ಸೌದಿ: ಲೆವಿ ಅನ್ವಯವಾಗದ ಕಂಪೆನಿಗಳ ಬಗ್ಗೆ ಮತ್ತೊಮ್ಮೆ ಸ್ಪಷ್ಟೀಕರಣ

ರಿಯಾದ್(ಜನಧ್ವನಿ): ಲೆವಿ ಅನ್ವಯವಾಗದ ಕಂಪೆನಿಗಳ ಬಗ್ಗೆ ಸಂಬಂಧಪಟ್ಟ ಸಚಿವಾಲಯವು ಮತ್ತೊಮ್ಮೆ ಸ್ಪಷ್ಟೀಕರಣ ನೀಡಿದೆ.ನಾಲ್ಕು ಅಥವಾ  ಕಡಿಮೆ ಕಾರ್ಮಿಕರಿರುವ ಕಂಪೆನಿಗಳು ಈ ಹಿಂದೆ ಇದ್ದಂತೆ ಲೆವಿ ಕಟ್ಟಬೇಕಾಗಿಲ್ಲ ಎಂದು ಸಚಿವಾಲಯ ತಿಳಿಸಿದೆ. ಸಣ್ಣಪುಟ್ಟ ಸ್ಥಾಪನೆಗಳನ್ನು ನಡೆಸುವವರಿಗೆ ಈ ಸ್ಪಷ್ಟೀಕರಣವು ಆಶ್ವಾಸನೆ ನೀಡುವುದರಲ್ಲಿ ಸಂಶಯವಿಲ್ಲ.

ಜನವರಿಯಿಂದ ಚಾಲ್ತಿಗೆ ಬಂದ, ವಿದೇಶೀ ಪ್ರಜೆಗಳು ಹೆಚ್ಚುವರಿಯಾಗಿ ನೀಡಬೇಕಾದ ಲೆವಿ ಯಿಂದ ಎಂಟು ವಿಭಾಗಕ್ಕೆ ವಿನಾಯ್ತಿ ನೀಡಲಾಗಿದೆ ಎಂದು ಸಾಮಾಜಿಕ ಕ್ಷೇಮ ಖಾತೆಯ ಸಚಿವಾಲಯ ತಿಳಿಸಿತ್ತು.

1. ಒಂದರಿಂದ ನಾಲ್ಕು ಮಂದಿಗಳ ವರೆಗೆ ಕಾರ್ಮಿಕರಿರುವ ಸಂಸ್ಥೆಗಳ ಕಾರ್ಮಿಕರು.
2. ಒಂಬತ್ತರ ಕೆಳಗೆ ವಿದೇಶೀ ಕಾರ್ಮಿಕರಿರುವ ಸಂಸ್ಥೆಯ ನಾಲ್ಕು ಕಾರ್ಮಿಕರು (ಮಾಲಿಕ ನಿರುದ್ಯೋಗಿಯಾಗಿರ ಬೇಕು).
3. ಮನೆ ಕೆಲಸದವರ ನೇಮಕಾತಿಗಾಗಿ ಕಾರ್ಯಾಚರಿಸುವ ಕಚೇರಿಯಲ್ಲಿ ಕೆಲಸ ಮಾಡುವವರು.
4. ಸ್ವದೇಶೀ ಮಹಿಳೆಯ ವಿದೇಶೀ ಗಂಡ.
5. ಸ್ವದೇಶೀ ಪ್ರಜೆಯ ವಿದೇಶೀ ಹೆಂಡತಿ.
6. ವಿದೇಶೀ ಗಂಡನಿಂದ ಸ್ವದೇಶೀ ಮಹಿಳೆಗೆ ಜನಿಸಿದ ಮಕ್ಕಳು.
7. ಗಡೀಪಾರಿನಿಂದ  ಕೈಬಿಡಲಾದ ವಿದೇಶಿಗಳು (ನಿರಾಶ್ರಿತರು)
8. ಜಿಸಿಸಿ ರಾಷ್ಟ್ರದ ಪೌರರು.

ಮುಂತಾದ ವಿದೇಶೀ ಪ್ರಜೆಗಳಿಗೆ ಲೆವಿ ಅನ್ವಯವಾಗುವುದಿಲ್ಲ ಎಂದು ಸಚಿವಾಲಯ ಹೇಳಿದೆ.

Leave a Reply

Your email address will not be published. Required fields are marked *

error: Content is protected !!