janadhvani

Kannada Online News Paper

paytm: 3ಸಾವಿರ ಮೊಬೈಲ್ ಸಂಖ್ಯೆಯಿಂದ,53 ಸಾವಿರ ಗ್ರಾಹಕರಿಗೆ ವಂಚನೆ- ಎಚ್ಚರಿಕೆ

ನವದೆಹಲಿ:ಆನ್ಲೈನ್ ಫ್ರಾಡ್ ಯಾರ ಜೊತೆಗೂ ಕೂಡ ಸಂಭವಿಸಬಹುದು. ಹೀಗಾಗಿ ಮೊದಲು ನೀವು ಇದಕ್ಕೆ ಸಂಬಂಧಿಸಿದಂತೆ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಈ ಮಧ್ಯೆ ಖ್ಯಾತ ಮೊಬೈಲ್ ವ್ಯಾಲೆಟ್ ಕಂಪನಿಯಾಗಿರುವ paytm ಆಪ್ ನ paytm bank, ಕೇಂದ್ರ ಗೃಹ ಸಚಿವಾಲಯ, ಭಾರತೀಯ ದೂರ ಸಂಪರ್ಕ ಪ್ರಾಧಿಕಾರ ಹಾಗೂ CERT-in ಗೆ ಸುಮಾರು 3500 ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ಸಲ್ಲಿಸಿದ್ದು, ಇದರಿಂದ ಗ್ರಾಹಕರಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಈ ಮೊಬೈಲ್ ಸಂಖ್ಯೆಗಳಿಂದ ಅಮಾಯಕ ಗ್ರಾಹಕರಿಗೆ ವಂಚನೆಯಾಗುವ ಸಾಧ್ಯತೆ ಇದೆ ಎಂದು paytm ಎಚ್ಚರಿಸಿದೆ.

ಕಳೆದ 11 ವರ್ಷಗಳಲ್ಲಿ ಸುಮಾರು 53,334 ಗ್ರಾಹಕರು ವಂಚನೆಗೆ ಒಳಗಾಗಿದ್ದಾರೆ. ಇವುಗಳಲ್ಲಿ ಗ್ರಾಹಕರು ಒಟ್ಟು 2.05 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಇತ್ತೀಚೆಗೆ RBI ನೀಡಿರುವ ವರದಿಯ ಪ್ರಕಾರ ಡಿಜಿಟಲ್ ವ್ಯವಹಾರಗಳಲ್ಲಿ 2018-19ನೇ ಆರ್ಥಿಕ ವರ್ಷದಲ್ಲಿ ಒಟ್ಟು 71,500 ಕೋಟಿ ರೂ.ಗಳ ಬ್ಯಾಂಕಿಂಗ್ ವಂಚನೆ ಎಸಗಲಾಗಿದೆ ಎಂದು ಹೇಳಿದೆ.

ಈ ಅವ್ಯವಹಾರಗಳನ್ನು ತಡೆಯಲು ಹಾಗೂ ಮುಗ್ಧ ಗ್ರಾಹಕರನ್ನು ಕಾಪಾಡುವ ಉದ್ದೇಶದಿಂದ paytm ಸೈಬರ್ ಸೆಲ್ ನಲ್ಲಿ FIR ಕೂಡ ದಾಖಲಿಸಿದೆ. ಕೇಂದ್ರ ಗೃಹ ಸಚಿವಾಲಯ, ಭಾರತೀಯ ದೂರ ಸಂಪರ್ಕ ಪ್ರಾಧಿಕಾರ ಹಾಗೂ CERT-in ಅಧಿಕಾರಿಗಳ ಜೊತೆ ನಡೆಸಲಾದ ಸಭೆಗಳಲ್ಲಿಯೂ ಕೂಡ paytm ವಿವಿಧ ಸೂಕ್ಸ್ಮ ಮಾಹಿತಿ ಕಲೆಹಾಕಲು ಹಾಗೂ ವಂಚನೆ ಎಸಗುವ sms ಮತ್ತು ಕರೆಗಳ ಮೂಲಕ ನಡೆಸಲಾಗುವ ವಂಚನೆಗಳ ಕುರಿತು ಮಾಹಿತಿ ನೀಡಿದೆ. ಇದೇ ಕಾರಣದಿಂದ ಡಿಜಿಟಲ್ ವ್ಯವಹಾರ ನಡೆಸುವ ಗ್ರಾಹಕರು ಪ್ರಭಾವಿತರಾಗುತ್ತಿದ್ದಾರೆ ಎಂದು paytm ಹೇಳಿದೆ. CERT-in ಕಂಪ್ಯೂಟರ್ ಸುರಕ್ಷತೆಗೆ ಸಂಬಂಧಿಸಿದ ಪ್ರಕರಣಗಳ ಮೇಲೆ ಕ್ರಮಕೈಗೊಳ್ಳುವ ಏಜೆನ್ಸಿಯಾಗಿದೆ.
ಈ ರೀತಿಯ ವಂಚನೆಗಳಿಂದ ಡಿಜಿಟಲ್ ವ್ಯವಹಾರ ನಡೆಸುವ ಲಕ್ಷಾಂತರ ಭಾರತೀಯರ ನಂಬಿಕೆಗೆ ಪೆಟ್ಟು ಬೀಳುತ್ತದೆ ಎಂದು paytm, ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಸ್ಪಷ್ಟಪಡಿಸಿದೆ. paytm ಬ್ಯಾಂಕ್ ಗಳಂತಹ ಇತರ ಬ್ಯಾಂಕ್ ಗಳ ಸಹಾಯದಿಂದ ಭವಿಷ್ಯದಲ್ಲಿ ನಡೆಯಲಿರುವ ಇಂತಹ ಅಪರಾಧಗಳನ್ನು ಕಾನೂನು ಜಾರಿಗೊಳಿಸುವ ಸಂಸ್ಥೆಗಳು, ಪ್ರಾಧಿಕಾರಗಳು ಹಾಗೂ ದೂರ ಸಂಪರ್ಕ ಆಪರೇಟರ್ ಗಳ ಸಹಯೋಗದೊಂದಿದೆ ಮಟ್ಟಹಾಕಬಹುದು ಎಂದು paytm ಹೇಳಿದೆ.

ಹೀಗೆ ದೂರು ದಾಖಲಿಸಿ
ಒಂದು ವೇಳೆ ನೀವು ಕೂಡ ಬ್ಯಾಂಕ್ ಫ್ರಾಡ್ ಗೆ ಒಳಗಾಗಿದ್ದಾರೆ, ಮೊದಲು ಈ ಕುರಿತು ನೀವು ನಿಮಗೆ ಸಂಬಂಧಪಟ್ಟ ಬ್ಯಾಂಕ್ ನಲ್ಲಿ ದೂರು ದಾಖಲಿಸಬೇಕು. RBI ನಿಯಮಗಳ ಅಡಿ ಎಲ್ಲಾ ಬ್ಯಾಂಕ್ ಗಳು 24×7 ದೂರು ದಾಖಲಿಸುವ ವ್ಯವಸ್ಥೆ ಕಲ್ಪಿಸುವುದು ಅನಿವಾರ್ಯವಾಗಿದೆ. sms, ಕರೆ, ಇ-ಮೇಲ್ ಅಥವಾ IVR ಮೂಲಕ ನೀವು ದೂರು ದಾಖಲಿಸಬಹುದು. ಕೆಲ ಬ್ಯಾಂಕ್ ಗಳಲ್ಲಿ ಬ್ಯಾಂಕ್ ನ ಸಂದೇಶಗಳಿಗೆ ರಿಪ್ಲೈ ಮಾಡಿ ಕೂಡ ದೂರು ದಾಖಲಿಸುವ ವ್ಯವಸ್ಥೆ ಇದೆ.

error: Content is protected !! Not allowed copy content from janadhvani.com