janadhvani

Kannada Online News Paper

ಅಸಾಸ್ ಮಲ್ಲೂರು: ಫೆ.7 ರಂದು ಗ್ರ್ಯಾಂಡ್ ಮಜ್ಲಿಸ್ ಅಹ್ಲ್ ಬದ್ರ್

ಮಲ್ಲೂರು: ಆಧ್ಯಾತ್ಮಿಕ ಚೈತನ್ಯ ಸೃಷ್ಟಿಸುತ್ತಿರುವ ಅಸಾಸ್ ಎಜುಕೇಶನ್ ಸೆಂಟರ್ ಮಲ್ಲೂರು ಇದರ ಅಧೀನದಲ್ಲಿ ಪ್ರತಿ ತಿಂಗಳು ನಡೆಯುತ್ತಿರುವ ಬಹು ನಿರೀಕ್ಷಿತ “ಮಜ್ಲಿಸ್ ಅಹ್ಲ್ ಬದ್ರ್ ” ಸಂಗಮವು ಫೆ.07-2020 ಶುಕ್ರವಾರ ಅಸ್ತಮಿಸಿದ ಶನಿವಾರ ಮಗ್ರಿಬ್ ನಮಾಜ್ ಬಳಿಕ ನಡೆಯಲಿದೆ.

ನೇತೃತ್ವ ಹಾಗೂ ಪ್ರಾರ್ಥನೆ: ಬಹು! ಸಯ್ಯಿದ್ ನಿಝಾಮುದ್ದೀನ್ ಸಖಾಫಿ ಬಾಫಖಿ ತಂಙಳ್ ಕೊಯಿಲಾಂಡಿ (ಮುದರ್ರಿಸ್ ಅಸಾಸ್ ಮಲ್ಲೂರು)

ಮುಖ್ಯಭಾಷಣ:ಎಂಪಿಎಂ ಅಶ್ರಫ್ ಸಅದಿ ಮಲ್ಲೂರು(ಅಧ್ಯಕ್ಷರು ಅಸಾಸ್ ಮಲ್ಲೂರು)

ಬದ್ರ್ ಮಹಾತ್ಮರ ಸ್ಮರಣೆ ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂಬುವುದು ಇಂದು ಪ್ರತ್ಯಕ್ಷವಾಗಿ ಕಂಡುಬರುತ್ತಿರುವ ಫಲಿತಾಂಶ ವಾಗಿದೆ. ಮಲ್ಲೂರು ಎಂಬ ಗ್ರಾಮ ಇಂದು ವಿಶ್ವಾಸಿ ಸಮೂಹದಲ್ಲಿ ಅಚ್ಚೊತ್ತುವಂತೆ ಮಾಡಿರುವುದು ಕೂಡ ಮಲ್ಲೂರಿನ ಹಿರಿಮೆಗೆ ಹೊಸತೊಂದು ಅಧ್ಯಾಯವಾಗಿ ಬೆಳೆದು ಬಂದಿರುವ ಇಸ್ಲಾಮಿನ ಪ್ರೌಡಿಯನ್ನು ಬೆಳೆಸುವಂತೆ ಆಧ್ಯಾತ್ಮಿಕವಾಗಿ ಚೈತನ್ಯ ಮೂಡಿಸುವಲ್ಲಿ ಯಶಸ್ವಿಯಾಗಿ ತಲೆ ಎತ್ತಿ ನಿಂತಿದೆ “ಅಸಾಸ್ ಎಜುಕೇಶನ್ ಸೆಂಟರ್”

ಪ್ರತೀ ತಿಂಗಳ ಮೊದಲ ಶುಕ್ರವಾರ ಅಸ್ತಮಿಸಿದ ಶನಿವಾರ ರಾತ್ರಿ ಸಂಸ್ಥೆಯಲ್ಲಿ ನಡೆದು ಬರುತ್ತಿರುವ ಮಜ್ಲಿಸ್ ಅಹ್ಲ್ ಬದ್ರ್ ಇಂದು ವಿಶ್ವಾಸಿ ಸಮೂಹದಲ್ಲಿ ಜನಜನಿತವಾಗಿದೆ. ಸಮಸ್ಯೆಗಳನ್ನು ಹೊತ್ತು ತಂದು ಪ್ರಾರ್ಥಿಸುವ ಕೈಗಳಿಗೆ ಪರಿಹಾರದ ಅಭಯ ಕೇಂದ್ರವಾಗಿ ಮಜ್ಲಿಸ್ ಅಹ್ಲ್ ಬದ್ರ್ ಮಾರ್ಪಟ್ಟಿದೆ. ಮುತ ಅಲ್ಲಿಮ್ ಗಳು ಹಾಗು ವಿಶ್ವಾಸಿ ಸಮೂಹದಿಂದ ತುಂಬುವ ಮಜ್ಲಿಸ್ ವಿಶ್ವಾಸಿ ಹೃದಯಗಳಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ಸೃಷ್ಟಿಸುತ್ತಿದೆ.

ಸಂಸ್ಥೆಯು ಭಾಫಕಿ ಕುಟುಂಬದ ಅಗ್ರಗಣ್ಯ ಅಹ್ಲ್ ಭೈತ್ ಪರಂಪರಣೆಯ ಆಧ್ಯಾತ್ಮಿಕ ನೇತೃತ್ವವನ್ನು ಹೊಂದಿದ್ದು ಸಯ್ಯಿದ್ ನಿಝಾಮುಧ್ಧೀನ್ ಸಖಾಫಿ ಭಾಫಕಿ ತಂಙಲ್ ಪ್ರಧಾನ ಮುದರಿಸ್ ಆಗಿ ಸೇವೆ ಸಲ್ಲಿಸುತ್ತಿದ್ದು, ಸುನ್ನೀ ಕರ್ನಾಟಕದ ನಾಯಕರೂ ಆದ ಪಂಡಿತವರೇನ್ಯರು ಆಧ್ಯಾತ್ಮಿಕ ವೇಧಿಕೆಗಳಲ್ಲಿ ಆತ್ಮೀಯ ನಾಯಕತ್ವವನ್ನು ನೀಡುತ್ತಿರುವ ಪ್ರಗಲ್ಭ ವಾಗ್ಮಿ ಎಂ.ಪಿ.ಎಂ ಅಶ್ರಫ್ ಸಅದಿ ಮಲ್ಲೂರು ರವರ ನಾಯಕತ್ವದಲ್ಲಿ ಸಂಸ್ಥೆ ಅಲ್ಪಕಾಲದಲ್ಲೇ ತನ್ನ ಸಂದೇಶವನ್ನು ಜಿಲ್ಲೆಯಿಡೀ ವ್ಯಾಪಿಸುವಂತೆ ಪ್ರಚಾರಹೊಂದಿದೆ.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪತ್ರಿಕಾ ಪ್ರಕಟನೆಯಲ್ಲಿ ಕೋರಲಾಗಿದೆ.

ವಿದೇಶದಲ್ಲಿರುವ ಅಸಾಸ್ ಅಭಿಮಾನಿಗಳಿಗಾಗಿ ಕಾರ್ಯಕ್ರಮವು KSOCR ನಲ್ಲಿ ನೇರ ಪ್ರಸಾರಗೊಳ್ಳಲಿದೆ.

(ವ್ಯವಸ್ಥಾಪಕರು ಅಸಾಸ್ ವಿದ್ಯಾ ಸಂಸ್ಥೆ ಮಲ್ಲೂರು)

error: Content is protected !! Not allowed copy content from janadhvani.com