janadhvani

Kannada Online News Paper

ಸೌದಿ: ಫಾರ್ಮಸಿ ಕ್ಷೇತ್ರದಲ್ಲಿ 50% ‘ಸ್ವದೇಶೀಕರಣ’ ಜಾರಿ

ರಿಯಾದ್: ಸೌದಿಯಲ್ಲಿ ಸ್ವದೇಶೀಕರಣ ಪ್ರಕ್ರಿಯೆಯನ್ನು ಹೆಚ್ಚಿನ ವಲಯಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಎರಡು ಹಂತಗಳಲ್ಲಿ ಫಾರ್ಮಸಿ ಕ್ಷೇತ್ರದಲ್ಲಿ 50% ದೇಶೀಕರಣವನ್ನು ಜಾರಿಗೊಳಿಸುವ ನಿರ್ಧಾರವನ್ನು ಘೋಷಿಸಲಾಗಿದೆ ಎಂದು ಕಾರ್ಮಿಕ ಸಚಿವ ಅಹ್ಮದ್ ಅಲ್-ರಾಜಿ ಹೇಳಿದರು. ಮೊದಲ ಹಂತದಲ್ಲಿ ಶೇಕಡಾ 20 ರಷ್ಟು ಜುಲೈ 22 ರಿಂದ ಮತ್ತು ಎರಡನೇ ಹಂತದಲ್ಲಿ 30 ಶೇಕಡಾ ಜುಲೈ 11ರಿಂದಲೂ ಜಾರಿಗೆ ಬರಲಿದೆ ಎಂದು ಕಾರ್ಮಿಕ ಸಚಿವರು ಹೇಳಿದರು.

ಐದು ಅಥವಾ ಅದಕ್ಕಿಂತ ಹೆಚ್ಚಿನ ವಿದೇಶೀ ಕಾರ್ಮಿಕರಿರುವ ಸಂಸ್ಥೆಗಳಿಗೆ ಈ ಕ್ರಮ ಅನ್ವಯಿಸುತ್ತದೆ. ವೈದ್ಯಕೀಯ ಕೇಂದ್ರಗಳು, ಚಿಕಿತ್ಸಾಲಯಗಳು, ಆಸ್ಪತ್ರೆಗಳು ಮತ್ತು ಔಷಧಾಲಯಗಳು ಸೇರಿದಂತೆ ಫಾರ್ಮಸಿಸ್ಟ್‌ಗಳನ್ನು ನೇಮಿಸುವ ಸಂಸ್ಥೆಗಳಿಗೆ ಹೊಸ ನಿರ್ಧಾರ ಅನ್ವಯಿಸುತ್ತದೆ.

ಏತನ್ಮಧ್ಯೆ, ಔಷಧೀಯ ಕಂಪನಿಗಳು, ಏಜೆನ್ಸಿಗಳು, ವಿತರಕರು ಮತ್ತು ಕಾರ್ಖಾನೆಗಳಲ್ಲಿನ ಫಾಎ್ಮಸಿಸ್ಟರು ಉತ್ಪನ್ನ ಮಾರುಕಟ್ಟೆ ತಜ್ಞ ವೃತ್ತಿಯಲ್ಲಿ ಕೆಲಸ ಮಾಡುವವರನ್ನು ಈ ತೀರ್ಮಾನದಿಂದ ಹೊರಗಿಡಲಾಗಿದೆ.

error: Content is protected !! Not allowed copy content from janadhvani.com