janadhvani

Kannada Online News Paper

ಸೌದಿ: ಹಜ್‌ ಯಾತ್ರಾರ್ಥಿಗಳಿಗೆ ಒದಗಿಸಲಾಗುವ ಸೇವೆಗಳ ಮೌಲ್ಯಮಾಪನ ಸಭೆ

ಮಕ್ಕಾ: ಈ ವರ್ಷದ ಪವಿತ್ರ ಹಜ್‌ಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಹಜ್‌ಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಒದಗಿಸಲಾಗುವ ಸೇವೆಗಳ ಬಗ್ಗೆ ಮೌಲ್ಯಮಾಪನ ನಡೆಸುವ ಮೊದಲ ಸಭೆಯು ಸೌದಿ ಹಜ್ ಸಚಿವಾಲಯದ ಮೇಲ್ವಿಚಾರಣೆಯಲ್ಲಿ ಮಕ್ಕಾದಲ್ಲಿ ನಡೆಯಿತು.

ಈ ಸಭೆಯು ಕಳೆದ ವರ್ಷದ ಹಜ್ ಋತುವಿನಲ್ಲಿ ಪ್ರಮುಖ ವಿಷಯಗಳ ಪರಿಶೀಲನೆಯ ಭಾಗವಾಗಿತ್ತು. ಸೌದಿ ಹಜ್ ಸಚಿವಾಲಯದ ಕಾರ್ಯದರ್ಶಿ ಹುಸೈನ್ ಬಿನ್ ನಾಸರ್ ಅಲ್-ಶರೀಫ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಈ ಸಭೆಯಲ್ಲಿ, ಯಾತ್ರಾರ್ಥಿಗಳನ್ನು ಸ್ವೀಕರಿಸಲು ಮತ್ತು ತೀರ್ಥಯಾತ್ರಿಕರಿಗೆ ಅನುಕೂಲವಾಗುವಂತೆ ಪ್ರಯತ್ನಿಸುವ ಬಗ್ಗೆ, ಸಂಪೂರ್ಣ ತೀರ್ಥಯಾತ್ರಿಕರ ಸೇವೆಗಳನ್ನು ಸಂಯೋಜಿಸಲು ಆಧುನಿಕ ತಂತ್ರಜ್ಞಾನಗಳ ಬಳಕೆ ಮತ್ತು ಹಜ್ ಯೋಜನೆಗಳ ಯಶಸ್ಸಿನ ಬಗ್ಗೆ ಚರ್ಚೆ ನಡೆದವು.

ಮೊದಲ ಜಂಟಿ ಸಭೆಯಲ್ಲಿ, ಗೃಹ ಸಚಿವಾಲಯ, ಸಾರ್ವಜನಿಕ ಭದ್ರತೆ, ಆಡಳಿತ, ನಾಗರಿಕ ರಕ್ಷಣಾ, ಸೌಲಭ್ಯ ಭದ್ರತೆ, ವಿಶೇಷ ತುರ್ತು ಸೇವೆ, ಮಕ್ಕಾ ಭದ್ರತಾ ಪಡೆ, ಸಾಮಾನ್ಯ ಸಂಚಾರ ಇಲಾಖೆ, ಮಕ್ಕಾ ಗವರ್ನರೇಟ್, ಮಕ್ಕಾ ಅಭಿವೃದ್ಧಿ ಪ್ರಾಧಿಕಾರ, ಮಕ್ಕಾ ರಾಯಲ್ ಆಯೋಗ, ಹೋಲಿಯಾರ್ ಕ್ಯಾಪಿಟಲ್ ಸಂಸ್ಥೆ ಮತ್ತು ಹಜ್, ಉಮ್ರಾ ಸಂಸ್ಥೆಗಳು, ಸ್ಥಳೀಯ ಯಾತ್ರಿಕರ ಸಮನ್ವಯ ಮಂಡಳಿ ಮತ್ತಿತರ ಸಚಿವಾಲಯಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com