತ್ತು ಬ್ಯೂಟಿ ಪಾರ್ಲರ್‌ಗಳಲ್ಲಿ ಆನ್‌ಲೈನ್ ಪಾವತಿಗಳನ್ನು ಕಡ್ಡಾಯಗೊಳಿಸಲಾಗುತ್ತಿದೆ. ದೇಶದಲ್ಲಿನ ಬಿನಾಮಿ ವ್ಯವಹಾರಗಳನ್ನು ನಿಷೇಧಿಸುವ ಸಲುವಾಗಿ ಈ ನಡೆ ಎನ್ನಲಾಗಿದೆ. ಏಪ್ರಿಲ್‌ನಿಂದ ಕಾನೂನು ಜಾರಿಗೆ ಬರಲಿದೆ. ಸೌದಿಯ ಕ್ಷೌರಿಕ ಅಂಗಡಿಗಳು, ಲಾಂಡ್ರಿಗಳು ಮತ್ತು ಬ್ಯೂಟಿ ಪಾರ್ಲರ್‌ಗಳು ಇನ್ನು ಮುಂದೆ ಡಿಜಿಟಲ್ ಆಗಲಿವೆ.

ಆನ್‌ಲೈನ್ ಪಾವತಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸುವ ಪ್ರಕ್ರಿಯೆಯು ಹಲವಾರು ಹಂತಗಳಲ್ಲಿ ಪೂರ್ಣಗೊಂಡಿದೆ. ಕ್ಷೌರಿಕ ಅಂಗಡಿಗಳು, ಲಾಂಡ್ರಿಗಳು ಮತ್ತು ಬ್ಯೂಟಿ ಪಾರ್ಲರ್‌ಗಳಲ್ಲಿ ಬೆನಾಮಿಯನ್ನು ತಡೆಗಟ್ಟುವ ರಾಷ್ಟ್ರೀಯ ಕಾರ್ಯಕ್ರಮದ ಮೂರನೇ ಹಂತವಾಗಿ ಆನ್‌ಲೈನ್ ಪಾವತಿಗಳನ್ನು ಕಡ್ಡಾಯಗೊಳಿಸುತ್ತಿವೆ.

ಆನ್‌ಲೈನ್ ಪಾವತಿಗಳನ್ನು ಹೆಚ್ಚು ಕಾರ್ಯಕ್ಷಮಗೊಳಿಸುವ ಉದ್ದೇಶದಿಂದ ದೇಶದ ಎಲ್ಲಾ ಸಣ್ಣ ಉದ್ಯಮಗಳಲ್ಲಿ ಆನ್‌ಲೈನ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿನಾಮಿ ತಡೆಗಟ್ಟುವಿಕೆ ರಾಷ್ಟ್ರೀಯ ಕಾರ್ಯಕ್ರಮವಾದ ಆನ್‌ಲೈನ್ ಪಾವತಿಗಳನ್ನು ವ್ಯಕ್ತಿಗಳು ನಡೆಸುವ ವ್ಯವಹಾರಗಳಿಗೂ ವಿಸ್ತರಿಸುವಂತೆ ಮಾಡುವ ಗುರಿ ಹೊಂದಿದೆ. ಹೊಸ ಕಾನೂನು ಜಾರಿಗೊಳಿಸುವ ಸಂಸ್ಥೆಗಳಿಗೆ ತಮ್ಮ ಆನ್‌ಲೈನ್ ವ್ಯವಸ್ಥೆಯನ್ನು ಸಜ್ಜುಗೊಳಿಸುವ ಸಲುವಾಗಿ ಏಪ್ರಿಲ್ ವರೆಗೆ ಅನುಮತಿ ನೀಡಲಾಗಿದೆ.

error: Content is protected !! Not allowed copy content from janadhvani.com