ಭಾರತದ ಮಾರುಕಟ್ಟೆಗೆ ಪ್ರವೇಶಿಸಿದ ಟೊಯೊಟಾ ಯಾರಿಸ್

ಮದ್ಯ ಪ್ರಾಚ್ಯ ದೇಶಗಳಲ್ಲಿ ಅತ್ಯಂತ ಜನಪ್ರಿಯವಾದ ಟೊಯೊಟಾ ಕಂಪೆನಿಯ ಯಾರಿಸ್ ಕಾರನ್ನು ಸಂಸ್ಥೆ ಇದೀಗ ಭಾರತದ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದ್ದು ಈ ಮೂಲಕ ಟೊಯೋಟಾ ಕಾರು ಇದೀಗ ವಿಶ್ವಮಟ್ಟದ ಸೆಡಾನ್- ಯಾರಿಸ್‍ನೊಂದಿಗೆ ಭಾರತೀಯ ಬಿ-ಹೈ ವಿಭಾಗವನ್ನು ಪ್ರವೇಶಿಸಿದೆ. ಈ ಮೂಲಕ ಪ್ರಸಕ್ತ ವರ್ಷದ ಅತ್ಯಂತ ನಿರೀಕ್ಷೆಯ ಕಾರ್ ಆದ ಯಾರಿಸ್‍ನ ಅನಾವರಣದೊಂದಿಗೆ ಆಟೋ ಎಕ್ಸ್‍ಪೊ 2018ರಲ್ಲಿನ ಉತ್ಸಾಹವನ್ನು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಮತ್ತಷ್ಟು ಹೆಚ್ಚಿಸಿದೆ.

ಟೊಯೋಟಾದ ಖ್ಯಾತಿಯ ತತ್ವವಾದ ಕ್ಯೂಡಿಆರ್ (ಗುಣಮಟ್ಟ, ದೀರ್ಘಬಾಳಿಕೆ ಮತ್ತು ನಂಬಿಕಾರ್ಹತೆ) ಗಳನ್ನು ಆಧರಿಸಿ ನಿರ್ಮಿಸಲಾದ ಈ ವಿಶ್ವಮಟ್ಟದ ಸೆಡಾನ್ ತನ್ನ ಐಷಾರಾಮಿತನಕ್ಕೆ ತಕ್ಕಂತೆ ಉನ್ನತೀಕರಣಗೊಂಡಿದೆ.

ಯಾರಿಸ್‍ನ್ನು ಟೊಯೋಟಾದ ಕ್ಯೂಡಿಆರ್ ತತ್ವದ ಮೇಲೆ ನಿರ್ಮಿಸಲಾಗಿದ್ದು ತನ್ನ ವಿಭಾಗದಲ್ಲಿ ಪ್ರಥಮ ಎನಿಸಿದ 12 ವಿಶೇಷತೆಗಳಾದ ಪವರ್ ಡ್ರೈವರ್ ಸೀಟ್, 7ಎಸ್‍ಆರ್‍ಎಸ್ ಏರ್‍ಬ್ಯಾಗ್‍ಗಳು, ರೂಫ್ ಮೌಂಟೆಡ್ ಏರ್ ವೆಂಟ್‍ಗಳು, ಟಿಪಿಎಂಎಸ್, ಫ್ರಂಟ್ ಪಾರ್ಕಿಂಗ್ ಸೆನ್ಸರ್‍ಗಳು, ಎಲ್ಲಾ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‍ಗಳನ್ನು ಇದು ಒಳಗೊಂಡಿದೆ. ಯಾರಿಸ್ ತನ್ನ ಅತ್ಯಾಧುನಿಕ ಒಳಾಂಗಣ ವಿನ್ಯಾಸ ಮತ್ತು ಇತ್ತೀಚಿನ ಉನ್ನತ ಮಟ್ಟದ ಹೊರಾಣಗಣ ವಿನ್ಯಾಸಗಳೊಂದಿಗೆ ಜಾಗತಿಕ ಯುವ ಆಶಯಪೂರ್ಣ ಖರೀದಿದಾರರ ಗಮನೆ ಸೆಳೆದು ಭಾವನಾತ್ಮಕ ಸಂಪರ್ಕ ಸ್ಥಾಪಿಸುತ್ತದೆ. ನೂತನ ಮೌಲ್ಯದ ಆದ್ಯ ಪ್ರವರ್ತಕ ಎಂಬ ಅಭಿವೃದ್ಧಿ ಚಿಂತನೆಯಲ್ಲಿ ಬಂದಿರುವ ಯಾರಿಸ್ ಪ್ರತ್ಯೇಕವಾದ ವಿನ್ಯಾಸ, ಸ್ಥಳಾನುಕೂಲ, ಗುಣಮಟ್ಟ ಮತ್ತು ಅನುಕೂಲ ಸಾದರಪಡಿಸುತ್ತಿದ್ದು ಇದನ್ನು ಉನ್ನತವರ್ಗದ ವಾಹನಗಳೊಂದಿಗೆ ಹೋಲಿಕೆ ಮಾಡಬಹುದು.

ನೂತನ ಯಾರಿಸ್‍ನಲ್ಲಿ ಉನ್ನತ ಮತ್ತು ಭಾವನಾತ್ಮಕ ವಿನ್ಯಾಸ, ವಿಸ್ತಾರವಾದ ಅನುಕೂಲ, ಉನ್ನತವಾದ ಸವಾರಿ ಗುಣಮಟ್ಟ ಮತ್ತು ನಿಶ್ಯಬ್ದತೆ, ಚಲನಶೀಲ ಕಾರ್ಯಕ್ಷಮತೆ ಹಾಗೂ ತನ್ನ ವರ್ಗದಲ್ಲಿ ಮುಂಚೂಣಿಯ ಸುರಕ್ಷತೆ ಮತ್ತು ತಂತ್ರಜ್ಞಾನಗಳು ಸೇರಿವೆ. ಗ್ರಾಹಕರಿಗೆ ಈ ಕಾರುಗಳ ಬುಕಿಂಗ್ ಏಪ್ರಿಲ್ 2018ರಿಂದ ಆರಂಭವಾಗಲಿದೆ.
ಈ ಬಗ್ಗೆ ಟೊಯೋಟಾ ಮೋಟಾರ್ ಕಾರ್ಪೋರೇಷನ್‍ನ ಮುಖ್ಯ ಇಂಜಿನಿಯರ್ ಟಕಟೋಮೊ ಸುಜುಕಿ ಅವರು ಮಾತನಾಡಿ, ನೂತನ ಮೌಲ್ಯದ ಆದ್ಯಪ್ರವರ್ತಕ ಯಾರಿಸ್‍ನೊಂದಿಗೆ ಭಾರತದಲ್ಲಿ ಬಿ-ಹೈ ವಿಭಾಗವನ್ನು ಟೊಯೋಟಾ ಪ್ರವೇಶಿಸಿರುವುದಕ್ಕೆ ನಾವು ಸಂತಸಗೊಂಡಿದ್ದೇವೆ.

ದೇಶದಲ್ಲಿ ಬ್ರಾಂಡ್ ಟೊಯೋಟಾವನ್ನು ನೂತನ ಗ್ರಾಹಕರಿಗೆ ಪರಿಚಯಿಸುವ ಮಾದರಿ ಯಾರಿಸ್ ಆಗಿದೆ ಎಂದು ನಾವು ಎದುರು ನೋಡುತ್ತಿದ್ದೇವೆ. ಪ್ರಮುಖ ಮತ್ತು ಉನ್ನತ ಪ್ರದರ್ಶನದ ವಾಹನವನ್ನು ಬಯಸುವ ಭಾರತೀಯ ಖರೀದಿದಾರರ ಪ್ರತಿರೂಪವನ್ನು ತಯಾರಿಸಲು ಯಾವುದೇ ವಿಷಯದಲ್ಲಿ ರಾಜಿಯಾಗದೆ ನಾವು ನೂತನ ಸೆಡಾನ್‍ನ್ನು ಅಭಿವೃದ್ಧಿಪಡಿಸಿದ್ದೇವೆ. ಯಾರಿಸ್‍ನ ವಿನ್ಯಾಸ ಚಿಂತನೆ ಸಾಂಪ್ರದಾಯಿಕ ಚಿಂತನೆಗಳಿಂದಲ್ಲದೆ ಗ್ರಾಹಕರ ಅಗತ್ಯಗಳಿಂದಲೇ ಸ್ಫೂರ್ತಿಗೊಂಡಿದ್ದು ಇದು ಎಲ್ಲರ ನಿರೀಕ್ಷೆಗಳನ್ನು ಮೀರಲಿದೆ ಎಂಬ ಖಾತ್ರಿ ನಮಗಿದೆ ಎನ್ನುತ್ತಾರೆ.

ಅನಾವರಣ ಸಂದರ್ಭದಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‍ನ ವ್ಯವಸ್ಥಾಪಕ ನಿರ್ದೇಶಕ ಅಕಿಟೊ ತಾಚಿಬಾನಾ ಮತ್ತು ಟೊಯೋಟಾ ಕಿರ್ಲೋಸ್ಕರ್ ಮೋಟಾರ್‍ನ ಮಾರಾಟ ಮತ್ತು ಸೇವಾ ವಿಭಾಗದ ಉಪ ವ್ಯವಸ್ಥಾಪಕ ನಿರ್ದೇಶಕ ಎನ್.ರಾಜ ಇದ್ದರು.

One thought on “ಭಾರತದ ಮಾರುಕಟ್ಟೆಗೆ ಪ್ರವೇಶಿಸಿದ ಟೊಯೊಟಾ ಯಾರಿಸ್

Leave a Reply

Your email address will not be published. Required fields are marked *

error: Content is protected !!