janadhvani

Kannada Online News Paper

ಸೌದಿ: ವೇತನ ನೀಡಲು ವಿಳಂಬಗೊಳಿಸುವ ಸಂಸ್ಥೆಗಳಿಗೆ ಭಾರೀ ದಂಡ

ರಿಯಾದ್: ತಮ್ಮ ಉದ್ಯೋಗಿಗಳಿಗೆ ಸಂಬಳ ಪಾವತಿಸಲು ವಿಳಂಬಗೊಳಿಸುವ ಸಂಸ್ಥೆಗಳಿಗೆ ಸೌದಿ ಅರೇಬಿಯಾದಲ್ಲಿ ಭಾರಿ ದಂಡ ವಿಧಿಸಲು ಪ್ರಾರಂಭಿಸಿವೆ. ಪ್ರತಿ ಕಾರ್ಮಿಕನ ಆಧಾರದ ಮೇಲೆ ದಂಡ ಲೆಕ್ಕಹಾಕಲಾಗುತ್ತದೆ. ಇಂತಹ ಕಂಪನಿಗಳಿಗೆ ಕೆಲವು ಸಮಯದವರೆಗೆ ಕೆಲವು ಸೇವೆಗಳನ್ನೂ ಸ್ಥಗಿತಗೊಳಿಸಲಾಗುತ್ತದೆ.

ದೇಶದಲ್ಲಿ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸುವ ಸಲುವಾಗಿ ಕಂಪನಿಗಳಿಗೆ ದಂಡ ವಿಧಿಸಲಾಗುತ್ತಿದೆ. ಆರು ತಿಂಗಳ ಹಿಂದೆ, ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಪರಿಷ್ಕೃತ ನಿಯಂತ್ರಣಕ್ಕೆ ಅನುಮೋದನೆ ನೀಡಿದ್ದು, ಆ ಪ್ರಕಾರ ಕಾರ್ಮಿಕ ಕಾನೂನು ಉಲ್ಲಂಘನೆಗಳಿಗೆ ಕಠಿಣ ದಂಡವನ್ನು ನೀಡಲಾತ್ತದೆ. ವೇತನವನ್ನು ವಿಳಂಬ ಮಾಡುವುದು, ಸೌದಿ ಕರೆನ್ಸಿಯ ಹೊರತಾಗಿ ಸಂಬಳವನ್ನು ಪಾವತಿಸುವುದು ಮತ್ತು ಸಂಬಳವನ್ನು ತಡೆದು ಹಿಡಿಯುವುದು ಮುಂತಾದ ಕಾರಣಗಳಿಗೆ ದಂಡ ವಿಧಿಸಲಾಗುತ್ತದೆ. ಒಬ್ಬ ಕಾರ್ಮಿಕನಿಗೆ 3,000 ರಿಯಾಲ್ ದಂಡ ವಿಧಿಸಲಾಗುತ್ತಿದೆ. ವಿಳಂಬಗೊಳಿಸಿರುವುದಾಗಿ ಕಂಡುಬರುವ ಕಂಪನಿಗಳ ಸೇವೆಗಳನ್ನು ಸಂಬಳ ಸರಿಯಾಗಿ ಪಾವತಿಸುವವರೆಗೆ ಸ್ಥಗಿತಗೊಳಿಸಲಾಗುತ್ತದೆ.

ಮೂರು ತಿಂಗಳು ವಿಳಂಬವಾದರೆ ಕಾರ್ಮಿಕ ಸಚಿವಾಲಯದ ಎಲ್ಲಾ ಸೇವೆಗಳನ್ನು ನಿರಾಕರಿಸಲಾಗುತ್ತದೆ. ದಂಡವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ನಿಧಿಗೆ ಪಾವತಿಸ ಬೇಕಾಗುತ್ತದೆ. ಮೂರು ತಿಂಗಳವರೆಗೆ ನಿರಂತರವಾಗಿ ಸಂಬಳ ಪಡೆಯದ ಕಾರ್ಮಿಕರ ಪ್ರಾಯೋಜಕತ್ವವನ್ನು ಉದ್ಯೋಗದಾತನ ಅನುಮತಿಯಿಲ್ಲದೆ ಮತ್ತೊಂದು ಪ್ರಾಯೋಜಕರಿಗೆ ವರ್ಗಾಯಿಸಲು ಸಾಧ್ಯವಿದ್ದು, ಇದು ಈ ಕಾನೂನಿನ ವಿಶೇಷತೆಯಾಗಿದೆ. ಪ್ರತಿ ಕಂಪನಿಯ ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಕಾನೂನಿನ ಉಲ್ಲಂಘನೆ ಕಂಡುಹಿಡಿಯಲಾಗುತ್ತದೆ.

error: Content is protected !! Not allowed copy content from janadhvani.com