janadhvani

Kannada Online News Paper

ಸೌದಿ: ಕ್ರಿಮಿನಲ್ ಗಳನ್ನು ಪತ್ತೆಹಚ್ಚಲು ಸೌದಿ ಪೊಲೀಸರಿಗೆ ವಿಶೇಷ ವಾಹನ

ರಿಯಾದ್: ಸೌದಿ ಅರೇಬಿಯಾದಲ್ಲಿ, ಅಪರಾಧಿಗಳನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ವಾಹನವನ್ನು ಹೊರತಂದಿದ್ದಾರೆ. ಸುರಕ್ಷತಾ ವಿಭಾಗದ ಕಾರ್ಯಾಚರಣೆಗಾಗಿ ಉನ್ನತ ತಾಂತ್ರಿಕತೆಯ ಹಿನ್ನೆಲೆಯಲ್ಲಿ ಕಾರ್ಯಾಚರಿಸುವ ವಾಹನಗಳನ್ನು ಬಿಡುಗಡೆ ಮಾಡಲಾಗಿದೆ.

ಈ ಹಿಂದೆ ಸೌದಿ ಗಡಿ ಭಾಗದಲ್ಲಿ ಮದ್ಯ ಮತ್ತು ಮಾದಕವಸ್ತು ಕಳ್ಳಸಾಗಣೆ ವಾಹನಗಳನ್ನು ಪತ್ತೆ ಹಚ್ಚಲು ವಿಶೇಷ ಉಪಕರಣಗಳನ್ನು ಅಳವಡಿಸಲಾಗಿತ್ತು. ಇದೇ ರೀತಿಯ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಭದ್ರತಾ ವಾಹನಗಳು ಕಾರ್ಯಾಚರಿಸಲಿದೆ. ಇದು ಸೌದಿಯಲ್ಲಿ ವಿವಿಧ ಕ್ರಿಮಿನಲ್ ಪ್ರಕರಣಗಳನ್ನು ಪತ್ತೆ ಹಚ್ಚಲು ಮತ್ತು ವಿಚಾರಣೆ ನಡೆಸಲು ಅನುವು ಮಾಡಿಕೊಡಲಿದೆ ಎಂದು ಪೊಲೀಸರು ಹೇಳುತ್ತಾರೆ.

ಈ ವಾಹನಗಳು ಆನ್‌ಲೈನ್ ಸಂಪರ್ಕ ಯಂತ್ರಗಳನ್ನು ಹೊಂದಿದ್ದು, ಆ ಮೂಲಕ ರಾಷ್ಟ್ರೀಯ ಮಾಹಿತಿ ಕೇಂದ್ರವನ್ನು ಸಂಪರ್ಕಿಸಲಾಗಿದೆ. ವಿಮಾನ ನಿಲ್ದಾಣಗಳ ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ ಈಗಾಗಲೇ ಬೆರಳಚ್ಚು ಮತ್ತು ಕಣ್ಣಿನ ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ.

ಪರಿಣಾಮವಾಗಿ, ಪೊಲೀಸರಿಗೆ ಯಂತ್ರದ ಮೂಲಕ ವಾಹನದ ವಿವರಗಳನ್ನು ಯಥಾ ಸಮಯದಲ್ಲಿ ಟ್ರ್ಯಾಕ್ ಮಾಡಲು ಸಾಧ್ಯವಾಗಲಿದೆ.ರಾಷ್ಟ್ರೀಯ ಭದ್ರತೆಯ ಭಾಗವಾಗಿ ಹೊಸ ವಾಹನಗಳನ್ನು ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ, ಅಕ್ರಮ ಚಟುವಟಿಕೆಗಳಲ್ಲಿ ಸಿಕ್ಕಿಬಿದ್ದವರನ್ನು ಕೂಡಲೇ ವಶಪಡಿಸಿಕೊಳ್ಳುವುದು ಸಾಧ್ಯವಾಗಲಿದೆ ಎಂದು ಭದ್ರತಾ ಪಡೆಗಳ ನಿರೀಕ್ಷೆಯಾಗಿದೆ.

error: Content is protected !! Not allowed copy content from janadhvani.com