janadhvani

Kannada Online News Paper

ಸೌದಿ ಚಾಲಕರ ಗಮನಕ್ಕೆ: ವಾಹನವನ್ನು 20 ಮೀ. ಹಿಂದಕ್ಕೆ ಚಲಾಯಿಸಿದರೆ ದಂಡ

ರಿಯಾದ್: ಸೌದಿ ಅರೇಬಿಯಾದಲ್ಲಿ ವಾಹನ ಚಲಾಯಿಸುವವರಿಗೆ ಟ್ರಾಫಿಕ್ ಡೈರೆಕ್ಟರೇಟ್ ಎಚ್ಚರಿಕೆ ನೀಡಿದ್ದು, ಪ್ರಧಾನ ರಸ್ತೆಯಲ್ಲಿ 20 ಮೀಟರ್‌ಗಿಂತ ಹೆಚ್ಚು ಹಿಂದಕ್ಕೆ ಚಲಾಯಿಸಬಾರದು ಎಂದಿದೆ. ಇದು ದಂಡ ವಿಧಿಸಬಹುದಾದ ಕಾನೂನು ಉಲ್ಲಂಘನೆ ಎಂದು ಟ್ರಾಫಿಕ್ ಇಲಾಖೆ ವ್ಯಕ್ತಪಡಿಸಿದೆ.

150 ರಿಯಾಲ್‌ನಿಂದ ಹಿಡಿದು 300 ರಿಯಾಲ್ ವರೆಗೆ ದಂಡ ವಿಧಿಸಬಹುದಾದ ಉಲ್ಲಂಘನೆಯಾಗಿದ್ದು, ಪ್ರಧಾನ ರಸ್ತೆಯಲ್ಲಿ ನಿಯಮಾನುಸಾರ, ಸುರಕ್ಷಿತವಾಗಿ ಹೊರಗೆ ಚಲಿಸುವುದು ಸಾಧ್ಯವಿಲ್ಲದಾಗ ಮುಂದಿನ ಎಕ್ಸಿಟ್ ವರೆಗೆ ಚಲಿಸುವುದು ಸರಿಯಾದ ರೀತಿಯಾಗಿದೆ.

ಅನಿರೀಕ್ಷಿತವಾಗಿ ವಾಹನದ ಚಕ್ರ ಪಂಕ್ಚರ್ ಆದರೆ, ತಕ್ಷಣ ಎಕ್ಸಿಲೇಟರ್‌ನಿಂದ ಕಾಲು ತೆಗೆದು, ಬ್ರೇಕ್ ಹಾಕದೆ ಸ್ಟಿಯರಿಗ್ ಗಟ್ಟಿಯಾಗಿ ಹಿಡಿಯಬೇಕು. ನಂತರ ಬಲಬದಿಯಲ್ಲಿ ಜನರಿಲ್ಲ ಎಂಬುದನ್ನು ಖಾತರಿಪಡಿಸಿ, ವಾಹನವನ್ನು ನಿಲ್ಲಿಸಲು ಪ್ರಯತ್ನಿಸಬೇಕು. ಈ ವೇಳೆ ವಾಹನ ತುರ್ತು ದೀಪಗಳನ್ನು ಬಳಸಬೇಕೆಂದು ಟ್ರಾಫಿಕ್ ಖಾತೆಯು ತಿಳಿಸಿದೆ.

error: Content is protected !! Not allowed copy content from janadhvani.com