janadhvani

Kannada Online News Paper

ಸೌದಿ ರಾಜಧಾನಿಯ ಚಹರೆಯನ್ನೇ ಬದಲಿಸುವ ರಿಯಾದ್ ಮೆಟ್ರೋ: ಜೂನ್‌ನಲ್ಲಿ ಪ್ರಾರಂಭ

ರಿಯಾದ್: ಸೌದಿ ಅರೇಬಿಯಾದ ರಾಜಧಾನಿಯ ಚಹರೆಯನ್ನೇ ಬದಲಾಯಿಸುವ ರಿಯಾದ್ ಮೆಟ್ರೋ ರೈಲುಗಳ ಓಡಾಟವು ಜೂನ್‌ನಲ್ಲಿ ಪ್ರಾರಂಭಗೊಳ್ಳಲಿದ್ದು, ಡಿಸೆಂಬರ್ ವೇಳೆಗೆ ಈ ಸೇವೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ರಿಯಾದ್ ಮೆಟ್ರೋದ ಶೇಕಡಾ ಎಂಭತ್ತೈದು ಕಾಮಗಾರಿ ಪೂರ್ಣಗೊಂಡಿದೆ. ಆರು ಪಥದ ಮೆಟ್ರೋ ಡಿಸೆಂಬರ್ ವೇಳೆಗೆ ಪೂರ್ಣ ಸೇವೆ ಪ್ರಾರಂಭವಾಗಲಿದ್ದು, ಆ ಹಿನ್ನೆಲೆಯಲ್ಲಿ ರಿಯಾದ್ ಮೆಟ್ರೋ ನಿರ್ಮಾಣ ಮುಂದುವರಿದಿದೆ.

ಇದು ವಿಶ್ವದ ಅತಿ ಉದ್ದದ ಮೆಟ್ರೋ ಮಾರ್ಗಗಳಲ್ಲಿ ಒಂದಾಗಿದ್ದು, 176 ಕಿ.ಮೀ. ವ್ಯಾಪ್ತಿ ಹೊಂದಿದೆ. ಸೇವೆಯ ಮೊದಲ ಹಂತವು ಜೂನ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದ್ದು, ಪೂರ್ಣ ಸೇವೆ ಡಿಸೆಂಬರ್ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭವಾಗಲಿದೆ. ಮೆಟ್ರೋ 80 ನಿಲ್ದಾಣಗಳನ್ನು ಹೊಂದಿದೆ. ರೈಲಿನಲ್ಲಿ ಎರಡು ಅಥವಾ ನಾಲ್ಕು ಬೋಗಿಗಳು ಇರಲಿವೆ. ಒಟ್ಟು 586 ಬೋಗಿಗಳನ್ನು ಈಗಾಗಲೇ ತಲುಪಿಸಲಾಗಿದೆ.

ವೇಗವಾಗಿ ಸಂಚರಿಸಬಹುದಾದ ಈ ಮೆಟ್ರೋ ಹಾದಿಯು 36 ಕಿ.ಮೀ ಉದ್ದದ ಸುರಂಗವನ್ನು ಹೊಂದಿದೆ. ಇದೆಲ್ಲವೂ ಪೂರ್ಣಗೊಂಡಿದೆ. ನಿಲ್ದಾಣಗಳ ಕಾಮಗಾರಿ ಮತ್ತು ವಿದ್ಯುದೀಕರಣ ಪ್ರಗತಿಯಲ್ಲಿದೆ.

error: Content is protected !! Not allowed copy content from janadhvani.com