ಯುಎಇ-ಸ್ವದೇಶೀಕರಣ ಸಂಗ್ರಾಮದಲ್ಲಿ ಸಹಕರಿಸುವ ಖಾಸಗಿ ಕಂಪೆನಿಗಳಿಗೆ ವೀಸಾ ಶುಲ್ಕದಲ್ಲಿ ರಿಯಾಯ್ತಿ

ಅಬುಧಾಬಿ(ಜನಧ್ವನಿ ವಾರ್ತೆ): ಯುಎಇಯಲ್ಲಿ ಸ್ವದೇಶೀಕರಣ ಸಂಗ್ರಾಮದಲ್ಲಿ ಸಹಕರಿಸುವ ಖಾಸಗಿ ಕಂಪೆನಿಗಳಿಗೆ ವಿಸಾ ದರದಲ್ಲಿ ರಿಯಾಯ್ತಿ ನೀಡಲು ಆರಂಭಿಸಲಾಗಿದೆ ಎಂದು ಸಚಿವ ನಾಸರ್ ಬಿನ್ ಥಾನಿ ಅಲ್ ಹಾಮಿಲಿ ತಿಳಿಸಿದ್ದಾರೆ. ಸ್ವದೇಶೀಕರಣವನ್ನು ಪ್ರೋತ್ಸಾಹಿಸಲು ಕ್ಲಬ್‌ಗಳನ್ನು ರೂಪೀಕರಿಸಿ ಕಾರ್ಯಗಳನ್ನು ತ್ವರಿತಗೊಳಿಸಲಾಗುವುದು,ಈ ಕ್ಲಬ್‌ಗಳಲ್ಲಿ ಖಾಸಗಿ ಕಂಪೆನಿಗಳನ್ನು ಸದಸ್ಯರನ್ನಾಗಿ ಸೇರಿಸಲಾಗುವುದು ಎಂದವರು ತಿಳಿಸಿದ್ದಾರೆ.

ಓರ್ವ ವಿದೇಶೀ ಕಾರ್ಮಿಕನನ್ನು ಕರೆತರಲು 3000 ದಿರ್ಹಂ ಶುಲ್ಕವನ್ನು ಕಂಪೆನಿ ನೀಡಬೇಕಾಗುತ್ತದೆ. ಸ್ವದೇಶೀಕರಣದ ಕ್ಲಬ್‌ನಲ್ಲಿ ಸದಸ್ಯತ್ವವನ್ನು ಪಡೆದ ಕಂಪನಿಗೆ ಕೇವಲ 300 ದಿರ್ಹಂ ಆಗಿ ರಿಯಾಯ್ತಿ ಲಭಿಸಲಿದೆ. ಮಾತ್ರವಲ್ಲದೆ, ಸದ್ರಿ ಕಂಪೆನಿಗಳು ಸಚಿವಾಲಯದ ಪ್ಲಾಟಿನಂ ವಿಭಾಗಕ್ಕೆ ಸೇರಲಿದೆ ಎಂದು ಸಚಿವರು ತಿಳಿಸಿದರು.

ಆ ಮೂಲಕ ವಿಸಾ ಅರ್ಜಿಗಳ ದರವು ಕಡಿಮೆಯಾಗಲಿದೆ. ಸ್ವದೇಶೀ ಕರಣವನ್ನು ಪ್ರೋತ್ಸಾಹಿಸುವ ಸಲುವಾಗಿ ಕಳೆದ ವರ್ಷದಿಂದ ಕ್ಲಬ್  ಕಾರ್ಯಾಚರಿಸುತ್ತಿದ್ದು,ಪ್ಲಾಟಿನಂ, ಗೋಲ್ಡ್, ಸಿಲ್ವರ್ ಈ ರೀತಿಯಾಗಿ ಖಾಸಗಿ ಕಂಪನಿಗಳನ್ನು ಮೂರು ವಿಭಾಗಗಳನ್ನಾಗಿ ಮಾಡಿ ವಿಸಾ ದರದಲ್ಲಿ ರಿಯಾಯ್ತಿ ನೀಡಲಾಗುತ್ತಿದೆ.

ಸ್ವದೇಶೀ ಕಾರ್ಮಿಕರ ಸಂಖ್ಯೆಯನ್ನು ಆಧಾರಿಸಿ ಸದಸ್ಯತ್ವ :

ಪ್ರತೀ ಸ್ಥಾಪನೆಗಳಲ್ಲಿರುವ ಸ್ವದೇಶೀ ಕಾರ್ಮಿಕರ ಲೆಕ್ಕಾಚಾರವನ್ನು ಪರಿಗಣಿಸಿ ಕ್ಲಬ್ ನಲ್ಲಿ  ಸದಸ್ಯತ್ವವನ್ನು ನೀಡಲಾಗುತ್ತದೆ. ಕಂಪನಿಯಲ್ಲಿ ದುಡಿಯುವ ಮೊತ್ತ ಕಾರ್ಮಿಕರು, ಅವರ ವಿದ್ಯಾಭ್ಯಾಸ, ಸ್ವದೇಶಿಗಳ ಸಂಖ್ಯೆಗಳನ್ನು ಗಣಿಸಿ ಸಚಿವಾಲಯವು ರಿಯಾಯ್ತಿ ನೀಡಲಿದೆ.
ಕಂಪನಿಯ ಕಾರ್ಮಿಕ ನಿಲುವು, ಪರಿಶೀಲನೆ, ಕಾರ್ಯಾಚರಣೆ ಮುಂತಾದವುಗಳಿಗೆ ಮೌಲ್ಯ ನಿಗದಿಪಡಿಸಲಾಗಿದೆ. ಅದರ ಆಧಾರದಲ್ಲಿ ಕಂಪೆನಿಗಳಿಗೆ ಸಚಿವಾಲಯವು ಪಾಯಿಂಟ್ ನೀಡಲಿದೆ.

ಕ್ಲಬ್‌ಗಳಲ್ಲಿ ಸದಸ್ಯತ್ವವನ್ನು ಪಡೆದ ಕಂಪೆನಿಗಳು ಸಭೆ ಸೇರಿ ಕೆಲಸದ ಅನುಭವ ಮತ್ತು ಸಾಧನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ . ಈ ಕಾರಣದಿಂದಾಗಿ ಖಾಸಗಿ ಕಂಪನಿಗಳಲ್ಲಿ ಸ್ವದೇಶೀ ಕಾರ್ಮಿಕರ ನೇಮಕವು ತ್ವರಿತಗತಿಯಲ್ಲಿ ಸಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!