ನೋಟು ನಿಷೇಧ ಐಡಿಯಾ ಆರ್‌ಬಿಐ ನದ್ದೋ, ಜೇಟ್ಲಿ ಅವರದ್ದೋ ಅಲ್ಲ!

ಕಲಬುರಗಿ:ದೇಶದಲ್ಲಿ ಪ್ರಧಾನಿ ಮೋದಿ ಸರ್ಕಾರ ನೋಟು ಅಮಾನ್ಯಗೊಳಿಸುವ ನಿರ್ಧಾರ ಕೈಗೊಳ್ಳಲು ಆರ್ ಬಿಐ ಅಥವಾ ಹಣಕಾಸು ಸಚಿವ ಅರುನ್ ಜೇಟ್ಲಿ ಸಲಹೆ ಕಾರಣವಾಗಿರಲಿಲ್ಲ. ಇದೆಲ್ಲಾ ಆರ್ ಎಸ್ಎಸ್ ನ ಐಡಿಯಾವಾಗಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂದಿ ಆರೋಪಿಸಿದ್ದಾರೆ.

ನಗರದ ಎಚ್‌.ಕೆ.ಸಭಾಂಗಣದಲ್ಲಿ  ಮಂಗಳವಾರ ವ್ಯಾಪಾರೋದ್ಯಮಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ರಾಹುಲ್‌ ಈ ಹೇಳಿಕೆ ನೀಡಿದ್ದಾರೆ. ‘ಕೇಂದ್ರ ಸರಕಾರ ಆರ್‌ಎಸ್‌ಎಸ್‌ ಸಿದ್ದಾಂತದಂತೆ ನಡೆಯುತ್ತಿದ್ದು ಜನರ ಆಶಯದಂತೆ ನಡೆಯುತ್ತಿಲ್ಲ’ ಎಂದು ಆರೋಪಿಸಿದರು.

‘ಬಿಜೆಪಿಯವರು ದೇಶಾದ್ಯಂತ ಆರ್‌ಎಸ್‌ಎಸ್‌ ವಿಚಾರ ಗಳನ್ನು  ಜಾರಿ ಗೊಳಿಸುತ್ತಿದ್ದಾರೆ’ ಎಂದು ಕಿಡಿ ಕಾರಿದರು. ‘ಯಾವುದೇ ಸಾಧಕ ಬಾಧಕಗಳ ಬಗ್ಗೆ ಯೋಚಿಸದೆ ಆರ್‌ಎಸ್‌ಎಸ್‌ ಸೂಚನೆಯಂತೆ ನೋಟ್‌ ಬ್ಯಾನ್‌ ಮಾಡಲಾಯಿತು. ಇದರಿಂದಾಗಿ ದೇಶದ ಸಾಕಷ್ಟು ಜನರು ತೊಂದರೆ ಅನುಭವಿಸಬೇಕಾಯಿತು’ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!