janadhvani

Kannada Online News Paper

ಶುಭಸುದ್ದಿ: ಸಣ್ಣ ಉದ್ಯಮಗಳಿಗೂ ‘ಲೆವಿ’ಯಲ್ಲಿ ವಿನಾಯಿತಿ

ರಿಯಾದ್: ಸೌದಿ ಅರೇಬಿಯಾದಲ್ಲಿ ವ್ಯವಸಾಯ ವಲಯದ ಬಳಿಕ ಇತರ ವಲಯಗಳಿಗೂ ಲೆವಿ ರಿಯಾಯಿತಿ ಘೋಷಿಸಲಾಗಿದೆ. ಸಣ್ಣ ಉದ್ಯಮಗಳಿಗೂ ಜನವರಿ 1ರಿಂದ ಲೆವಿ ವಿನಾಯಿತಿ ನೀಡಲಾಗುವುದು ಎಂದು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿದೆ.

ಐದಕ್ಕಿಂತ ಹೆಚ್ಚು ನೌಕರರಿಲ್ಲದ ಸಣ್ಣ ಸಂಸ್ಥೆಗಳಿಗೆ ಲೆವಿ ವಿನಾಯಿತಿ ನೀಡಲಾಗುತ್ತಿದೆ. ಒಂಬತ್ತು ಅಥವಾ ಅದಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕಂಪೆನಿಗಳಲ್ಲಿ ನಾಲ್ಕು ಮಂದಿ ಉದ್ಯೋಗಿಗಳಿಗೆ ರಿಯಾಯಿತಿ ಸಿಗಲಿದೆ. ಆದರೆ, ಸಂಸ್ಥೆಯ ಮಾಲೀಕರಾಗಿರುವ ಸ್ವದೇಶಿಯು ಅದೇ ಕಂಪನಿಯಲ್ಲಿ ಪೂರ್ಣ ಸಮಯದ ಉದ್ಯೋಗಿಯಾಗಿಯಾಗಿರಬೇಕು ಎಂಬ ಷರತ್ತು ಇದೆ.ಈ ಹಿಂದೆ ಅಂತಹ ಸಂಸ್ಥೆಗಳಿಗೆ ಲೆವಿ ವಿನಾಯಿತಿ ನೀಡಲಾಗುತ್ತಿತ್ತು, ಆದರೆ ಐದು ವರ್ಷಗಳ ನಂತರ ಅದನ್ನು ಕೊನೆಗೊಳಿಸಲಾಗಿತ್ತು.

ತಾತ್ಕಾಲಿಕ ಒಪ್ಪಂದದ ಮೇಲೆ ಕಾರ್ಯಾಚರಿಸುವ ಗೃಹ ಕಾರ್ಮಿಕರನ್ನು ವರ್ಗಾಯಿಸುವ ನೇಮಕಾತಿ ಸಂಸ್ಥೆಗಳ ನೌಕರರನ್ನು ಸಹ ತೆರಿಗೆಯಿಂದ ಮುಕ್ತಗೊಳಿಸಲಾಗಿದೆ. ಇದಲ್ಲದೆ, ಗಲ್ಫ್ ನಾಗರಿಕರು, ಸ್ಥಳೀಯ ನಾಗರಿಕರ ವಿದೇಶೀಯರಾದ ಪತ್ನಿಯರು, ಗಂಡಂದಿರು ಮತ್ತು ವಿದೇಶಿ ಪ್ರಜೆಗಳ ಮೂಲಕ ಸೌದಿ ಮಹಿಳೆಗೆ ಜನಿಸಿದ ಮಕ್ಕಳು ತೆರಿಗೆ ವಿನಾಯಿತಿಗೆ ಅರ್ಹರಾಗಿದ್ದಾರೆ. ಹೊಸ ರಿಯಾಯಿತಿ ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ತಿಳಿಸಿದೆ.

error: Content is protected !! Not allowed copy content from janadhvani.com