ಮಹಿಳೆಯರು ಪರ್ದಾ ಧರಿಸುವಂತೆ ಒತ್ತಡ ಸಲ್ಲದು-ಸೌದಿ ಪಂಡಿತ

ರಿಯಾದ್(ಜನಧ್ವನಿ ವಾರ್ತೆ): ಸೌದಿ ಅರೇಬಿಯಾದಲ್ಲಿ ಮಹಿಳೆಯರು ಫರ್ಧಾ ಮಾತ್ರ ಧರಿಸಬೇಕು ಎನ್ನುವುದು ತರವಲ್ಲ. ಔಚಿತ್ಯವಾದ ವಸ್ತ್ರಗಳನ್ನು ಧರಿಸಲು ಇಸ್ಲಾಂ ಅನುಮತಿ ನೀಡಿದೆ ಮತ್ತು ಯಾವುದೇ ಯೋಗ್ಯ ಉಡುಗೆಯನ್ನು ಮಹಿಳೆಯರಿಂದ ನಿಷೇಧಿಸಲಾಗುವುದಿಲ್ಲ ಎಂದು ಸೌದಿ ರಾಯಲ್ ನ್ಯಾಯಾಲಯದ ಉಪದೇಶಕ, ಉನ್ನತ ಪಂಡಿತಸಭೆಯ ಸದಸ್ಯರೂ ಆದ ಅಬ್ದುಲ್ಲಾ ಅಲ್-ಮುತ್ಲಕ್ ಹೇಳಿದರು.

ಮುಸ್ಲಿಂ ಜಗತ್ತಿನಲ್ಲಿ ಸುಮಾರು 90 ಶೇಕಡಾದಷ್ಟು ಮುಸ್ಲಿಂ ಮಹಿಳೆಯರು ಫರ್ಧಾ ಧರಿಸುವುದಿಲ್ಲ. ಆದ್ದರಿಂದ ಮಹಿಳೆಯರಿಗೆ ಫರ್ಧಾ ಧರಿಸಲು ಒತ್ತಡ ನೀಡಬಾರದು. ಸೌದಿ ಅರೇಬಿಯಾ ಮಹಿಳೆಯರು ಫರ್ಧಾ ಧರಿಸುವಂತೆ ಕಾನೂನು ರೂಪೀಕರಿಸಿದೆ. ಇದರಲ್ಲಿ ಯಾವುದೇ ಬದಲಾವಣೆಯನ್ನು ತರುವ ಬಗ್ಗೆ ಸೌದಿ ಸರ್ಕಾರ ಇನ್ನೂ ನಿರ್ಧರಿಸಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಉನ್ನತ ಪಂಡಿತ ಸಭೆಯ ಸದಸ್ಯರೊಬ್ಬರು ಹೆಂಗಸರು ಫರ್ಧಾ ಧರಿಸುವಂತೆ ಒತ್ತಡ ಸಲ್ಲದು ಎಂದು ಹೇಳಿದ್ದಾರೆ.

ಕಳೆದ ತಿಂಗಳು ಸೌದಿ ಅರೇಬಿಯಾದಲ್ಲಿ ಫುಟ್ಬಾಲ್ ಕ್ರೀಡಾಂಗಣಕ್ಕೆ ಪ್ರವೇಶಿಸಲು ಮಹಿಳೆಯರಿಗೆ ಅನುಮತಿ ನೀಡಲಾಗಿತ್ತು. ರಿಯಾದ್ ನ್ಯಾಯಾಲಯಗಳಲ್ಲಿ ಮಹಿಳೆಯರು ಮುಖಾವರಣ ಧರಿಸದೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಇತ್ತೀಚೆಗೆ ನಿರ್ದೇಶನ ನೀಡಿದೆ.

One thought on “ಮಹಿಳೆಯರು ಪರ್ದಾ ಧರಿಸುವಂತೆ ಒತ್ತಡ ಸಲ್ಲದು-ಸೌದಿ ಪಂಡಿತ

Leave a Reply

Your email address will not be published. Required fields are marked *

error: Content is protected !!