janadhvani

Kannada Online News Paper

ಗೃಹ ಕಾರ್ಮಿಕರು ಪ್ರೊಬೇಷನ್ ಕಾಲಾವಧಿಯಲ್ಲಿ ಎಕ್ಸಿಟ್ ವೀಸಾ ಪಡೆಯಬಹುದು

ರಿಯಾದ್: ಮನೆ ಚಾಲಕ, ಮನೆ ಕೆಲಸದ ವೀಸಾದಲ್ಲಿ ಬರುವವರು ಪ್ರಥಮ ಮೂರು ತಿಂಗಳ ಪ್ರೊಬೇಷನ್ ಕಾಲದಲ್ಲಯೇ ಎಕ್ಸಿಟ್ ವೀಸಾ ಪಡೆದು ಹಿಂತಿರುಗಬಹುದು. 90 ದಿನಗಳಲ್ಲಿ ಇಖಾಮಾವನ್ನು ಪಡೆಯದವರ ಎಕ್ಸಿಟ್ ಪ್ರಕ್ರಿಯೆಯನ್ನು ಸೌದಿ ಪಾಸ್‌ಪೋರ್ಟ್ ವಿಭಾಗದ (ಜವಾಝಾತ್) ಆನ್‌ಲೈನ್ ಸೇವೆಯಾದ ಅಬ್ಶೀರ್ ಮೂಲಕ ಪೂರ್ಣಗೊಳಿಸಬಹುದು ಎಂದು ಪಾಸ್‌ಪೋರ್ಟ್ ಡೈರೆಕ್ಟರೇಟ್ ತಿಳಿಸಿದೆ.

ಹಾಗೆ ಮಾಡಲು ಉದ್ಯೋಗದಾತರಿಗೆ (ಪ್ರಾಯೋಜಕರು) ನಿಗದಿಪಡಿಸಿದ ಕೆಲವು ಷರತ್ತುಗಳಿವೆ. ಅವರ ಅಡಿಯಲ್ಲಿರುವ ಗೃಹ ಮತ್ತು ಗೃಹೇತರ ಕಾರ್ಮಿಕರ ಸಂಖ್ಯೆ 100 ಕ್ಕಿಂತ ಮೀರಬಾರದು. ಕೆಲಸಗಾರನು ಸೌದಿ ಅರೇಬಿಯಾದಿಂದ ಹೊರಗಿರುವ ಅಥವಾ ಮೃತಪಟ್ಟ ವ್ಯಕ್ತಿ ಅಥವಾ ಕೆಲಸ ಇಲ್ಲದ ವ್ಯಕ್ತಿಯಾಗಿರಬಾರದು. ಕಾಣೆಯಾಗಿದ್ದಾರೆ ಎಂದು ಜವಾಝಾತ್‌ನಲ್ಲಿ ದೂರು ದಾಖಲಾಗಿ ಹುರೂಬ್ ಮಾಡಲ್ಪಟ್ಟ ವ್ಯಕ್ತಿಯೂ ಆಗಿರಬಾರದು. ಕಾರ್ಮಿಕ, ಟ್ರಾಫಿಕ್ ಕಾನೂನು ಉಲ್ಲಂಘನೆಯ ದಂಡನೆಗೆ ಒಳಗಾಗಿರಬಾರದು. ಕಾರ್ಮಿಕನ ಪಾಸ್‌ಪೋರ್ಟ್ ಗೆ ಎರಡು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಕಾಲಾವಧಿ ಇರಬೇಕು.

ಈ ಷರತ್ತುಗಳು ಅನ್ವಯಿಸುವ ಗೃಹ ಕಾರ್ಮಿಕರ ವೀಸಾಗಳನ್ನು ಮಾತ್ರ ಅಬ್ಶೀರ್ ಮೂಲಕ ಸೌದಿ ಅರೇಬಿಯಾಕ್ಕೆ ಬಂದ ಮೂರು ತಿಂಗಳೊಳಗೆ ರದ್ದುಗೊಳಿಸಬಹುದು. ಅಬ್ಶಿರ್ ಪೋರ್ಟಲ್ ಅನ್ನು ಪ್ರವೇಶಿಸಿ ‘ಖಿದ್ಮಾತುಲ್ ಮಕ್ಫುಲೀನ್’ ಎನ್ನುವ ಗುಂಡಿ ಒತ್ತುವ ಮೂಲಕ ನಿರ್ಗಮನ ವೀಸಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಎಲ್ಲಾ ದೇಶೀಯರು ಮತ್ತು ವಿದೇಶಿಯರು ಸೇವೆಗಳಿಗಾಗಿ ಅಬ್ಶೀರ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಪಾಸ್‌ಪೋರ್ಟ್ ಇಲಾಖೆ ವಿನಂತಿಸಿದೆ.

error: Content is protected !! Not allowed copy content from janadhvani.com