janadhvani

Kannada Online News Paper

ರಾಜ್ಯದಲ್ಲಿ ಹೆಚ್‌1 ಎನ್‌1 ಮಹಾಮಾರಿ ಹರಡುತ್ತಿದೆ- ಎಚ್ಟರಿಕೆ

ಬೆಂಗಳೂರು: ಕೊರೋನಾ ಭಯದಲ್ಲಿರುವ ಕರ್ನಾಟಕ ಜನತೆಗೆ ಆತಂಕ ಉಂಟುಮಾಡುವ ಸಂಗತಿ ಬಯಲಾಗಿದೆ. ಆರೋಗ್ಯ ಇಲಾಖೆಗೂ ಇದು ಟೆನ್ಶನ್ ಆಗಿ ಪರಿಣಮಿಸಿದ್ದು, ಹೆಚ್‌1 ಎನ್‌1 ಎಂಬ ಮಹಾಮಾರಿ ಸೈಲೆಂಟ್ ಆಗಿ ಸ್ಪ್ರೆಡ್ ಆಗ್ತಿದೆ.

ಕೊರೋನಾ ವೈರಸ್ ಪತ್ತೆಗಾಗಿ ಮಾಡಿದ ಪರೀಕ್ಷೆಯಲ್ಲಿ ಹೆಚ್ಚಿನವರಿಗೆ ಹೆಚ್‌1 ಎನ್‌1 ಬಂದಿರೋದು ಪತ್ತೆಯಾಗಿದೆ. ಒಂದೂವರೆ ತಿಂಗಳಲ್ಲೇ ಬರೋಬ್ಬರಿ 947 ಸ್ಯಾಂಪಲ್ಸ್ ಟೆಸ್ಟ್ ಮಾಡಲಾಗಿದೆ. ಅವುಗಳಲ್ಲಿ 96 ಪಾಸಿಟಿವ್ ಕೇಸ್ ಬಂದಿದೆ. ಬೆಂಗಳೂರಿನಲ್ಲೂ 35 ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ. ಅವುಗಳಲ್ಲಿ 9 ಕೇಸ್ ಪಾಸಿಟಿವ್ ಬಂದಿದೆ. ಆದ್ರೆ ಸಾವನ್ನಪ್ಪಿರುವ ಕುರಿತು ಯಾವುದೇ ವರದಿಯಾಗಿಲ್ಲಾ.

ಇನ್ನು ಬೇಸಿಗೆ ಆರಂಭದಲ್ಲಿ ಹಂದಿ ಜ್ವರ ಕಾಣಿಸಿಕೊಂಡಿದ್ದು, ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಚ್‌1 ಎನ್‌1ಕಾಣಿಸಿಕೊಂಡಿದೆ. ಹಂದಿಜ್ವರ ನಿಯಂತ್ರಣಕ್ಕೆ ಅಧಿಕಾರಿಗಳು ಮುಂದಾಗಿದ್ದು, ಹಂದಿಜ್ವರ ಹೆಚ್ಚಾಗಿ ಹರಡದಂತೆ ಗಮನ ಹರಿಸಲು ಸೂಚನೆ ನೀಡಲಾಗಿದೆ.

2019 ರಲ್ಲಿ 15140 ಸ್ಯಾಂಪಲ್ ಟೆಸ್ಟ್ ಮಾಡಲಾಗಿದ್ದು 2030 ರೋಗಿಗಳಲ್ಲಿ h1 n1 ಕಾಣಿಸಿಕೊಂಡಿದ್ದು 96 ಮಂದಿ ಸಾವನ್ನಪ್ಪಿದ್ರು. 2018 ರಲ್ಲಿ 10,435 ಸ್ಯಾಂಪಲ್ ಟೇಸ್ಟ್ ಮಾಡಲಾಗಿದ್ದು 1733 ಮಂದಿಗೆ h1n1 ಕಾಣಿಸಿಕೊಂಡಿದ್ದು 87 ಮಂದಿ ಸಾವನ್ನಪ್ಪಿದ್ರು. 2017 ರಲ್ಲಿ 16,864 ಸ್ಯಾಂಪಲ್ ಟೇಸ್ಟ್ ಮಾಡಲಾಗಿದ್ದು 3260 ಮಂದಿಗೆ ಕಾಣಿಸಿಕೊಂಡಿದ್ದು 15 ಮಂದಿ ಸಾವನ್ನಪ್ಪಿದ್ರು.

error: Content is protected !! Not allowed copy content from janadhvani.com