janadhvani

Kannada Online News Paper

ಫೇಸ್‌ಬುಕ್‌ನಲ್ಲಿ ಧರ್ಮ ನಿಂದನೆ-ವಿದೇಶೀ ಮೂವರಿಗೆ 5 ಲಕ್ಷ ದಿರ್ಹಮ್ ದಂಡ, ಗಡೀಪಾರು

ದುಬೈ:ಸಸಾಮಾಜಿಕ ತಾಣದಲ್ಲಿ ಇಸ್ಲಾಂ ಧರ್ಮವನ್ನು ಅವಮಾನಿಸಿದ್ದಕ್ಕಾಗಿ ಪಂಚತಾರಾ ಹೋಟೆಲ್ ನ ಮೂವರು ಭದ್ರತಾ ಸಿಬ್ಬಂದಿಗಳನ್ನು ಬಂಧಿಸಲಾಗಿದ್ದು, ದುಬೈ ನ್ಯಾಯಾಲಯವು ತಲಾ 5ಲಕ್ಷ ದಿರ್ಹಮ್ ದಂಡ ವಿಧಿಸಿದೆ.

ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿನ ಪೋಸ್ಟ್‌ಗಳ ಮೂಲಕ 28 ರಿಂದ 34 ವರ್ಷದೊಳಗಿನ ಮೂವರು ಶ್ರೀಲಂಕನ್ನರು ಧರ್ಮವನ್ನು ನಿಂದಿಸಿದ್ದಾರೆ ಎಂದು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಆರೋಪಿಸಿದೆ.

ಇದು ತಾರತಮ್ಯ-ಮತ್ತು ದ್ವೇಷವನ್ನು ಹರಡುವುದರ ವಿರುದ್ಧದ ಕಾನೂನು ಮತ್ತು ಫೆಡರಲ್ ದಂಡ ಸಂಹಿತೆಯ ಅನುಸಾರ ಅಪರಾಧಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ದಂಡ ವಸೂಲಾದ ಬಳಿಕ ಮೂವರು ಆರೋಪಿಗಳನ್ನು ಗಡೀಪಾರು ಮಾಡುವಂತೆ ದುಬೈ ಪ್ರಾಥಮಿಕ ನ್ಯಾಯಾಲಯ ಆದೇಶ ಹೊರಡಿಸಿದೆ.

ಕಳೆದ ವರ್ಷ ಮೇ 19 ರಂದು ಅಲ್ ಬರ್ಷಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹೋಟಲ್ ಉದ್ಯೋಗಸ್ಥರು ಈ ರೀತಿಯ ಪೋಸ್ಟ್ ಗಳನ್ನು ಹರಿಯಬಿಟ್ಟಿದ್ದಾರೆಂದು ಅರಿತ ಹೋಟೆಲ್ ಆಡಳಿತವರ್ಗವು ಆಂತರಿಕ ಅನ್ವೇಷಣೆ ನಡೆಸಿತ್ತು.ತನಿಖೆಗೊಳಪಡಿಸಿದಾಗ ಇವರು ತಪ್ಪೊಪ್ಪಿಕೊಂಡಿದ್ದರು. ತದನಂತರ ಇವರನ್ನು ಪೋಲೀಸರಿಗೆ ಹಸ್ತಾಂತರಿಸಲಾಗಿತ್ತು.

ಪ್ರಾಸಿಕ್ಯೂಷನ್ ವಾರಂಟ್‌ನೊಂದಿಗೆ,ಅವರ ವಾಸ ಸ್ಥಳವನ್ನು ತಪಾಸಣೆ ನಡೆಸಿ,ಅವರ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ಪೋಲೀಸರು ವಶಪಡಿಸಿಕೊಂಡರು.

ಮೂವರು ಆರೋಪಿಗಳು ಅನುಚಿತ ಸಂದೇಶಗಳನ್ನು ಮತ್ತು ಚಿತ್ರಗಳನ್ನು ತಮ್ಮ ಖಾತೆಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವುದಾಗಿ ಪ್ರಾಸಿಕ್ಯೂಷನ್ ತನಿಖೆಯ ಸಮಯದಲ್ಲಿ,ಆರೋಪವನ್ನು ಒಪ್ಪಿಕೊಂಡಿದ್ದು, ಆರೋಪಿಗಳು ಕಾನೂನು ಗಡುವಿನೊಳಗೆ ಮೇಲ್ಮನವಿ ಸಲ್ಲಿಸದಕಾರಣ ಈಗಿನ ನ್ಯಾಯಾಂಗ ತೀರ್ಪು ಅಂತಿಮವಾಗಿರಲಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

error: Content is protected !! Not allowed copy content from janadhvani.com