janadhvani

Kannada Online News Paper

60 ದಾಟಿದವರ ಇಖಾಮಾ ನವೀಕರಿಸುವುದಿಲ್ಲ- ಇದು ನಿಜವೇ?

ಕುವೈತ್ ಸಿಟಿ: 60 ವರ್ಷಕ್ಕಿಂತ ಮೇಲ್ಪಟ್ಟ ಕೌಶಲ್ಯರಹಿತ ಕಾರ್ಮಿಕರ ನಿವಾಸ ಪರವಾಣಿಗೆ(ಇಖಾಮ) ನವೀಕರಿಸುವುದಿಲ್ಲ ಎಂಬುದಾಗಿ ಕುವೈತ್ ಸರ್ಕಾರದ ಮಾನವ ಸಂಪನ್ಮೂಲ ಸಮಿತಿಯ ನಿರ್ಧಾರದಲ್ಲಿ ಅಸ್ಪಷ್ಪತೆ.

ಪ್ರಮುಖ ಅರಬ್ ದಿನಪತ್ರಿಕೆ ‘ಅಲ್- ಸಿಯಾಸ’ ಸರಕಾರದ ಮೂಲಗಳನ್ನು ಉಲ್ಲೇಖಿಸಿ ಈ ಸುದ್ದಿಯನ್ನು ಪ್ರಕಟಿಸಿದೆ. ಆದರೆ, ಈವರೆಗೆ ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಮಾನವ ಸಂಪನ್ಮೂಲ ಸಮಿತಿಯ ವಕ್ತಾರ ಅಝೀಲ್ ಅಲ್ ಮೊಸಾಯಿದ್ ಹೇಳಿದ್ದಾರೆ ಎಂದು ಕುವೈತ್ ಟೈಮ್ಸ್ ವರದಿ ಮಾಡಿದೆ.

ಜನಸಂಖ್ಯೆಯ ಅಸಮತೋಲನವನ್ನು ಪರಿಹರಿಸಲು ಆರ್ಟಿಕಲ್ 18 ವೀಸಾಗಳಲ್ಲಿ ಕೆಲಸ ಮಾಡುವ 60 ವರ್ಷಕ್ಕಿಂತ ಮೇಲ್ಪಟ್ಟ ಕೌಶಲ್ಯರಹಿತ ಕಾರ್ಮಿಕರಿಗೆ ವಸತಿ ನವೀಕರಣವನ್ನು ನಿಷೇಧಿಸುವ ಪ್ರಸ್ತಾಪಗಳು ಈ ಹಿಂದೆ ಕೇಳಿ ಬಂದಿದ್ದವು. ಆದರೆ ವಿವಿಧ ಕಾರಣಗಳಿಂದಾಗಿ ಈ ಪ್ರಸ್ತಾಪವನ್ನು ಜಾರಿಗೆ ತರಲು ಸರಕಾರಕ್ಕೆ ಸಾಧ್ಯವಾಗಿರಲಿಲ್ಲ. ಏತನ್ಮಧ್ಯೆ, ಈ ವರ್ಗದ ಕಾರ್ಮಿಕರ ನವೀಕರಣ ವನ್ನು ಯಾವುದೇ ಅಡೆತಡೆಯಿಲ್ಲದೆ ಮಾಡಲಾಗುತ್ತಿದೆ ಎಂದು ಪ್ರಮುಖ ಸಂಸ್ಥೆಗಳ ಮೂಲಗಳು ಬಹಿರಂಗಪಡಿಸಿದೆ.

error: Content is protected !! Not allowed copy content from janadhvani.com