janadhvani

Kannada Online News Paper

ಮದೀನಾ ಮಸೀದಿ- ಉಹ್‌ದ್‌ ನ್ನು ಸಂಪರ್ಕಿಸುವ ಹೊಸ ರಸ್ತೆ ನಿರ್ಮಾಣ

ಮದೀನಾ: ಸೌದಿ ಅರೇಬಿಯಾದ ಮದೀನಾದಲ್ಲಿರುವ ಐತಿಹಾಸಿಕ ಉಹ್‌ದ್‌ಗೆ ಹೊಸ ರಸ್ತೆ ನಿರ್ಮಿಸುವ ಯೋಜನೆ ಪ್ರಾರಂಭಗೊಂಡಿವೆ. ಹೊಸ ಯೋಜನೆ ಪ್ರವಾದಿ (ಸ)ಅವರ ಮಸೀದಿ ಮಸ್ಜಿದುನ್ನಬವಿ ಮತ್ತು ಉಹುದ್ ಅನ್ನು ಸಂಪರ್ಕಿಸುತ್ತದೆ.

ಈ ಯೋಜನೆಯನ್ನು ಮದೀನಾ ಪುರಸಭೆ ಅಭಿವೃದ್ಧಿಪಡಿಸುತ್ತಿದ್ದು, ಐದು ಕಿಲೋಮೀಟರ್ ಉದ್ದದ ರಸ್ತೆಯಲ್ಲಿ ಕಾರುಗಳಿಗಾಗಿ ಪ್ರತಿ ದಿಕ್ಕಿನಲ್ಲಿ ಮೂರು ಟ್ರ್ಯಾಕ್‌ಗಳನ್ನು ಹೊಂದಿರುತ್ತದೆ. ಬಸ್‌ಗಳಿಗಾಗಿ ಎರಡು ಎಕ್ಸ್‌ಪ್ರೆಸ್ ಟ್ರ್ಯಾಕ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ. ಪಾದಚಾರಿಗಳ ನಡಿಗೆಗಾಗಿ 9 ಮೀಟರ್ ಅಗಲವಾದ ಹಾದಿ ನಿರ್ಮಾಣವಾಗಲಿದ್ದು, ವಿಕಲಚೇತನರಂತಹ ವಿಶೇಷ ಅಗತ್ಯಗಳಿಗಾಗಿ ಇತರ ಹಾದಿ ಪ್ರಗತಿಯಲ್ಲಿದೆ.

ರಸ್ತೆ ಸುಂದರವಾಗಿ ಕಾಣುವಂತೆ 15 ಸಾವಿರಕ್ಕೂ ಹೆಚ್ಚು ಮರಗಳು ಮತ್ತು ಗಿಡಗಳನ್ನು ನೆಡಲಾಗುವುದು. ಇದರ ಜೊತೆಗೆ, ಯೋಜನೆಯ ಭಾಗವಾಗಿ ನಿರ್ದೇಶನ ಸೂಚಕಗಳು, ಧ್ವನಿ ವ್ಯವಸ್ಥೆಗಳು, ವಿಶ್ರಾಂತಿ ಕೊಠಡಿಗಳು ಮತ್ತು ಹಲವಾರು ಸೌಲಭ್ಯಗಳನ್ನು ಒದಗಿಸಲಾಗುವುದು. ಯೋಜನೆ ಪೂರ್ಣಗೊಂಡ ಬಳಿಕ,ಮದೀನಾಕ್ಕೆ ಭೇಟಿ ನೀಡುವವರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ.

error: Content is protected !! Not allowed copy content from janadhvani.com