janadhvani

Kannada Online News Paper

ದೆಹಲಿ ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯ: ಎಸ್ ವೈ ಎಸ್ ರಾಜ್ಯ ಸಮಿತಿ ಖಂಡನೆ

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವರ ಮೇಲೆ ಕ್ರೂರ ಹಿಂಸಾಚಾರವನ್ನು ನಡೆಸಿ ನ್ಯಾಯಯುತ ಹೋರಾಟ ಗಳನ್ನು ಹತ್ತಿಕ್ಕಲು ನಡೆಸುವ ವಿಫಲ ಶ್ರಮ ವನ್ನು sys ರಾಜ್ಯ ಸಮಿತಿ ತೀವ್ರ ವಾಗಿ ಖಂಡಿಸುತ್ತದೆ.

ರಾಷ್ಟ್ರ ರಾಜಧಾನಿಯಲ್ಲಿ ಕಳೆದ ಎರಡು ಮೂರು ದಿನಗಳಲ್ಲಿ ಅಮಾಯಕರನ್ನು ಪತ್ತೆ ಹಚ್ಚಿ ಕೊಲೆ,ದೌರ್ಜನ್ಯ, ನಡೆಸುತ್ತಾ ಮಸೀದಿ, ಮನೆ,ವ್ಯಾಪಾರ ಕೇಂದ್ರಗಳನ್ನು ಬೆಂಕಿಗಾಹುತಿ ಗೊಳಿಸಿ ಯುದ್ಧ ಭೂಮಿಯನ್ನಾಗಿ ಪರಿವರ್ತಿಸುತ್ತಿರುವ ಸಮಾಜ ಘಾತುಕ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳನ್ನು ಹದ್ದು ಬಸ್ತಿನಲ್ಲಿಡಲು ಸರಕಾರ ಮುಂದಾಗ ಬೇಕೆಂದು ಎಸ್ ವೈ ಎಸ್ ಆಗ್ರಹಿಸುತ್ತದೆ.

ಇಂಟಿಲ್ಜನ್ಸ್ ಅಧಿಕಾರಿ, ಪೊಲೀಸ್ ಅಧಿಕಾರಿ, ಸೇರಿದಂತೆ ಸುಮಾರು 38 ಕ್ಕೂ ಅಧಿಕ ಅಮಾಯಕರು ಸಾವಿಗೀಡಾಗಿದ್ದು ಘಟನೆಯ ತೀವ್ರತೆಯನ್ನು ಊಹಿಸಬಹುದಾಗಿದೆ.

ಹಿಂಸಾಚಾರ ವನ್ನು ಹತ್ತಿಕ್ಕಬೇಕಾದವರ ನಿಷ್ಕ್ರಿಯತೆ,ಸಾರ್ವಜನಿಕ ಸೇವೆಯಲ್ಲಿ ಗುರುತಿಸಬೇಕಾದವರು ಹಿಂಸೆಗೆ ಆಹ್ವಾನ ನೀಡುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಎಸ್ ವೈ ಎಸ್ ಅಭಿಪ್ರಾಯ ಪಟ್ಟಿದೆ.

ದೆಹಲಿಯ ಹೈಕೋರ್ಟ್ ರಾಜ್ಯ ದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅವಲೋಕಿಸಲು ರಾತ್ರಿ ವಿಶೇಷ ತುರ್ತು ಸಿಟ್ಟಿಂಗ್ ನಡೆಸಿದ್ದು ರಾಷ್ಟ್ರ ಪ್ರೇಮಿಗಳಲ್ಲಿ ಆಶಾಭಾವನೆಯನ್ನು ಮೂಡಿಸಿದೆ ಎಂದು ಎಸ್ ವೈ ಎಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಸಭೆಯಲ್ಲಿ ಎಸ್ ವೈ ಎಸ್ ರಾಜ್ಯಾಧ್ಯಕ್ಷ ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ, ಪ್ರಧಾನ ಕಾರ್ಯದರ್ಶಿ ಡಾ
ಎಮ್ಮೆಸ್ಸೆಎಮ್ ಝೈನಿ ಕಾಮಿಲ್ ,ಕೋಶಾಧಿಕಾರಿ ಅಬ್ದುಲ್ ಹಕೀಂ ಕೊಡ್ಲಿಪೇಟೆ
ಮಾಧ್ಯಮ ಕಾರ್ಯದರ್ಶಿ ಹಫೀಳ್ ಸಅದಿ ಕೊಡಗು ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದರು.

error: Content is protected !! Not allowed copy content from janadhvani.com