janadhvani

Kannada Online News Paper

ಇನ್ಮುಂದೆ ದುಬೈ ನಗರದಲ್ಲಿನ ಪಾರ್ಕಿಂಗ್ ಮೀಟರ್‌ಗಳು ‘ಸ್ಮಾರ್ಟ್‌’

ದುಬೈ: ದುಬೈ ನಗರದಲ್ಲಿನ ಪಾರ್ಕಿಂಗ್ ಮೀಟರ್‌ಗಳನ್ನು ಸ್ಮಾರ್ಟ್‌ಗೊಳಿಸಲಾಗಿದೆ. ದುಬೈ ಆರ್‌ಟಿಎ ಎಮಿರೇಟ್‌ನ ಎಲ್ಲಾ ಪಾರ್ಕಿಂಗ್ ಮೀಟರ್‌ಗಳನ್ನು ಇ-ಪಾರ್ಕಿಂಗ್‌ಗೆ ಅನುಕೂಲಕರವಾಗಿಸಲು ಕ್ರಮಗಳನ್ನು ಪ್ರಾರಂಭಿಸಿದೆ.

ಇ-ಪಾರ್ಕಿಂಗ್ ಮೀಟರ್‌ಗಳಲ್ಲಿ ಪಾರ್ಕಿಂಗ್ ಶುಲ್ಕವನ್ನು ಪಾವತಿಸಿದರೆ ಹಿಂದಿನಂತೆ ರಶೀದಿಯನ್ನು ವಾಹನದ ಡ್ಯಾಶ್‌ಬೋರ್ಡ್‌ನಲ್ಲಿ ಪ್ರದರ್ಶಿಸುವ ಅಗತ್ಯವಿಲ್ಲ. ಪಾರ್ಕಿಂಗ್ ವಿವರಗಳು ಆರ್‌ಟಿಎ ಡೇಟಾಬೇಸ್‌ನಲ್ಲಿ ಲಭ್ಯವಾಗಲಿದೆ. ಅಗತ್ಯವಿದ್ದರೆ ಮಾತ್ರ ರಶೀದಿಯನ್ನು ಮುದ್ರಿಸಬಹುದಾಗಿದೆ. ದುಬೈನ ವಿವಿಧ ಕಡೆ ಸ್ಥಾಪಿಸಲಾಗಿದ್ದು, ಪಾರ್ಕಿಂಗ್ ಮೀಟರ್‌ಗಳನ್ನು ಎಮಿರೇಟ್‌ನಾದ್ಯಂತ ವಿಸ್ತರಿಸಲು ಆರ್‌ಟಿಎ ಪ್ರಾರಂಭಿಸಿದೆ, 2022ರ ವೇಳೆಗೆ, ಎಲ್ಲಾ ಪಾರ್ಕಿಂಗ್ ಮೀಟರ್‌ಗಳು ಇ-ಪಾರ್ಕಿಂಗ್‌ ಆಗಿ ಸಜ್ಜುಗೊಳ್ಳಲಿವೆ.

ಅಂತಹ ಪಾರ್ಕಿಂಗ್ ಮೀಟರ್‌ಗಳಿಗೆ ವಾಹನದ ನೋಂದಣಿ ಮತ್ತು ನೋಂದಾಯಿತ ಎಮಿರೇಟ್‌ಗಳ ವಿವರವನ್ನು ನಮೂದಿಸಿ ಬಳಿಕ ಶುಲ್ಕ ಪಾವತಿಸಬೇಕಾಗುತ್ತದೆ. ಅಂತಹ ಮೀಟರ್‌ಗಳು ಅಗತ್ಯವೆಂದು ನಗರವಾಸಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸ್ಮಾರ್ಟ್‌ಸಿಟಿ ಮತ್ತು ಕಾಗದರಹಿತ ಆಡಳಿತದ ಗುರಿ ಸಾಧಿಸುವ ಭಾಗವಾಗಿ ಈ ಕ್ರಮ ಎನ್ನಲಾಗಿದೆ.

error: Content is protected !! Not allowed copy content from janadhvani.com