ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಜೀವನವನ್ನು ಮುಗಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಚ್ಕೆ ಪಾಟೀಲ್ ಅವರು ಹೇಳಿದರು. ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರಿಗೆ ಅವರ ಹೈಕಮಾಂಡ್ ಯಾವುದೇ ಬೆಂಬಲವನ್ನು ನೀಡದಿರುವ ಮೂಲಕ ಅವರನ್ನ ಅಸಮರ್ಥನನ್ನಾಗಿ ಮಾಡಲು ಬಯಸುತ್ತಿದೆ ಎಂದಿದ್ದಾರೆ.
Senior Congress leader HK Patil: BJP high command wants to destroy career of Karnataka CM BS Yediyurappa. High command want to render him incapable by not providing him any support. Delay in cabinet expansion is slowing down development in the state. pic.twitter.com/KpDua5BI1G
— ANI (@ANI) January 28, 2020
ಅಂತೆಯೇ ಮಾತನಾಡಿ, ಇಲ್ಲಿವರೆಗೂ ರಾಜ್ಯದ ಕ್ಯಾಬಿನೆಟ್ ವಿಸ್ತರಣೆಯಾಗಿಲ್ಲ. ಈ ವಿಳಂಬವು ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತದೆ ಎಂದು ಹೆಚ್.ಕೆ ಪಾಟೀಲ್ ಅವರು ನುಡಿದರು.