ಭಯೋತ್ಪಾದನಾ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಸಂಪೂರ್ಣ ಬೆಂಬಲ- ಸೌದಿ ಅರೇಬಿಯಾ  

ನವದೆಹಲಿ(ಜನಧ್ವನಿ):ಭಯೋತ್ಪಾದನಾ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಸಹಕಾರವನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಭಾರತದಲ್ಲಿರುವ ಸೌದಿ ರಾಯಭಾರಿ ಸ‌ಊದ್ ಅಸ್ಸಾದಿ ತಿಳಿಸಿದ್ದಾರೆ. ವಿಷನ್ 2030 ಪದ್ದತಿಯ ಮೂಲಕ ನಿರ್ಣಾಯಕ ಆರ್ಥಿಕ ಸಹಕಾರದ ಲಕ್ಷ್ಯವನ್ನು ಕೂಡ ನಿರೀಕ್ಷಿಸಲಾಗಿದೆ ಎಂದು ರಾಯಭಾರಿ ತಿಳಿಸಿದ್ದಾರೆ.

ಜನಾದಿರಿಯಾ ಪಾರಂಪರಿಕ ಉತ್ಸವದಲ್ಲಿ ಭಾರತವನ್ನು ಅತಿಥಿ ರಾಷ್ಟ್ರವಾಗಿ ಸ್ವೀಕರಿಸಿದ ನಂತರ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು. ಜನಾದಿರಿಯಾ ಉತ್ಸವದಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸೌದಿ ದೊರೆಯೊಂದಿಗೆ ಮಾತುಕತೆ ನಡೆಸಿದ್ದರು.

ಭಾರತ ಮತ್ತು ಸೌದಿ ನಡುವೆ ವಿವಿಧ ವಲಯಗಳಲ್ಲಿನ ಸಹಕಾರವನ್ನು ಇನ್ನಷ್ಟು ಸದೃಢಗೊಳಿಸಲಾಗುವುದು ಎಂದು ಹೇಳಿದ ಅವರು, ಭಯೋತ್ಪಾದನೆಯ ವಿರುದ್ಧ ಹೋರಾಟ ಮತ್ತು ಮೃದು ಧೋರಣೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಎರಡೂ ದೇಶಗಳ ನಡುವೆ ಪರಸ್ಪರ ಸಹಕಾರ ಅತಿ ಮುಖ್ಯವಾಗಿದೆ.
70 ವರ್ಷಗಳ ಸುದೀರ್ಘ ಸೌಹಾರ್ದವು ಸೌದಿ ಮತ್ತು ಭಾರತದ ನಡೆವೆ ಇದೆ. ವಾಣಿಜ್ಯ ರಂಗದ ಹೊರತಾಗಿ ಆರ್ಥಿಕ, ಸಾಂಸ್ಕೃತಿಕ, ಮಾಧ್ಯಮ, ಕಾರ್ಮಿಕ ರಂಗದಲ್ಲೂ ಎರಡೂ ರಾಜ್ಯಗಳ ನಡುವೆ ಒಳ್ಳೆಯ ಸಂಬಂಧವಿದೆ.

ವಾಣಿಜ್ಯ ರಂಗದಲ್ಲಿನ ಸಹಕಾರದಲ್ಲಿ ನಾಲ್ಕನೇ ಸ್ಥಾನವನ್ನು ಭಾರತ ಅಲಂಕರಿಸಿದೆ. ತೈಲ, ಗ್ಯಾಸ್ ಮುಂತಾದವುಗಳಿಗೆ ಭಾರತವು  ಅವಲಂಭಿಸುವ ರಾಷ್ಟ್ರವಾಗಿದೆ ಸೌದಿ ಅರೇಬಿಯಾ. 30 ಲಕ್ಷಕ್ಕಿಂತಲೂ ಹೆಚ್ಚು ಭಾರತೀಯರು ಸೌದಿ ಅರೇಬಿಯಾದಲ್ಲಿ ದುಡಿಯುತ್ತಿದ್ದಾರೆ. ಎರಡೂ ದೇಶಗಳ ನಡುವಿನ ಸಂಬಂಧ ಬೆಳೆಯುವಲ್ಲಿ ಈ ಕಾರ್ಮಿಕರ ಕೊಡುಗೆ ಕೂಡ ಇದೆ ಎಂದು ರಾಯಭಾರಿ ತಿಳಿಸಿದ್ದಾರೆ.
ಜನಾದಿರಿಯಾ ಉತ್ಸವದಲ್ಲಿ ಈ ವರ್ಷ ಭಾರತವು ಅತಿಥಿ ದೇಶವಾಗಿ ಸಂಬಂಧಿಸಿದ್ದು ಎರಡೂ ದೇಶಗಳ ನಡುವಿನ ಸುದೀರ್ಘ ಸಂಬಂಧದ ದ್ಯೋತಕವಾಗಿದೆ ಎಂದು ಅವರು ನುಡಿದರು.

Leave a Reply

Your email address will not be published. Required fields are marked *

error: Content is protected !!