janadhvani

Kannada Online News Paper

ವೀಸಾ ಅವಧಿ ಮುಗಿದಲ್ಲಿ ದೇಶ ತೊರೆಯಬೇಕು-ವಿದೇಶಿಗಳು ಆತಂಕದಲ್ಲಿ

ಮಸ್ಕತ್: ಹೊಸದಾಗಿ ನಿರ್ಬಂಧಿಸಲಾದ, ಮಾರಾಟ ಮತ್ತು ಖರೀದಿ ವಲಯಗಳಲ್ಲಿ ಕೆಲಸ ಮಾಡುವ ವಿದೇಶಿಯರು ವೀಸಾ ಅವಧಿ ಮುಗಿದ ಬಳಿಕ ದೇಶವನ್ನು ತೊರೆಯಬೇಕು ಎಂದು ಒಮಾನ್ ಮಾನವ ಸಂಪನ್ಮೂಲ ಸಚಿವಾಲಯ ತಿಳಿಸಿದೆ. ವೀಸಾ ನಿಷೇಧದ ಕುರಿತು ನೀಡಲಾದ ಸ್ಪಷ್ಟೀಕರಣದಲ್ಲಿ ಈ ಬಗ್ಗೆ ಸಚಿವಾಲಯ ಸ್ಪಷ್ಟನೆ ನೀಡಿದೆ.

ಮಾರಾಟದ ಪ್ರತಿನಿಧಿ(ಸೇಲ್ಸ್ ರೆಪ್ರಸೆಂಟಟಿವ್) / ಮಾರಾಟ ಪ್ರವರ್ತಕ(ಸೇಲ್ಸ್ ಪ್ರಮೋಟೆರ್) ಮತ್ತು ಖರೀದಿದಾರರ ಪ್ರತಿನಿಧಿ (ಪರ್ಚೇಸ್ ರೆಪ್ರಸೆಂಟಟಿವ್) ಯ ವೀಸಾಗಳನ್ನು ಕಾಲಾವಧಿ ನಂತರ ನವೀಕರಿಸಲಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಈ ವೀಸಾಗಳಲ್ಲಿ ಕೆಲಸ ಮಾಡುವ ವಿದೇಶಿಯರ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರಲಿದೆ.

ಮಾನವ ಸಂಪನ್ಮೂಲ ಸಚಿವ ಅಬ್ದುಲ್ಲಾ ಬಿನ್ ನಾಸರ್ ಅಲ್-ಬಕ್ರಿ ಅವರು, ಎರಡೂ ಹುದ್ದೆಗಳಲ್ಲಿ 100 ಶೇಕಡಾ ಸ್ವದೇಶೀಕರಣಗೊಳಿಸಲಾದ ಬಗ್ಗೆ ಜ.26ರಂದು ಘೋಷಣೆ ಮಾಡಿದ್ದರು. ವೀಸಾ ನಿಷೇಧದ ಬಗ್ಗೆ ವಿದೇಶಿಯರಲ್ಲಿ ಆತಂಕವೂ ಇತ್ತು. ಈ ಹಿನ್ನೆಲೆಯಲ್ಲಿಯೇ ಸಚಿವಾಲಯವು ಹೆಚ್ಚಿನ ವಿವರಗಳನ್ನು ನೀಡಿದೆ.

ಇದೀಗ ಒಮಾನ್ ನಲ್ಲೂ ಸ್ವದೇಶೀಕರಣವನ್ನು ಬಲಪಡಿಸಲಾಗಿದೆ.

error: Content is protected !! Not allowed copy content from janadhvani.com