janadhvani

Kannada Online News Paper

ಸೌದಿ: ಟ್ರಾಫಿಕ್ ಉಲ್ಲಂಘನೆಗಳ ದಂಡವನ್ನು ಗಡುಗಳಾಗಿ ಪಾವತಿಸಲಾಗದು

ರಿಯಾದ್: ಟ್ರಾಫಿಕ್ ಉಲ್ಲಂಘನೆಗಾಗಿ ಪಾವತಿಸಲಾಗುವ ದಂಡವನ್ನು ಗಡುಗಳಾಗಿ ಪಾವತಿಸುವುದು ಸಾಧ್ಯವಿಲ್ಲ ಎಂದು ಟ್ರಾಫಿಕ್ ಇಲಾಖೆ ತಿಳಿಸಿದೆ. ಹೆಚ್ಚಿನ ಉಲ್ಲಂಘನೆಗಳಿಗಾಗಿ ಪಾವತಿಸಬೇಕಾದ ದಂಡವನ್ನು ಒಟ್ಟಿಗೆ ಪಾವತಿಸಬೇಕಾಗಿಲ್ಲ ಎಂದು ಸಂಚಾರ ಇಲಾಖೆ ಹೇಳಿದೆ. ದಂಡ ಪಾವತಿಸುವ ಸಂದರ್ಭದಲ್ಲಿ ಜವಾಝಾತ್‌ನ ಆನ್‌ಲೈನ್ ಸೇವೆಯಾದ ಅಬ್ಶೀರ್ ಮೂಲಕ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಚಾಲಕರಿಗೆ ಅವಕಾಶವಿದೆ.

ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ವಿಧಿಸಿದ ದಂಡದ ಮೊತ್ತವು ಎಷ್ಟು ದೊಡ್ಡದಾದರೂ, ಒಂದೇ ಸಮಯದಲ್ಲಿ ಪಾವತಿಸಬೇಕು. ಬದಲಾಗಿ ಗಡುವಾಗಿ ಪಾವತಿಸುವ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲ. ಅದೇ ಸಮಯದಲ್ಲಿ, ಒಬ್ಬ ವ್ಯಕ್ತಿಯು ವಿವಿಧ ಉಲ್ಲಂಘನೆಗಳಿಗೆ ಒಂದಕ್ಕಿಂತ ಹೆಚ್ಚು ದಂಡ ವಿಧಿಸಲಾಗಿದ್ದರೆ ಅವುಗಳನ್ನು ವಿವಿಧ ಹಂತದಲ್ಲಿ ಪಾವತಿಸಿ, ಮುಗಿಸಬಹುದು.

ಟ್ರಾಫಿಕ್ ದಂಡ ಇದ್ದರೆ, ಅದನ್ನು ಪಾವತಿಸಿದ ಬಳಿವಷ್ಟೇ ಚಾಲನಾ ಪರವಾನಗಿ ನವೀಕರಣ, ವಾಹನ ಪರವಾನಗಿ (ಇಸ್ತಿಮಾರಾ), ನವೀಕರಣ ಮತ್ತು ಕಳೆದುಹೋದದ್ದನ್ನು ಬದಲಿಸಲು ಅರ್ಜಿ ಸಲ್ಲಿಸಬಹುದು. ಟ್ರಾಫಿಕ್ ದಂಡ ಇದ್ದರೆ, ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

ಅದೇ ರೀತಿ ವಾಹನ ಸಂಖ್ಯೆ ಫಲಕಗಳನ್ನು ರದ್ದುಗೊಳಿಸಲು ಮತ್ತು ವಾಹನದ ಸ್ಥಿತಿಯನ್ನು ಸರಿಪಡಿಸಲು ಹಿಂದಿನ ಎಲ್ಲಾ ದಂಡಗಳನ್ನು ಪಾವತಿಸಿರಬೇಕು. ಕಾನೂನು ಉಲ್ಲಂಘನೆಗಾಗಿ ವಶಕ್ಕೆ ತೆಗೆದುಕೊಂಡ ವಾಹನವನ್ನು ಮರುಪಡೆಯಲು ಈಗಾಗಲೇ ವಿಧಿಸಲಾದ ದಂಡದ ಸಂಪೂರ್ಣ ಮೊತ್ತವನ್ನು ಪಾವತಿಸಬೇಕು. ಕಾನೂನು ಉಲ್ಲಂಘಿಸಿದ ಬಗ್ಗೆ ತಪ್ಪು ಇರುವುದಾಗಿ ಕಂಡುಕೊಂಡರೆ, 30 ದಿನಗಳಲ್ಲಿ ನಿಮ್ಮ ದೂರನ್ನು ಅಬ್ಶೀರ್ ಮೂಲಕ ಸಲ್ಲಿಸಬಹುದು.

error: Content is protected !! Not allowed copy content from janadhvani.com