janadhvani

Kannada Online News Paper

ಹರಂ ಉಸ್ತುವಾರಿ ಶೈಖ್ ಸುದೈಸ್: ಅಧಿಕಾರಾವಧಿ ವಿಸ್ತರಣೆ

ಜಿದ್ದಾ: ಮಕ್ಕಾದ ಹರಮ್ ಮಸೀದಿ(ಮಸ್ಜಿದುಲ್ ಹರಂ) ಮತ್ತು ಮದೀನಾದಲ್ಲಿರುವ ಪ್ರವಾದಿಯ ಮಸೀದಿ(ಮಸ್ಜಿದುನ್ನಬವಿ) ಯ ಉಸ್ತುವಾರಿ ಶೈಖ್ ಅಬ್ದುಲ್ ರಹ್ಮಾನ್ ಅಲ್-ಸುದೈಸಿ ಅವರ ಅಧಿಕಾರಾವಧಿಯನ್ನು ವಿಸ್ತರಿಸಲು ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಆದೇಶಿಸಿದ್ದಾರೆ.

ಹರಮ್ ಕಚೇರಿಯ ಮೇಲಾಧಿಕಾರಿ ಸ್ಥಾನವನ್ನು ಇನ್ನೂ ನಾಲ್ಕು ವರ್ಷಗಳವರೆಗೆ ವಿಸ್ತರಿಸಿ, ಸುಗ್ರೀವಾಜ್ಞೆ ಹೊರಡಿಸಿದ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಮತ್ತು ಯುವರಾಜ ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಅಲ್-ಸುದೈಸಿ ಧನ್ಯವಾದ ಅರ್ಪಿಸಿದರು.

ಹರಮ್ ಕಚೇರಿಯ ಮುಖ್ಯಸ್ಥರ ಹುದ್ದೆಯನ್ನು ಮಂತ್ರಿ ಹುದ್ದೆಗೆ ಸಮಾನ ದರ್ಜೆಗೇರಿಸಿ ನಾಲ್ಕು ವರ್ಷಗಳವರೆಗೆ ವಿಸ್ತರಿಸಲಾಗಿದೆ.

ಹರಮ್ ಗಳ ಕಾರ್ಯ ನಿರ್ವಹಣೆಯಲ್ಲಿ ಹರಮ್ ಕಚೇರಿಗೆ ಆಡಳಿತಗಾರರಿಂದ ಹೆಚ್ಚಿನ ಸಹಕಾರ ದೊರೆಯುತ್ತಿದೆ ಎಂದು ಸುದೈಸಿ ಹೇಳಿದರು. ಸೂಚನೆಗಳಿಗೆ ಅನುಗುಣವಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಅದು ಸಹಾಯವಾಗಿದೆ.ನಾಯಕರ ವಿವೇಕಯುತ ಎಚ್ಚರಿಕೆಯ ಸಂದೇಶಗಳು ಚಟುವಟಿಕೆಗಳಿಗೆ ಸಹಾಯ ಮಾಡಿದೆ ಎಂದು ಸುದೈಸಿ ಹೇಳಿದರು.

error: Content is protected !! Not allowed copy content from janadhvani.com