janadhvani

Kannada Online News Paper

ಸೌದಿ ಅರೇಬಿಯಾದಲ್ಲಿ ವಾಟ್ಸ್ ಆ್ಯಪ್ ಕರೆ ಸೇವೆ ಶೀಘ್ರದಲ್ಲೇ ಜಾರಿಗೆ

ರಿಯಾದ್: ಸೌದಿ ಅರೇಬಿಯಾದಲ್ಲಿ ವಾಟ್ಸ್ ಆ್ಯಪ್ ಕರೆ ಸೇವೆಯನ್ನು ಮರುಜಾರಿಗೊಳಿಸಲಾಗುವುದು ಎಂದು ಸೌದಿ ಸಂವಹನ ಪ್ರಾಧಿಕಾರ ಹೇಳಿದೆ. ಈ ಸೇವೆಯ ಅನುಷ್ಠಾನಕ್ಕೆ ಸಂಬಂಧಿಸಿದ ಕಾರ್ಯವಿಧಾನಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಸೌದಿಯಲ್ಲಿ ಅಂತರ್ಜಾಲದ ವೇಗವನ್ನು ಹೆಚ್ಚಿಸಲಾಗಿದೆ ಎಂದು ಅಥಾರಿಟಿ ವಕ್ತಾರ ತಿಳಿಸಿದ್ದಾರೆ.

ಈ ಹಿಂದೆ, ಭದ್ರತಾ ಕಾಳಜಿ ಮತ್ತು ಟೆಲಿಕಾಂ ಕಂಪನಿಗಳ ಕೋರಿಕೆಗಳಿಗೆ ಅನುಗುಣವಾಗಿ ಸೌದಿಯಲ್ಲಿ ವಾಟ್ಸಾಪ್ ಕರೆಗಳನ್ನು ನಿಷೇಧಿಸಲಾಗಿತ್ತು. ಆದರೆ ಐಎಂಒ ಸೇರಿದಂತೆ ಆ್ಯಪ್‌ಗಳ ಮೂಲಕ ಸೌದಿ ಯಲ್ಲಿ ಆನ್‌ಲೈನ್ ಕರೆಗಳನ್ನು ಲಭ್ಯಗೊಳಿಸಲಾಗಿದ್ದವು. ವಾಟ್ಸ್ಆ್ಯಪ್ ಕರೆ ಸೇವೆಯನ್ನು ಒದಗಿಸುವ ಮೊದಲು ಕೆಲವು ಕಾರ್ಯವಿಧಾನಗಳನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಸೌದಿ ಸಂವಹನ ಪ್ರಾಧಿಕಾರ ಪ್ರಕಟಿಸಿದ್ದು, ಆ ಬಗ್ಗೆ ಪ್ರಾಧಿಕಾರ ವ್ಯಕ್ತಪಡಿಸಿಲ್ಲ.

ವಾಟ್ಸ್ಆ್ಯಪ್ ಸೇರಿದಂತೆ ಆನ್‌ಲೈನ್ ಕರೆ ಸೇವೆಗಳನ್ನು ಶೀಘ್ರದಲ್ಲೇ ಜಾರೊಗೊಳಿಸಲಾಗುವುದು ಎಂದು ಸಂವಹನ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕ ನಿರ್ದೇಶಕ ಅಲಿ ಅಲ್-ಮುತೈರಿ ತಿಳಿಸಿದ್ದಾರೆ. ಅವರು ಇದನ್ನು ಸೌದಿ ಸ್ಥಳೀಯ ಚಾನೆಲ್ ಮೂಲಕ ದೃಢ ಪಡಿಸಿದರು.

error: Content is protected !! Not allowed copy content from janadhvani.com