ರಷ್ಯಾದಲ್ಲಿ ವಿಮಾನ ಪತನ -71 ಮಂದಿ ಸಾವು

ಮಾಸ್ಕೋ: ರಷ್ಯಾದಲ್ಲಿ ವಿಮಾನವೊಂದು ಪತನಹೊಂದಿದ್ದು, 65 ಪ್ರಯಾಣಿಕರು ಸೇರಿದಂತೆ ಒಟ್ಟು 71 ಮಂದಿ ಸಾವನ್ನಪ್ಪಿದ್ದಾರೆ.

ಸರಟೋವ್ ಏರ್‍ಲೈನ್ಸ್‍ಗೆ ಸೇರಿದ ಈ ಪ್ಲೇನ್ ಮಾಸ್ಕೋದ ಡುಮೆಡೆಡ್ವೋ ವಿಮಾನ ನಿಲ್ದಾಣದಿಂದ ಟೇಕ್‍ಆಫ್ ಆದ ಸ್ವಲ್ಪಹೊತ್ತಿಗೆ ಎಟಿಸಿ ಸಂಪರ್ಕ ಕಡಿದುಕೊಂಡು ಅರ್ಗನೋವ್ ಗ್ರಾಮದ ಬಳಿ ಪತನ ಆಗಿದೆ.

ಮಾಸ್ಕೋದಿಂದ 80 ಕಿ.ಮೀ ದೂರದಲ್ಲಿ ಈ ವಿಮಾನ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು, ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ರಷ್ಯಾ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿಮಾನ ಪತನ ಹೊಂದಲು ನಿಖರ ಕಾರಣ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *

error: Content is protected !!