janadhvani

Kannada Online News Paper

ದುಬೈ ಪೋಲೀಸರ ಸಾಧನೆ: 32 ದಶಲಕ್ಷ ದಿರ್ಹಂ ವಂಚಿಸಿದ ಅಂತರ್‌ರಾಷ್ಟ್ರೀಯ ಗ್ಯಾಂಗ್ ಬಂಧನ

ದುಬೈ: ಆನ್‌ಲೈನ್ ಮೂಲಕ 32 ದಶಲಕ್ಷ ದಿರ್ಹಂ ವಂಚಿಸಿದ ಅಂತರ್‌ರಾಷ್ಟ್ರೀಯ ಗ್ಯಾಂಗ್ ಅನ್ನು ದುಬೈನಲ್ಲಿ ಬಂಧಿಸಲಾಗಿದೆ. ಗ್ಯಾಂಗ್‌ನಲ್ಲಿದ್ದ ಒಂಬತ್ತು ಆಫ್ರಿಕನ್ ಪ್ರಜೆಗಳನ್ನು ಬಂಧಿಸಲಾಗಿದ್ದು, ಅವರು 18 ದೇಶಗಳಲ್ಲಿ ಹರಡಿರುವ 81 ಮೋಸದ ಉದ್ಯಮಗಳಲ್ಲಿ ಭಾಗಿಯಾಗಿದ್ದಾರೆ. ನಾಲ್ಕು ಶತಕೋಟಿ ದಿರ್ಹಂ ವಂಚನೆಗೆ ಸಿದ್ಧತೆ ನಡೆಸುತ್ತಿರುವಾಗ ಈ ಗ್ಯಾಂಗ್ ಸಿಕ್ಕಿಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೋಕ್ಸ್ ಹಂಟ್ ಎಂಬ ಹೆಸರಿನಲ್ಲಿ ದುಬೈ ಪೊಲೀಸರು ಪ್ರಾರಂಭಿಸಿದ ಕಾರ್ಯಾಚರಣೆಯಲ್ಲಿ ಅಂತರ್‌ರಾಷ್ಟ್ರೀಯ ವಂಚನೆ ತಂಡವನ್ನು ಬಂಧಿಸಲಾಗಿದೆ. ವಿವಿಧ ದೇಶಗಳಲ್ಲಿ ಉದ್ಯೋಗದ ಬರವಸೆ ನೀಡುವ ಮೂಲಕ ವಂಚಿಸುತ್ತಿದ್ದ ತಂಡವು,ಆನ್‌ಲೈನ್ ಮೂಲಕ ಹಣ ಪಡೆಯುತ್ತಿದ್ದವು. ಹೂಡಿಕೆದಾರರಿಗೆ ಲಾಭ ನೀಡುವುದಾಗಿ ನಂಬಿಸಿಯೂ ವಂಚನೆ ಮಾಡಿದ್ದಾರೆ ಎಂಬ ಆರೋಪವೂ ಇವರ ಮೇಲಿದೆ.

ಅವರು ಇಮೇಲ್ ಫಿಶಿಂಗ್ ಮೂಲಕ ಮಾಹಿತಿಯನ್ನು ಸೋರಿಕೆ ಮಾಡಿ ಕ್ರೆಡಿಟ್ ಕಾರ್ಡ್‌ಗಳಿಂದ ಹಲವರ ಹಣ ಕಬಳಿಸಿದ್ದರು. 1126 ಕ್ರೆಡಿಟ್‌ಗಳ ಮೂಲಕ 32 ಮಿಲಿಯನ್ ದಿರ್ಹಮ್‌ಗಳನ್ನು ಖಾತೆಗಳೆ ವರ್ಗಾಯಿಸಿದ್ದಾರೆ. ಗೌಪ್ಯ ಮಾಹಿತಿಯ ಪ್ರಕಾರ ವಂಚನೆಗೊಳಗಾದವರ ಪೈಕಿ ಒಬ್ಬರಾಗಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ದುಬೈ ಪೊಲೀಸ್ ಮುಖ್ಯಸ್ಥ ಮೇಜರ್ ಜನರಲ್ ಅಬ್ದುಲ್ಲಾ ಖಲೀಫಾ ಅಲ್-ಮರಿ ಹೇಳಿದ್ದಾರೆ.

ಈ ಬಂಧನವು ದುಬೈ ಪೊಲೀಸರ ಇತಿಹಾಸದಲ್ಲಿ ದೊಡ್ಡ ಸಾಧನೆ ಎಂದು ಅವರು ಹೇಳಿದರು.

error: Content is protected !! Not allowed copy content from janadhvani.com