janadhvani

Kannada Online News Paper

ಖಾಸಗಿ ವಲಯದ ಕಾರ್ಮಿಕರ ಇಖಾಮಾ ನವೀಕರಣಕ್ಕೆ ಆನ್‌ಲೈನ್‌ ವ್ಯವಸ್ಥೆ

ಕುವೈಟ್ ಸಿಟಿ: ಕುವೈತ್‌ನಲ್ಲಿ ಖಾಸಗಿ ವಲಯದ ಕಾರ್ಮಿಕರು ತಮ್ಮ ಇಖಾಮಾವನ್ನು ಇನ್ನು ಮುಂದೆ ಆನ್‌ಲೈನ್‌ನಲ್ಲಿ ನವೀಕರಿಸಬಹುದು. ಮಾರ್ಚ್ 1ರಿಂದ ಈ ಸೇವೆ ಜಾರಿಯಾಗಲಿದೆ. ಇಖಾಮಾ ಸೇವೆಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಮಾಡುವ ಪ್ರಕ್ರಿಯೆಯ ಎರಡನೇ ಹಂತವಾಗಿ ಇಖಾಮಾ ನವೀಕರಣೆಯನ್ನು ಗೃಹ ಸಚಿವಾಲಯ ಆನ್‌ಲೈನ್‌ಗೊಳಿಸಿದೆ.

ಗೃಹ ಸಚಿವಾಲಯದ ದಟ್ಟಣೆ ಕಡಿಮೆ ಮಾಡುವ ಭಾಗವಾಗಿ ಇಖಾಮಾ ನವೀಕರಣ ವ್ಯವಸ್ಥೆಯನ್ನು ಆನ್‌ಲೈನ್‌ನಲ್ಲಿ ಪರಿಚಯಿಸಲಾಗಿದ್ದು, ಮೊದಲ ಹಂತದಲ್ಲಿ, ಗೃಹ ಕಾರ್ಮಿಕರ ಇಖಾಮಾ ಆನ್‌ಲೈನ್ ನವೀಕರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ನಂತರ ಎರಡನೇ ಹಂತದಲ್ಲಿ ಖಾಸಗಿ ವಲಯದ ಕಾರ್ಮಿಕರ ನವೀಕರಣ ಸೇವೆಗಳನ್ನು ಆನ್‌ಲೈನ್‌ಗೊಳಿಸಲಾಗಿವೆ.

ಮೂರನೇ ಹಂತದಲ್ಲಿ ಕುಟುಂಬ ವೀಸಾಗಳಲ್ಲಿರುವವರಿಗೆ ಈ ಸೇವೆ ಲಭ್ಯವಾಗಲಿದೆ ಎಂದು ಆಂತರಿಕ ಸಚಿವಾಲಯದ ಸಹಾಯಕ ಅಂಡರ್ ಸೆಕ್ರೆಟರಿ ಮೇಜರ್ ಜನರಲ್ ತಲಾಲ್ ಅಲ್‌ ಮ‌ಅ್‌ರಫಿ ಹೇಳಿದರು. ಸಚಿವಾಲಯದ ಇ-ಸೇವೆಯಲ್ಲಿ ನೋಂದಾಯಿಸಲಾದ ಕಂಪನಿಗಳಿಗೆ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ನೀಡಲಾಗುವುದು. ಲಾಗಿನ್ ಆದ ನಂತರ, ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು ಮತ್ತು ಮಾರ್ಚ್ 1ರಿಂದ ನಿವಾಸ ಕಚೇರಿಗೆ ಹೋಗದೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

error: Content is protected !! Not allowed copy content from janadhvani.com