ಬಹರೈನ್ ಕೆ.ಸಿ.ಎಫ್ ಡೇ ಫೆಬ್ರವರಿ 16 ಕ್ಕೆ ಆಚರಣೆ

ಬಹರೈನ್ : ಮರುಭೂಮಿಯ ಮಣ್ಣಿನಲ್ಲಿ ಮರುಳಾಗಿ ದುಡಿಯುತ್ತಿರುವ ಕನ್ನಡಿಗರನ್ನು ಒಂದುಗೂಡಿಸಿ ಅವರ ಜೀವನದಲ್ಲಿ ನವ ಚೈತನ್ಯವನ್ನು ತಂದು ಒಳಿತಿನ ಹಾದಿಯಲ್ಲಿ ಜೀವನ ಮುನ್ನಡೆಸುವಂತೆ ಮಾಡಿದ ಪ್ರವಾಸಿಗರ ನೆಚ್ಚಿನ ಸಂಘಟನೆಯಾದ ಕೆಸಿಎಫ್ ಇದರ 5ನೇ ವರ್ಷಾಚರಣೆಯನ್ನು ನಡೆಸಲು ಜಿ.ಸಿ.ಸಿ ಯ ಎಲ್ಲಾ ರಾಷ್ಗಗಳ ಸಮಿತಿಯು ತುದಿಗಾಲಲ್ಲಿ ನಿಂತಿದೆ.

ಬಹರೈನ್ ಕೆ.ಸಿ.ಎಫ್ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಕೆ.ಸಿ.ಎಫ್ ಡೇ ಆಚರಿಸಲು ಸರ್ವ ಸಿದ್ಧತೆಯನ್ನು ನಡೆಸಿದೆ.

ಇದೇ ಬರುವ ತಾರೀಕು 16-02-2018 ನೇ ಶುಕ್ರವಾರ ಸಂಜೆ 4 ಗಂಟೆಗೆ ಸರಿಯಾಗಿ ಅನಾರತ್ ಹಾಲ್ ಹೂರ ಸಭಾಂಗಣದಲ್ಲಿ ನಡೆಯಲಿರುವ ಕೆ.ಸಿ.ಎಫ್ ಡೇ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕಾಗಿ ಸ್ವಾಗತ ಸಮಿತಿ ಚೇರ್ಮ್ಯಾನ್ ನಾಸಿರ್ ನಾಳ ಹಾಗೂ ಹನೀಫ್ ಗುರುವಾಯನಕೆರೆ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.

One thought on “ಬಹರೈನ್ ಕೆ.ಸಿ.ಎಫ್ ಡೇ ಫೆಬ್ರವರಿ 16 ಕ್ಕೆ ಆಚರಣೆ

Leave a Reply

Your email address will not be published. Required fields are marked *

error: Content is protected !!