ಇಸ್ರೇಲ್ ಲಾಬಿ ಕುರಿತ ಸಾಕ್ಷ್ಯಚಿತ್ರ: ಅಲ್ ಜಝೀರಾ ಚಾನೆಲ್ ಗೆ ನಿರ್ಬಂಧ ಹೇರಿಲ್ಲ-ಖತಾರ್

ದೋಹಾ(ಜನಧ್ವನಿ ವಾರ್ತೆ): ಇಸ್ರೇಲ್‌ನ ಲಾಬಿಯ ಕುರಿತು ವಿವರಗಳನ್ನು ಬಹಿರಂಗ ಪಡಿಸುವ ಅನ್ವೇಷಣಾ ಸಾಕ್ಷ್ಯಚಿತ್ರ(ಡಾಕ್ಯುಮೆಂಟರಿ)ದ ಪ್ರದರ್ಶನವನ್ನು ನಿಲ್ಲಿಸುವಂತೆ ಅಲ್ ಜಝೀರಾ ಚಾನೆಲ್‌ಗೆ ಆದೇಶಿಸಲಾಗಿದೆ ಎನ್ನುವ ವರದಿಯನ್ನು ಖತ್ತರ್ ನಿಷೇಧಿಸಿದೆ. ಇದು ಆದಾರ ರಹಿತ ವರದಿಯಾಗಿದೆ ಎಂದು ಅಲ್ಲಿನ ಸರಕಾರ ಸ್ಪಷ್ಟಪಡಿಸಿದೆ.

ಮಾಧ್ಯಮ ಸ್ವಾತಂತ್ರ್ಯವನ್ನು ಬೆಂಬಲಿಸುವ ರಾಷ್ಟ್ರವಾಗಿದೆ ಖತ್ತರ್. ಅಲ್ ಜಝೀರಾದ ಮುನ್ನಡೆಯಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ. ಯಾವುದೇ ಆಧಾರವಿಲ್ಲದ ವರದಿಯನ್ನು ಇಸ್ರೇಲ್ ಮಾಧ್ಯಮಗಳು ಪ್ರಸಾರ ಮಾಡುತ್ತಿದೆ ಎಂದು ಖತ್ತರ್ ವಿದೇಶಾಂಗ ಸಚಿವಾಲಯದ ವಕ್ತಾರ ಲೌಲ ಅಲ್ ಖಾತಿರ್ ‘ ಗಲ್ಫ್ ಟೈಮ್ ಸಂಪಾದಕರಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ಇಸ್ರೇಲ್ ಲಾಬಿ ಇನ್ ವಾಷಿಂಗ್ಟನ್‌’ ಎನ್ನುವ ಅನ್ವೇಷಣಾ ಡಾಕ್ಯುಮೆಂಟರಿಯನ್ನು ಬಿತ್ತರಿಸಿದ ಅಲ್ ಜಝೀರಾಗೆ ಖತ್ತರ್ ಸರಕಾರ ತಡೆ ನೀಡಿದೆ ಎಂದು ವರದಿ ಮಾಡಲಾಗಿತ್ತು. ಡಾಕ್ಯುಮೆಂಟರಿಯನ್ನು ಇನ್ನು ಮುಂದೆ ಬಿತ್ತರಿಸಲಾಗುವುದಿಲ್ಲ ಎಂದು ಅಮೆರಿಕನ್ ಯಹೂದರಿಗೆ ಖತ್ತರ್ ಬರವಸೆ ನೀಡಿದೆ ಎಂದು ವರದಿಯಲ್ಲಿ ವಿವರಿಸಲಾಗಿತ್ತು.

ನಿರ್ಮಾನಾತ್ಮಕ ಮಾಧ್ಯಮ ಸ್ವಾತಂತ್ರ್ಯಕ್ಕಾಗಿ ಕ್ರಿಯಾತ್ಮಕ ನಿಲುವು ತಾಳಿದ ಖತ್ತರ್, ತನ್ನದೇ ದೇಶದ ಮಾಧ್ಯಮವೊಂದಕ್ಕೆ ಬಹಿಷ್ಕಾರ ಹಾಕುವ ಅನಿವಾರ್ಯತೆ ಸಧ್ಯಕ್ಕೆ ಇಲ್ಲ,
ಖತ್ತರ್ ವಿರುದ್ದ ಏರ್ಪಡಿಸಲಾದ ದಿಗ್ಬಂಧನದ ಹಿನ್ನೆಲೆಯಲ್ಲಿ ಇಂತಹ ಕಪೋಲ ಕಲ್ಪಿತ ವರದಿಗಳು ಪ್ರಸಾರವಾಗುತ್ತಿದೆ. ಖತ್ತರ್‌ನ ತೆರೆದ ಸಾಮೀಪ್ಯತೆಯನ್ನು ಕೆಡಿಸುವ ಉದ್ದೇಶದಿಂದ ಈ ರೀತಿ ವರದಿ ಬಿತ್ತರಿಸಲಾಗುತ್ತಿದೆ. ಅಲ್ ಜಝೀರಾಗೆ ಬಹಿಷ್ಕಾರ ಹಾಕಬೇಕೆನ್ನುವುದು ಅವರ ಉದ್ದೇಶವಾಗಿದ್ದು,ಅದನ್ನು ಕಾರ್ಯರೂಪಕ್ಕೆ ತರಲು ವಿಫಲಯತ್ನ ನಡೆಸುತಿದ್ದಾರೆ.

ಅಲ್ ಜಝೀರಾವನ್ನು ಬಹಿಷ್ಕರಿಸಬೇಕೆನ್ನುವ ರಾಷ್ಟ್ರಗಳಲ್ಲಿ ಹಲವಾರು ದೃಶ್ಯ ಮಾಧ್ಯಮಗಳಿವೆ ಆದರೆ, ಅಲ್ ಜಝೀರಾಗೆ ಸವಾಲೊಡ್ಡ ಬಲ್ಲ ತಾಖತ್ತು ಆ ಮಾಧ್ಯಮಗಳಿಗಿಲ್ಲ. ತಮ್ಮ ಇಂಗಿತಕ್ಕೆ ಬಗ್ಗದ ಅಲ್ ಜಝೀರಾವನ್ನು ಮಟ್ಟ ಹಾಕುವುದು ಅವರ ಲಕ್ಷ್ಯವಾಗಿದೆ. ಮಾಧ್ಯಮದ ಜೈತ್ರಯಾತ್ರೆಯು ಅದರ ಸ್ವಾತಂತ್ರ್ಯ ಮತ್ತು ನ್ಯಾಯಯುತ ನಿಲುವಿನೊಂದಿಗೆ ಮುಂದುವರಿಯಲಿದೆ. ರಾಷ್ಟ್ರಾಂತರ, ರಾಷ್ಟ್ರೀಯ ಕಾನೂನುಗಳು ಮತ್ತು ನಿಬಂಧನೆಗಳು ಮಾಧ್ಯಮಗಳಿಗೂ ಅನ್ವಯಿಸುತ್ತದೆ.ಕಾನೂನು ಉಲ್ಲಂಘನೆಯ ಕೂಗು ಉದ್ಭವಿಸುವಾಗ ಕಾನೂನಾತ್ಮಕ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!