janadhvani

Kannada Online News Paper

ದೆಹಲಿಯಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ: SSF ಉಜಿರೆ ಸೆಕ್ಟರ್ ಖಂಡನೆ

ಉಜಿರೆ : ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ದೆಹಲಿಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದವರ ಮೇಲೆ ಕ್ರೂರವಾಗಿ ಹಿಂಸಚಾರ ನಡೆಸಿ ಅಮಾಯಕರ ಕೊಲೆ, ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ,ಮಸೀದಿ ಮನೆಗಳಿಗೆ ಬೆಂಕಿ ಹಾಕಿ ರಾಷ್ಟ್ರ ರಾಜದಾನಿಯನ್ನು ರಕ್ತಸಿಕ್ತಗೊಳಿಸಿದ ಫ್ಯಾಸಿಸ್ಡ್ ಶಕ್ತಿಯ ನಡೆಯನ್ನು SSF ಉಜಿರೆ ಸೆಕ್ಟರ್ ಖಂಡಿಸುತ್ತದೆ.

ಈ ಘಟನೆಗಳಿಗೆ ಪ್ರತ್ಯಕ್ಷವಾಗಿ ಸಹಕಾರ ನೀಡುತ್ತಿರುವ ಫ್ಯಾಸಿಸ್ಟ್ ಸರಕಾರಗಳ ದಮನೀಯ ಆಡಳಿತ ರೀತಿಯು ಸಂವಿಧಾನ ಅಳಿವಿಗೆ ಕಾರಣವಾಗುವುದು ಜಾತ್ಯತೀತ ರಾಷ್ಟ ಭಾರತದಲ್ಲಿ ಇದು ಅತ್ಯಂತ ಖೇದಕರ ಘಟನೆ ಎಂದು SSF ಉಜಿರೆ ಸೆಕ್ಟರ್ ಸಮಿತಿ ಅಭಿಪ್ರಾಯ ಪಟ್ಟಿದೆ.

ಸೆಕ್ಟರ್ ವ್ಯಾಪ್ತಿಯ ಎಲ್ಲಾ‌ ಕಾರ್ಯಕರ್ತರು ದಿಲ್ಲಿಯ ಹಿಂಸಾಚಾರ ಕೃತ್ಯವನ್ನು ಹಾಗೂ ಗಲಭೆಕೋರರಿಗೆ ಸಾಥ್ ನೀಡುತ್ತಿರುವ ಸರಕಾರದ ಅಡಳಿತ ವ್ಯವಸ್ಥೆಯನ್ನು ಸಾಧ್ಯವಾದ ರೀತಿಯಲ್ಲಿ ಶಾಂತಿಯುತವಾಗಿ ಖಂಡಿಸಬೇಕೆಂದು SSF ಉಜಿರೆ ಸೆಕ್ಟರ್ ಕರೆ ನೀಡಿದೆ.

SSF ಉಜಿರೆ ಸೆಕ್ಟರ್ ಮೀಡಿಯಾ

error: Content is protected !! Not allowed copy content from janadhvani.com