janadhvani

Kannada Online News Paper

ಫೆ.24: ಸಅದಿಯ್ಯ ಗ್ರ್ಯಾಂಡ್ ಅಲುಮ್ನೀ ಸಂಗಮ- ಬಿ.ಸಿ. ರೋಡಿನಲ್ಲಿ

ಮಂಗಳೂರು: ಅವಿಭಜಿತ ದ.ಕ. ಮತ್ತು ಕಾಸರಗೋಡು ಜಿಲ್ಲೆಯ ಪ್ರತಿಷ್ಠಿತ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾಸಮುಚ್ಛಯ ಜಾಮಿಅಃ ಸ’ಅದಿಯ್ಯ ಅರಬಿಯ್ಯ ಇದರ ಪೂರ್ವ ವಿದ್ಯಾರ್ಥಿಗಳ ಮಹಾ ಸಂಗಮವು ಇದೇ ಬರುವ ಫೆ: 24 ಸೋಮವಾರ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿರುವ ಹಾಫಿಳ್ ತೌಸೀಫ್ ಸ’ಅದಿ ವೇದಿಕೆ, ಸಾಗರ್ ಆಡಿಟೋರಿಯಂ ನಲ್ಲಿ ನಡೆಯಲಿದೆ.

ಬೆಳಗ್ಗೆ 9:30 ಕ್ಕೆ ರಿಜಿಸ್ಟ್ರೇಶನ್ ಆರಂಭವಾಗಲಿದ್ದು 10 ಕ್ಕೆ ಸ’ಅದಿಯ್ಯ ಅಧ್ಯಕ್ಷ ಅಸ್ಸಯ್ಯಿದ್ ಕುಂಬೋಲ್ ತಂಙಳ್ ದುಆ ಗೈದು ಉದ್ಘಾಟಿಸಲಿದ್ದು, ತಾಜುಲ್ ಫುಖಹಾ ಬೇಕಲ್ ಉಸ್ತಾದ್ ಮುಖ್ಯ ಸಂದೇಶ ಭಾಷಣಗೈಯ್ಯಲಿದ್ದಾರೆ.
ಸಮಸ್ತ ಮುಶಾವರ ಸದಸ್ಯ ತ್ರಕರಿಪ್ಪೂರ್ ಮುಹಮ್ಮದ್ ಅಲೀ ಸಖಾಫಿ ಹಾಗೂ ಅರೆಬಿಕ್ ತಜ್ಞ ಉಬೈದುಲ್ಲಾಹಿ ಸ’ಅದಿ ಮುಖ್ಯ ತರಗತಿ ನಡೆಸಲಿದ್ದಾರೆ.

ಸ’ಅದಿಯ್ಯಾ ಪ್ರೊಫೆಸರ್ ಕೆ.ಪಿ.ಹುಸೈನ್ ಸ’ಅದಿ ಕೆ.ಸಿ.ರೋಡ್ ಯೋಜನೆ ಮಂಡಿಸಿ ಚರ್ಚೆಗೆ ನಾಯಕತ್ವ ವಹಿಸಲಿದ್ದು ಸ’ಅದಿಯ್ಯ ಪ್ರೊಫೆಸರ್ ಸ್ವಾಲಿಹ್ ಸ’ಅದಿ ಉಸ್ತಾದ್, ಸ’ಅದಿಯ್ಯ ಉರ್ದೂ ವಿಭಾಗದ ಮುಖ್ಯಸ್ಥ ಲತೀಫ್ ಸ’ಅದಿ ಕೊಟ್ಟಿಲ, ಆರ್ಟ್ಸ್ ಅಂಡ್ ಸೈನ್ಸ್ ಮುಖ್ಯಸ್ಥ ಶರಫುದ್ದೀನ್ ಸ’ಅದಿ, ಬೋರ್ಡಿಂಗ್ ಮುಖ್ಯಸ್ಥ ಪಲ್ಲಂಗೋಡ್ ಅಬ್ದುಲ್ ಖಾದರ್ ಮದನಿ, ವಳವೂರು ಸ’ಅದೀ ಉಸ್ತಾದ್, ಶಾಫೀ ಸ’ಅದಿ ಬೆಂಗಳೂರು, ಉಸ್ಮಾನ್ ಸ’ಅದಿ ಪಟ್ಟೋರಿ, ಮುಸ್ತಫಾ ಸ’ಅದಿ ಮೂಳೂರು, ಹಫೀಳ್ ಸ’ಅದಿ ಕೊಡಗು, ಜಬ್ಬಾರ್ ಸ’ಅದಿ ಶಿವಮೊಗ್ಗ, ಅಬ್ದುಲ್ಲ ಸ’ಅದಿ ಅಜ್ಜಾವರ ಚಿಕ್ಕಮಗಳೂರು ಮುಂತಾದವರು ಭಾಗವಹಿಸಲಿದ್ದಾರೆ.

ಅಧ್ಯಕ್ಷತೆ: ಅಶ್ರಫ್ ಸ’ಅದಿ ಮಲ್ಲೂರು (ಅಧ್ಯಕ್ಷರು M.U.S. ಕರ್ನಾಟಕ)
ಸ’ಅದಿಯ್ಯದ ಎಲ್ಲಾ ಪೂರ್ವ ವಿದ್ಯಾರ್ಥಿಗಳೂ (ಶರೀಅತ್, ಆರ್ಟ್ಸ್ ಮತ್ತು ಸಯನ್ಸ್ ಕಾಲೇಜು, ಕಾಮರ್ಸ್, ಹಿಫ್ಳ್, ಯತೀಂ ಖಾನ, ಬೋರ್ಡಿಂಗ್ ಸ್ಕೂಲ್ ಹಾಗೂ ಇತರ) ಕಡ್ಡಾಯವಾಗಿ ಭಾಗವಹಿಸಬೇಕೆಂದು ಸಅದಿಯ್ಯ
ಗ್ರ್ಯಾಂಡ್ ಅಲುಮ್ನಿ ಸಂಗಮ ನಿರ್ವಹಣಾ ಸಮಿತಿ ಕರ್ನಾಟಕ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com