janadhvani

Kannada Online News Paper

ಮರಳು ನಾಡಿನಲ್ಲೊಂದು ಕರುನಾಡಿನ ನೆರಳು-ಕೆ.ಸಿ.ಎಫ್

ನಾಡಿನ ನಲ್ಮೆಗಾಗಿ… ನೆಮ್ಮದಿಯ ಬಾಳಿಗಾಗಿ ಕಡಲಾಚೆಯ ಸುಡು ಬಿಸಿಲಿನ ಮರಳಾರಣ್ಯವಾದ ಮರುಭೂಮಿಯ ಗಲ್ಫಿನಲ್ಲಿ ತನ್ನ ಬೆವರನ್ನು ನೀರಾಗಿಸಿ ದುಡಿಯುತ್ತಿರುವ ಅನಿವಾಸಿ ಸುನ್ನೀ ಕನ್ನಡಿಗರಿಗೆ ಫೆ 15 ರಂದು ಹಬ್ಬದ ಸಂಭೃಮ…..

ಹೌದು ಸುನ್ನೀ ಕನ್ನಡಿಗರ ಆವೇಶ ಧ್ವನಿಯಾಗಿ,, ಸ್ಪೂರ್ತಿಯ ಸೆಲೆಯಾಗಿ , ಧಾರ್ಮಿಕತೆಯ ಭದ್ರ ನೆಲೆಯಾಗಿ, ಹಲವಾರು ಅತಿರಥ ಮಹಾರಥ ಉಲಮಾ, ಉಮರಾ , ಸಾದಾತ್ ನಾಯಕರ ಅವಿಶ್ರಾಂತ ಫಲವಾಗಿ ಬಹು ನಿರೀಕ್ಷೆಯ KCF ಎಂಬ ಮಹತ್ತರವಾದ ಸಂಘಟನೆ ಗಲ್ಫಿನಲ್ಲಿ ಜನ್ಮ ತಾಳಿತು.. ಅದು ಇಂದು ಬೆಳೆದು ಹೆಮ್ಮರವಾಗಿ ಬಿಟ್ಟಿದೆ… ಅದರ ಬೇರುಗಳು ಅರಬ್ ದೇಶಗಳನ್ನು ದಾಟಿ, ಮಲೇಶ್ಯ, ಲಂಡನ್, ಯೂರೋಪ್ ದೇಶಗಳಿಗೂ ವಿಸ್ತರಿಸಿ ಬಿಟ್ಟಿದೆ.

ಕರುನಾಡಿನ ಮಕ್ಕಳ ದೀನೀ ಚ್ಯೆತನ್ಯದ ಸಂಕೇತವಾಗಿ ಬೆಳೆದ KCF ಎಂಬ ಹೆಮ್ಮರಕ್ಕೆ ಫೆ 15 ರಂದು 7 ಸಂವತ್ಸರಗಳನ್ನು ಪೂರ್ತಿಗೊಳಿಸಿದ ಸಂಭೃಮ.‌‌.. ಕಾರ್ಯಕರ್ತರ ನಿಷ್ಕಲಂಕತೆ, ತಾನು KCF ಗಾಗಿ ಕಾರ್ಯಾಚರಿಸುವುದು , ಸಮುದಾಯ ಸೇವೆ ಮಾಡುವುದು ಯಾವುದೇ ರಾಜಕೀಯ ಲಾಭಕ್ಕಾಗಿ ಅಲ್ಲ,, ಅಲ್ಲಾಹನ ಅನುಗ್ರಹಕ್ಕಾಗಿ ಮಾತ್ರ ಎಂಬ ನಿಸ್ವಾರ್ಥವಾದ ಮನೋಭಾವವೇ KCF ಇಷ್ಟೆತ್ತರಕ್ಕೇರಲು ಕಾರಣ.‌ 7 ವರ್ಷಗಳ ಮುಂಚೆ ನಾಡಿನಲ್ಲಿ SSF ನಲ್ಲಿ ಕಾರ್ಯಾಚರಿಸಿದ ಸದಸ್ಯರು ಗಲ್ಫಿಗೆ ಬಂದಾಗ ಅವರಿಗೆ ಕಾರ್ಯಾಚರಿಸಲು ವೇದಿಕೆ ಇರಲಿಲ್ಲ,, ಅದನ್ನು ಮನಗಂಡು ನಮಗೂ ಕಾರ್ಯಾಚರಿಸಲು ಒಂದು flatform ಬೇಕೆಂದು ಅನಿವಾಸಿ ಕನ್ನಡಿಗರು ಆಲಿಂ ಸಾದಾತ್ ಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದರು, ಆ ನಂತರ ಮಹೋನ್ನತ ಉಲಮಾ, ಸಾದಾತುಗಳ ಆಶೀರ್ವಾದದೊಂದಿಗೆ ರೂಪುಗೊಂಡ ಸಂಘ ಶಕ್ತಿಯಾಗಿದೆ KCF. K.C.F 7 ವರ್ಷಗಳಲ್ಲಿ ಹೇಳಿ ಮುಗಿಸಿ ತೀರಿಸಲಾಗದಷ್ಟು ಸಾಂತ್ವನ, ಸೇವಾ ಕಾರ್ಯಾಚರಣೆಯನ್ನು ಮಾಡಿದೆ, ಮಾಡುತ್ತಿದೆ.

ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ KCF ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದರೂ ಇದ್ಯಾವುದನ್ನು ಲೆಕ್ಕಿಸದೆ ಮತ್ತಷ್ಟು ಎನರ್ಜಿಯ ಮೂಲಕ ಭರ್ಜರಿಯಾಗಿ ಸಮುದಾಯದ ಸೇವೆಯಲ್ಲಿ ತೊಡಗಿ ಕೊಂಡಿದೆ… KCF ಎಂದರೆ ಇವತ್ತು ಹುಟ್ಟಿ ನಾಳೆ ಅಸ್ತಮಿಸುವ ಬರೀ ನಾಮಕಾವಸ್ತೆಯ ಸಂಘಟನೆಯಲ್ಲ,, ಬಲಿಷ್ಠವಾದ ಉಲಮಾ, ಉಮರಾ ನಾಯಕತ್ವವಿದೆ, ಶಾಖೆ, ಸೆಕ್ಟರ್, ಝೋನಲ್, ರಾಷ್ಟ್ರೀಯ , ಅಂತರಾಷ್ಟ್ರೀಯ ಎಂಬ 5 ಸ್ಥರಗಳನ್ನೊಳಗೊಂಡ ವ್ಯವಸ್ಥಿತವಾದ ಸಮೀತಿಗಳಿವೆ, ಧೀರ ಧೀಮಂತ ನಾಯಕರುಗಳ ನಾಯಕತ್ವವಿದೆ…. ದಿನದ 24 ಘಂಟೆಯೂ ಉಲಮಾ ಗಳನ್ನು ನಿಂದಿಸಿ, ತನ್ನ ಸ್ವಾರ್ಥ ಉದ್ದೇಶಕ್ಕಾಗಿ ಸಮುದಾಯ ಸಮುದಾಯ ಎಂದು ಬೊಬ್ಬೆ ಹಾಕಿ ನಾಟಕ ಮಾಡುವವರಿರುವ ಈ ಕಾಲದಲ್ಲಿ ಸದ್ದು ಗಧ್ಧಲ ಗಳಿಲ್ಲದೆ ಶಾಂತವಾಗಿ ಸಮುದಾಯ ಸೇವೆ ಮಾಡುತ್ತಿದೆ KCF…. ಜುಮುಅ ನಮಾಝ್ ಶುಕ್ರವಾರ ಅಲ್ಲ, ರವಿವಾರ ಎಂದು ಹೇಳುವ ದೀನಿನ ಗಂಧ ಗಾಳಿ ಗೊತ್ತಿಲ್ಲದ ಉತ್ತರ ಕರ್ನಾಟಕದಾದ್ಯಂತ ಇಹ್ಸಾನ್ ಎಂಬ ದಅವಾ ವಿಂಗನ್ನು ರಚಿಸಿ, ಸ್ಥಿರ ಉಸ್ತಾದರುಗಳನ್ನು ಪ್ರತೀ ಮಾಸ ಸಂಬಳ ಕೊಟ್ಟು ಅಲ್ಲಿಯ ಜನರಿಗೆ ದೀನಿನ ತಂಗಾಳಿಯನ್ನು ಬೀಸುವಲ್ಲಿ KCF ಸಫಲವಾಗಿದೆ. KCF, SSF ಸಮುದಾಯಕ್ಕೇನು ಮಾಡಿದೆ ಎಂದು ಪ್ರಶ್ನಿಸುವವರು,ಉತ್ತರ ಕರ್ನಾಟಕವನ್ನೊಮ್ಮೆ ಸುತ್ತಿದರೆ ಉತ್ತರ ತಾನಾಗಿಯೇ ಸಿಗಲಿದೆ.

ಅಲ್ಲಾಹನ ಅತಿಥಿಗಳಿಗೆ ಅಳಿಲ ಸೇವೆ (hvc) ಸೌದಿ ಅರೇಬಿಯಾದ KCf ಕಾರ್ಯಕರ್ತರಿಗೆ ಮಾತ್ರ ಈ ಮಹಾ ಭಾಗ್ಯ ಸೀಮಿತ. ಹೌದು ಜಗತ್ತಿನ ಅಷ್ಟ ದಿಕ್ಕುಗಳಿಂದ ಹಜ್ಜ್ ನಿರ್ವಹಿಸಲು ಬರುವ ಹಜ್ಜಾಜಿಗಳ ಸೇವೆ ಮಾಡಲು KCF ಸನ್ನಧ್ಧ ಸೇವಕರನ್ನು ಪ್ರತೀ ವರ್ಷ ಸಜ್ಜುಗೊಳಿಸಿ ಯಶಸ್ವಿಯಾಗಿ, ತನ್ನ ಸೇವೆಗಾಗಿ ಸತತ 4 ವರ್ಷಗಳಿಂದ ಸೌದಿ health ministory ಯಿಂದ ಪ್ರಶಸ್ತಿ ಪತ್ರವನ್ನು ಪಡೆದಿದೆ. ಹಜ್ಜಾಜಿಗಳ ನಿಷ್ಕಲ್ಮಷ ದುಆ ಪಡೆದು KCF ನ hvc (hajj volunteer core) ಸದಸ್ಯರು ಧನ್ಯರಾಗುತಿದ್ದಾರೆ..‌‌‌ ಕೆಲವು ಸಂಘಟನೆಗಳು ನಡೆಸುವ ಹಜ್ಜ್ ಸೇವೆಯಲ್ಲ kcf ನ ಹಜ್ಜ್ ಸ್ವಯಂ ಸೇವಕರ ಕಾರ್ಯಾಚರಣೆ.‌‌‌‌… ತನ್ನ ಕಾರ್ಯಕರ್ತರಿಗೆ ಉನ್ನತ ಮಟ್ಟದಲ್ಲಿ ಮಾಹಿತಿ ನೀಡಿ,ಬಹಳ ಶಿಸ್ತು, ಅಚ್ಚು ಕಟ್ಟಾದ ವ್ಯವಸ್ಥೆಯೊಂದಿಗೆ ಸಜ್ಜುಗೊಳಿಸಿ ಸೇವೆಗಿಳಿಸುತ್ತಿದೆ..‌‌
ನೊಂದವರ ಪಾಲಿನ ನಂದಾ ದೀಪ KCF ನಡೆಸುತ್ತಿರುವ ಸಾಂತ್ವನ ಕಾರ್ಯಗಳನ್ನು ಬರೆಯಲು ಪದಗಳೇ ಲಭಿಸುತ್ತಿಲ್ಲ… ವರ್ಣಿಸಲು ಸಾಹಿತ್ಯದ ಕೊರತೆ ಕಾಣುತ್ತಿದೆ..‌‌‌‌ ಅಷ್ಟಕ್ಕೂ ಜನಮನ್ನಣೆ ಗಳಿಸಿದೆ… ಯಾರಾದರೂ ಅನಿವಾಸಿ ಭಾರತೀಯನಿಗೆ ತೊಂದರೆ ಎದುರಾದರೆ ಸಾಂತ್ವನಕ್ಕಾಗಿ ಪ್ರಥಮವಾಗಿ ನೆನಪಿಗೆ ಬರುವುದೇ KCF,, ಅಥವಾ ಪ್ರವಾಸಿಯಾದವನು ತೀರಿ ಹೋದರೆ,, ಆ ಮಯ್ಯತನ್ನು ಊರಿಗೆ ತಲುಪಿಸುವ ತನಕ ಇರುವ ಸಂಪೂರ್ಣವಾದ ಕೆಲಸ KCF ಮಾಡುತ್ತಿದೆ.

ಅಥವಾ ಆ ಮಯ್ಯತನ್ನು ಇಲ್ಲಿಯೇ ಧಫನ ಮಾಡ ಬೇಕಾಗಿ ಬಂದರೆ ತಮ್ಮ ಒಡ ಹುಟ್ಟಿದವರಂತೆ ಚಿಂತಿಸಿ ಧಫನ ಮಾಡಿ, ನಂತರ ತಲ್ಕೀನ್ ಓದುವ ತನಕದ ಎಲ್ಲಾ ಕೆಲಸಗಳನ್ನು KCF ಮಾಡುತ್ತಿದೆ, ಊರಿನ ಬಡ ಹೆಣ್ಣುಮಕ್ಕಳ ಮದುವೆಗೆ ಸಹಾಯ, ಮನೆ ಇಲ್ಲದವರಿಗೆ ಮನೆ ಕಟ್ಟಲು ಸಹಾಯ, ಮದ್ರಸ, ಮಸ್ಜಿದ್ಗೆ ಸಹಾಯ, ಗಲ್ಫಿನಲ್ಲಿರುವ ಯಾರಿಗಾದರೂ ತೊಂದರೆಯಾಗಿದೆ ಎಂದರಿತರೆ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಆ ಸಹೋದರನ ಸಹಾಯಕ್ಕೆ KCF ನ ಸದಸ್ಯರು ಬರುತ್ತಾರೆ…. MRF (member releif fund) ತನ್ನ ಕಾರ್ಯಕರ್ತರು ಯಾರಾದರೂ ಕಷ್ಟದಲ್ಲಿದ್ದರೆ ಅವರಿಗೆ ಬೇಕಾದ ಸಹಾಯ ಹಾಗೂ wecare, general relief ಎಂಬೀ ಸಾಂತ್ವನ ಕಾರ್ಯಗಳ ಮೂಲಕ, ಊರಿನ, ವಿದೇಶದಲ್ಲಿರುವ ಜನರಿಗೆ, ಕಾರ್ಯಕರ್ತರಿಗೆ ನೆರಳಾಗಿ KCF ಮಾರ್ಪಟ್ಟಿದೆ ಧುಗುಡು, ಧುಮ್ಮಾನಗಳಿಂದ ನೊಂದ, ಜನರ ಕಣ್ಣೀರೊರೆಸುವ ಕೈಯಾಗಿದೆ KCF….. ಹರಿಯುವ ನೀರಿನಂತೆ ನಿತ್ಯ ನಿರಂತರವಾಗಿ ನಡೆಯುತ್ತಿದೆ KCF ನ ಸಾಂತ್ವನ ಚಟುವಟಿಕೆ.‌‌‌‌

ಪ್ರವಾಸಿ ಜೀವನದಲ್ಲೊಂದು ಮದ್ರಸ KCF ನ ಪ್ರಮುಖ ಕಾರ್ಯಾಚರಣೆಗಳಲ್ಲೊಂದಾಗಿದೆ ಅಸ್ಸುಫ್ಫ ತರಗತಿ.. ತನ್ನ ಕಾರ್ಯಕರ್ತರು ಮದ್ರಸದಲ್ಲಿ ಕಲಿತ ವಿಧ್ಯೆಯನ್ನು ಮರೆಯದಂತೆ ಮಾಡಲು, ಮತ್ತು ಧಾರ್ಮಿಕ ಜಾಗೃತಿಗಾಗಿ,, ನಾಯಕರ ಅವಿಶ್ರಾಂತ ಪರಿಶ್ರಮದ ಫಲವಾಗಿ ಕಳೆದ 4 ವರ್ಷಗಳಿಂದ ನುರಿತ ಟ್ಯೂಟರ್ಗಳಿಂದ ಗಲ್ಫ್ ರಾಷ್ಟ್ರಾದಾತ್ಯಂತ ದೀನಿನ ಮಧುವನ್ನು ನೀಡುತಿದ್ದೆ,, ಅದು ಕೇವಲ ತರಗತಿಗಳಾಗದೆ 3 subject (ಕುರ್ಆನ್, ಫಿಖ್ಹ್, ಹದೀಸ್) ಗಳನ್ನೊಳಗೊಂಡ ವ್ಯವಸ್ಥಿತವಾದ ವಿಧಾನವಾಗಿದೆ.. ಕೊನೆಯಲ್ಲಿ ಹಾಲ್ ಟಿಕೇಟ್ ನೀಡಿ ಪರೀಕ್ಷೆಯನ್ನು ನಡೆಸಿ, ಫಲಿತಾಂಶವನ್ನೂ ಪ್ರಕಟಿಸಲಾಗುತ್ತದೆ, ಅದು ಕೂಡಾ ವ್ಯವಸ್ಥಿತವಾದ ಆನ್ಲೈನ್ ಮುಖಾಂತರ, ಈ ತರಗತಿಗಳ ಮೂಲಕ ಪ್ರತಿಯೊಬ್ಬರು,, ನಮಾಝ್, ಕುರ್ಆನ್, ನಿತ್ಯ ಜೀವನದಲ್ಲಿ ಪಾಲಿಸಬೇಕಾದ ಶಿಷ್ಟಾಚಾರಗಳನ್ನು ಕಲಿಯಲು ಸಹಕಾರಿಯಾಗಿದೆ….. ಪ್ರಸ್ತುತ ತಜ್ವೀದ್ ತರಗತಿಗಳು ಅಚ್ಚು ಕಟ್ಟಾಗಿ ನಡೆಯುತ್ತಿದೆ, ಆಧ್ಯಾತ್ಮಿಕತೆಯ ರಸದೌತಣ ಊರಲ್ಲಿ ಧಾರ್ಮಿಕ ಮಜ್ಲಿಸುಗಳಲ್ಲಿ ಭಾಗವಹಿಸುತ್ತಿದ್ದ ಜನರಿಗೆ ಗಲ್ಫಿಗೆ ಬಂದಾಗ ಅದು ನಷ್ಟ ಹೊಂದದಿರಲು , KCf ಸ್ವಲಾತ್, ಝಿಕ್ರ್ ಮಜ್ಲಿಸುಗಳನ್ನು ನಡೆಸುತ್ತಿದೆ, ರಜಬ್ , ಶಹಬಾನ್, ರಮಳಾನ್, ಮೊಹರ್ರಂ ಸಂದೇಶ, ಈದ್ ಮಿಲಾದ್ ಸ್ನೇಹ ಸಂಗಮಗಳನ್ನು ನಡೆಸುವ ಮೂಲಕ ಆಧ್ಯಾತ್ಮಿಕತೆಯ ರಸ ಔತನವನ್ನು ಉಣ ಬಡಿಸಿ… ಈ ಮೂಲಕ ಆತ್ಮೀಯ ಚೈತನ್ಯವನ್ನು ಮೂಡಿಸುತ್ತಿದೆ..‌‌…
ಅಕ್ಷರಗಳ ಚಿತ್ತಾರ ಗಲ್ಫ್ ಇಶಾರ ಮರಳಾರಣ್ಯದಲ್ಲಿ ಕನ್ನಡ ಸಾಹಿತ್ಯಕ್ಕೆ ಬರಗಾಲ ಬಂದಾಗ.‌‌ ‌‌‌‌‌‌.‌‌ ಅಕ್ಷರಗಳ ಚಿತ್ತಾರವನ್ನು ಬಿಡಿಸುತ್ತಾ ಗಲ್ಫ್ ಇಶಾರ ಸಾಹಿತ್ಯವನ್ನೇ ಉಣಬಡಿಸಿತ್ತಾ ಉದಯಿಸಿ ಬಂತು,,ಗಲ್ಫ್ ದೇಶದಲ್ಲಿ ಪ್ರಥಮವಾಗಿ ಪ್ರಕಟಗೊಂಡ ಕನ್ನಡದ ಪತ್ರಿಕೆ ಎಂಬ ಹಿರಿಮೆಯ ಗರಿಮೆಗೆ ಗಲ್ಫ್ ಇಶಾರ ಪಾತ್ರವಾಗಿದೆ ಈ ರೀತಿಯಾಗಿ ಹೇಳಿ, ಬರೆದು ಮುಗಿಸಲಾಗದ ರೀತಿಯಲ್ಲಿ ಗಲ್ಫಿನಾದ್ಯಾಂತ ಸಾಂತ್ವನ ಕಾರ್ಯ ಚಟುವಟಿಕೆಗಳ ಮೂಲಕ ಸಮುದಾಯದ ನೈಜ ಧ್ವನಿಯಾಗಿ , ಕರುನಾಡಿನ ನೆರಳಾಗಿ ಮುನ್ನಡೆಯುತ್ತಿರುವ KCF ಗೆ 7 ವರ್ಷ ತುಂಬಿದ ಸಂಭೃಮ…‌.. ಈ ನಿಟ್ಟಿನಲ್ಲಿ ಸುನ್ನತ್ ಜಮಾಅತ್ತಿನಲ್ಲಿ ವಿಶ್ವಾಸ ಇರುವ ಸರ್ವ ಕನ್ನಡಿಗರೂ KCF ಎಂಬ ಪುಣ್ಯ ಸಂಘಟನೆಯೊಂದಿಗೆ ಕೈ ಜೋಡಿಸಿ ಇಹ-ಪರದಲ್ಲಿ ಧನ್ಯರಾಗಿ… KCF 7 ನೇ ವರ್ಷದ ಶುಭಾಶಯಗಳು.

ಕೆ.ಎಂ ಇರ್ಶಾದ್ ಪಕ್ಷಿಕೆರೆ

error: Content is protected !! Not allowed copy content from janadhvani.com