janadhvani

Kannada Online News Paper

ಎಕ್ಸಿಟ್- ರೀ ಎಂಟ್ರೀ ವೀಸಾವನ್ನು ಪ್ರಾಯೋಜಕರ ಅನುಮತಿಯಿಲ್ಲದೆ ನೀಡುವ ಬಗ್ಗೆ ಚರ್ಚೆ

ರಿಯಾದ್: ವಿದೇಶಿ ಕಾರ್ಮಿಕರ ಪ್ರಾಯೋಜಕತ್ವ ಬದಲಾವಣೆ ಮತ್ತು ರೀ ಎಂಟ್ರೀ- ಎಕ್ಸಿಟ್ ವೀಸಾ ಕಾರ್ಯವಿಧಾನಗಳನ್ನು ಪ್ರಾಯೋಜಕರ ಅನುಮತಿಯಿಲ್ಲದೆ ನೀಡುವ ಬಗ್ಗೆ ಸೌದಿ ಕಾರ್ಮಿಕ ಸಚಿವಾಲಯ ಚರ್ಚಿಸಿದೆ.

ಖಾಸಗಿ ವಲಯದ ಪ್ರತಿನಿಧಿಗಳು ಮತ್ತು ಉದ್ಯಮ ವಲಯದ ಮುಖಂಡರು ಚರ್ಚೆಯಲ್ಲಿ ಭಾಗವಹಿಸಿದ್ದರು. ಚರ್ಚಿಸಿದ ವಿಷಯಗಳ ಅನುಷ್ಠಾನದ ಕುರಿತು ಕಾರ್ಮಿಕ ಸಚಿವಾಲಯವು ವರದಿಯನ್ನು ಸಿದ್ಧಪಡಿಸಲಿದೆ.

ಕಿಂಗ್ ಅಬ್ದುಲ್ ಅಝೀಝ್ ರಾಷ್ಟ್ರೀಯ ಸಂವಾದ ಕೇಂದ್ರದಲ್ಲಿ ಮಾತುಕತೆ ನಡೆಯಿತು. ದೇಶದ ಉದ್ಯೋಗವನ್ನು ಸುಧಾರಿಸುವುದು ಚರ್ಚೆಯ ಮುಖ್ಯ ಉದ್ದೇಶವಾಗಿತ್ತು. ಅದೇ ಸಮಯದಲ್ಲಿ, ವಿದೇಶದಲ್ಲಿ ಸೌದಿಯ ಖ್ಯಾತಿಯನ್ನು ಉಳಿಸಲು ಸಹಾಯ ಮಾಡಬಲ್ಲ ಅನೇಕ ಪ್ರಸ್ತಾಪಗಳು ಚರ್ಚಿಸಲ್ಪಟ್ಟಿದೆ.

ಉದ್ಯೋಗದಾತನ ಅನುಮತಿಯಿಲ್ಲದೆ ಪ್ರಾಯೋಜಕತ್ವ ಬದಲಾವಣೆ ಎಕ್ಸಿಟ್- ರೀ ಎಂಟ್ರಿ ವೀಸಾ ಕಾರ್ಯವಿಧಾನಗಳು ಚರ್ಚಿಸಿದ ಮುಖ್ಯ ವಿಷಯಗಳಾಗಿದ್ದವು. ಉದ್ಯೋಗಿಯು ಸೌದಿಗೆ ಬಂದು ಒಂದು ವರ್ಷದ ನಂತರ ಅಥವಾ ಉದ್ಯೋಗದ ಪೂರ್ವನಿರ್ಧರಿತ ಅವಧಿಯ ನಂತರ ಹೊಸ ಉದ್ಯೋಗದಾತನ ವಿಸಾಗೆ ವರ್ಗಾವಣೆಗೊಳ್ಳಲು ಅನುಮತಿ ನೀಡುವ ಪ್ರಸ್ತಾಪದ ಬಗ್ಗೆಯೂ ಚರ್ಚೆ ನಡೆದವು.

ಅಂತೆಯೇ, ವಿದೇಶಿ ಕಾರ್ಮಿಕರು ಬಯಸಿದಾಗ ಮರು ಪ್ರವೇಶ ವೀಸಾದಲ್ಲಿ ಹೋಗಲು ಸಾಧ್ಯವಾಗಬೇಕು. ದೇಶವನ್ನು ತೊರೆದವರು ನಿಗದಿತ ಸಮಯದೊಳಗೆ ಹಿಂತಿರುಗದಿದ್ದರೆ ಐದು ವರ್ಷಗಳ ಕಾಲ ಬೇರೆ ಉದ್ಯೋಗದಾತರ ಅಡಿಯಲ್ಲಿ ಬರಲು ಅನುಮತಿಸಬಾರದು ಎಂಬದು ನಿಬಂಧನೆ ಯಾಗಬೇಕು. ವೃತ್ತಿಪರ ಪರಿಗಣನೆಯಿಲ್ಲದೆ ಎಲ್ಲರಿಗೂ ಅವಕಾಶ ನೀಡಬೇಕೆಂದು ಸೂಚಿಸಲಾಯಿತು.

ಆದರೆ ನಿರ್ಗಮನ ವೀಸಾದಲ್ಲಿ ಹೋಗುವ ವ್ಯಕ್ತಿಯು ಉದ್ಯೋಗದಾತರ ಅನುಮತಿಯನ್ನು ಪಡೆಯಬೇಕು ಎಂಬ ಅಭಿಪ್ರಾಯ ಕೇಳಿಬಂತು. ಒಪ್ಪಂದದ ಅವಧಿ ಮುಗಿಯುವ ಮೊದಲು ಎಕ್ಸಿಟ್ ನಲ್ಲಿ ಹೋದವರಿಗೆ ಹೊಸ ಉದ್ಯೋಗದಾತರ ಅಡಿಯಲ್ಲಿ ಐದು ವರ್ಷಗಳ ಕಾಲ ಮರಳುವುದು ನಿರ್ಬಂಧಿಸಬೇಕು ಎಂದು ಮಾತುಕತೆಯಲ್ಲಿ ಭಾಗವಹಿಸಿದವರು ತಿಳಿಸಿದರು.

ದೇಶದಲ್ಲಿ ನೆಲೆಸಿರುವ ಕಾರ್ಮಿಕರನ್ನು ಸಕ್ರಿಯವಾಗಿ ಉಪಯೋಗಿಸಿಕೊಳ್ಳುವುದು, ನೇಮಕಾತಿಯನ್ನು ಕಡಿಮೆ ಮಾಡುವುದು, ವಿದೇಶದಲ್ಲಿ ಸೌದಿಯ ಖ್ಯಾತಿಯನ್ನು ಹೆಚ್ಚಿಸುವುದು ಮತ್ತು ಹಕ್ಕುಗಳ ಉಲ್ಲಂಘನೆಯನ್ನು ಕಡಿಮೆ ಮಾಡುವುದು ಹೊಸ ಮಾತುಕತೆ ಮತ್ತು ಪ್ರಸ್ತಾಪಗಳ ಉದ್ದೇಶವಾಗಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

error: Content is protected !! Not allowed copy content from janadhvani.com