janadhvani

Kannada Online News Paper

ಪ್ರಾಯೋಜಕತ್ವ ವ್ಯವಸ್ಥೆಯನ್ನು ರದ್ದುಗೊಳಿಸಲು ನಿರ್ಧರಿಸಿಲ್ಲ- ಕಾರ್ಮಿಕ ಸಚಿವಾಲಯ

ರಿಯಾದ್: ವಿದೇಶಿ ಕಾರ್ಮಿಕರಿಗೆ ಅಸ್ತಿತ್ವದಲ್ಲಿರುವ ಪ್ರಾಯೋಜಕತ್ವ ವ್ಯವಸ್ಥೆಯನ್ನು ರದ್ದುಗೊಳಿಸಲು ಸೌದಿ ಅರೇಬಿಯಾ ನಿರ್ಧರಿಸಿಲ್ಲ ಎಂದು ಕಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ ತಿಳಿಸಿದೆ. ಪ್ರಾಯೋಜಕತ್ವ ಕಾನೂನನ್ನು ರದ್ದುಪಡಿಸುವ ಬಗ್ಗೆ ಯಾವುದೇ ಅಧಿಕೃತ ಪ್ರಕಟನೆ ನೀಡಿಲ್ಲ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಕಲಿ ಮಾಹಿತಿಯನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಕಾರ್ಮಿಕ ಸಚಿವಾಲಯವು ಅಂತಹ ನೀತಿ ನಿರ್ಧಾರವನ್ನು ಇತರ ಸಚಿವಾಲಯಗಳು, ಖಾಸಗಿ ವಲಯ ಮತ್ತು ಉದ್ಯಮ ತಜ್ಞರೊಂದಿಗೆ ಸಮಾಲೋಚಿಸಿದ ನಂತರವೇ ಉದ್ಯೋಗಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.ಬಳಿಕ ಸಚಿವಾಲಯವು ಅಧಿಕೃತವಾಗಿ ಅವುಗಳನ್ನು ಘೋಷಿಸುತ್ತದೆ ಇದಾಗಿದೆ ಸಂಪ್ರದಾಯ.

ವದಂತಿಗಳು ಮತ್ತು ಊಹಾಪೋಹಗಳಿಗೆ ಕಿವಿಕೊಡದೆ ಸುದ್ದಿಯನ್ನು ವಿಶ್ವಾಸಾರ್ಹ ಮೂಲದಿಂದ ಸ್ವೀಕರಿಸಬೇಕು ಎಂದು ಕಾರ್ಮಿಕ ಸಚಿವಾಲಯ ಎಚ್ಚರಿಸಿದೆ. ಪ್ರಾಯೋಜಕತ್ವದ ಶಾಸನವನ್ನು ರದ್ದುಪಡಿಸಲಾಗಿದೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ಆನ್‌ಲೈನ್ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಯಿತು. ಈ ನಿಟ್ಟಿನಲ್ಲಿ ಕಾರ್ಮಿಕ ಸಚಿವಾಲಯವು ಸ್ಪಷ್ಟನೆ ನೀಡಿದೆ.

error: Content is protected !! Not allowed copy content from janadhvani.com