janadhvani

Kannada Online News Paper

ಪೆಬ್ರವರಿ 25 ಕುದ್ರೋಳಿ ಯಲ್ಲಿ ಬ್ರಹತ್ ಪ್ರತಿಭಟನೆ ಗೆ ಭರದ ಸಿದ್ದತೆ

ಮಂಗಳೂರು : ಕುದ್ರೋಳಿ ಆಸುಪಾಸಿನ 5 ಜುಮಾ ಮಸೀದಿಗಳ ಅಡಳಿತ ನೇತೃತ್ವದವರನ್ನೊಳಗೊಂಡ ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಆಶ್ರಯದಲ್ಲಿ ಕೇಂದ್ರ ಸರ್ಕಾರದ ಅಸಂವಿಧಾನ ಪೌರತ್ವ ಕಾಯ್ದೆ ಸಿಎಎ, ಎನ್ಆರ್ ಸಿ, ಎನ್ ಪಿ ಆರ್ ವಿರುದ್ಧ ಹುತಾತ್ಮ ದ್ವಯರಾದ ನೌಸೀನ್ ಹಾಗೂ ಜಲೀಲ್ ಹುಟ್ಟೂರಲ್ಲಿ ಪೆಬ್ರವರಿ 25 ಮಂಗಳವಾರ 2.00 ಘಂಟೆ ಗೆ ಮಂಗಳೂರಿನ ಕುದ್ರೋಳಿ ಯ ಟಿಪ್ಪು ಸುಲ್ತಾನ್ ಗಾರ್ಡನ್ ನಲ್ಲಿ ನಡೆಯಲಿದೆ.

ಈ ಕಾರ್ಯ ಕ್ರಮದಲ್ಲಿ ಮೈಸೂರಿನ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ, ಬೆಂಗಳೂರಿನ ರಾ ಚಿಂತನ್ ಹಾಗೂ ಬಿ ಆರ್ ಬಾಸ್ಕರ್ ಪ್ರಸಾದ್ , ಚಿಕ್ಕನೆರಲೆ ನಜ್ಮಾ ನಝೀರ್ ಪ್ರಮುಖ ಬಾಷಣ ಮಾಡಲಿರುವರು.

ಹಾಗೂ ವಿವಿಧ ಸಂಘ ಸಂಸ್ಥೆಗಳ ನಾಯಕರು ಗಳ ಬಾಷಣಗಳಿವೆ.
ವಿವಿಧ ಧಾರ್ಮಿಕ, ಸಾಮಾಜಿಕ ,ರಾಜಕೀಯ ಮುಖಂಡರು ಗಳು ಹಿತೈಷಿಗಳು ಭಾಗವಹಿಸಲಿರುವರು.

ಈ ಪ್ರಯುಕ್ತ ದಕ್ಷಿಣ ಜಿಲ್ಲೆ ಯ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಕೇಂದ್ರ ಸರಕಾರದ ಗಮನ ಸೆಳೆಯುವಂತೆ ಮಾಡುವ ನಿಟ್ಟಿನಲ್ಲಿ ಭರ್ಜರಿ ಪ್ರಚಾರ ಕ್ಕಾಗಿ ಸುಮಾರು 60 ಕ್ಕೂ ಹೆಚ್ಚು ಸಂಘ ಸಂಸ್ಥೆಗಳ ಪ್ರಮುಖ ರನ್ನು ಕರೆದು ಸಭೆ ನಡೆಸಲಾಯಿತು.

ಸಮಿತಿಯ ಅಧ್ಯಕ್ಷರಾದ ಮಾಜಿ ಮೇಯರ್ ಕೆ ಅಶ್ರಫ್ ನೇತೃತ್ವದಲ್ಲಿ ನಡೆದ ಸಭೆ ಯಲ್ಲಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಕಾರ್ಪೊರೇಟರ್ ಶಂಸುದ್ದೀನ್ ಎಚ್ ಬಿ ಟಿ , ಬಿ ಅಬೂಬಕ್ಕರ್ ಸಮೇತ ಸಮಿತಿಯ ಪದಾಧಿಕಾರಿಗಳು ಸದಸ್ಯರು ವೇದಿಕೆ ಯಲ್ಲಿ ದ್ದರು.

ಈ ಕಾರ್ಯಕ್ರಮ ವನ್ನು ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಶತ ಪ್ರಯತ್ನ ದ ಸಂಪೂರ್ಣ ಬೆಂಬಲ ವಿವಿಧ ಸಂಘ ಸಂಸ್ಥೆಗಳ ಮುಖಂಡರ ಮೂಲಕ ಘೋಷಣೆಯಾಯಿತು.

error: Content is protected !! Not allowed copy content from janadhvani.com