janadhvani

Kannada Online News Paper

ಕೋಲ್ಕತಾ: ಮರ್ಕಝ್ ಅವೆನಾಕ್ಸ್- 20: ಪ್ರೌಢ ಸಮಾಪ್ತಿ

ಕೋಲ್ಕತಾ: ಕೇರಳದ ಪೂನೂರಿನ ಮರ್ಕಝ್ ಗಾರ್ಡನ್ ಅಧೀನದಲ್ಲಿ ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಯ ವಿದ್ಯಾರ್ಥಿಗಳ ನ್ಯಾಷನಲ್ ಲಿಟ್ರರಿ ಗಾಲ “ಮರ್ಕಝ್ ಅವೆನಾಕ್ಸ್ ” ಕಾರ್ಯಕ್ರಮ ತ್ವೈಬಾ ಗಾರ್ಡನ್ ಕೊಲ್ಕತ್ತಾದಲ್ಲಿ ಸಮಾಪ್ತಿ.

ದ್ವಿ ದಿನಗಳ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಅಲ್ಲದೆ ಬೆಂಗಾಳ್, ಹರಿಯಾಣ, ರಾಜಸ್ಥಾನ, ಒರಿಸ್ಸಾ, ಜಾರ್ಖಂಡ್, ದೆಹಲಿ, ಬಿಹಾರ್ ಮುಂತಾದ ರಾಜ್ಯಗಳಿಂದ ಎರಡು ಸಾವಿರಕ್ಕೂ ಮಿಕ್ಕ ವಿದ್ಯಾರ್ಥಿಗಳು ವೇದಿಕೆ, ವೇದಿಕೇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಬೆಂಗಾಳಿನ ವೇದಿಕೆ ಊಟೋಪಚಾರ ವೈಭವಗಳು ವಿದ್ಯಾರ್ಥಿಗಳಿಗೆ ಹೊಸ ಅನುಭವಗಳನ್ನು ನೀಡಿದೆ.
ವೆಸ್ಟ್ ಬೆಂಗಾಳಿನ ತ್ವೈಬಾ ಗಾರ್ಡನಿನಲ್ಲಿ ಬುಧವಾರ ಮಧ್ಯಾಹ್ನ ಅವೆನಕ್ಸ್ ಕಾರ್ಯಕ್ರಮ ಆರಂಭಗೊಂಡಿತು.

ಡೈರೆಕ್ಟರ್ ಡಾ.ಎ.ಪಿ.ಮುಹಮ್ಮದ್ ಅಬ್ದುಲ್ ಹಕೀಂ ಅಝ್ಹರಿರವರ ಅಧ್ಯಕ್ಷತೆಯಲ್ಲಿ ವೆಸ್ಟ್ ಬೆಂಗಾಳ್ ಸಚಿವ ಬಚ್ಚು ಹಸದ್ ಉದ್ಘಾಟನೆಗೈದರು.
ದೇಶದ ವಿವಿಧ ರಾಜ್ಯಗಳಲ್ಲಿ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸರನ್ನು ಒಗ್ಗೂಡಿಸಿ ಪರಸ್ಪರ ಸಾಂಸ್ಕೃತಿಕ- ವೈಜ್ಞಾನಿಕ ಚರ್ಚೆ ನಡೆಸಿ ಸುಸ್ಥಿರ ಸಮಾಜ ಸುಭದ್ರ ರಾಷ್ಟ್ರ ನಿರ್ಮಿಸುವುದು ಈ ಅವೆನೆಕ್ಸ್ ನಿಂದ ಲಕ್ಷ್ಯವಾಗಿದೆ.ಎಂದು ಅಧ್ಯಕ್ಷ ಭಾಷಣದಲ್ಲಿ ಡಾ. ಎಂ.ಎ.ಎಚ್ ಅಝ್ಹರಿ ರವರು ಹೇಳಿ ಮರ್ಕಝ್ ಸಮ್ಮೇಳನ ಸಂದೇಶವನ್ನು ತಿಳಿಸಿದರು.

ಕಾರ್ಯಕ್ರಮದ ಸಮಾರೋಪ ಸಂಗಮ ತ್ವೈಬಾ ಗಾರ್ಡನ್ ಡೈರೆಕ್ಟರ್ ಮೌಲಾನ ಝುಹೈರುದ್ದೀನ್ ನೂರಾನಿ ಬೆಂಗಾಳ್ ರವರ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಮುಶಾಅರ ಸದಸ್ಯರೂ, ಮರ್ಕಝುಲ್ ಹಿದಾಯ ಕೂರ್ಗ್ ಇದರ ಪ್ರಾಂಶುಪಾಲರಾದ ಮುಫ್ತಿ ಶಿಹಾಬುದ್ದೀನ್ ನೂರಾನಿ ಕೂರ್ಗ್ ಉದ್ಘಾಟನೆಗೈದರು.
ಮದೀನತ್ತುನ್ನೂರು ಡೈರೆಕ್ಟರ್ ಆಸಫ್ ನೂರಾನಿ ಅವಾರ್ಡ್ ಘೋಷಿಸಿದರು. SSF ರಾಷ್ಟ್ರೀಯ ಉಪಾಧ್ಯಕ್ಷ ನೌಶಾದ್ ಆಲಂ ಮಿಸ್ಬಾಹಿ ಒರಿಸ್ಸಾ ಶುಭಹಾರೈಸಿದರು. ಜುನೈದ್ ಖಲೀಲ್ ನೂರಾನಿ ಬೆಂಗಳೂರು, ಸಿದ್ದೀಕ್ ನೂರಾನಿ ಕೇರಳ, ಇಬ್ರಾಹಿಂ ಸಖಾಫಿ ಬೆಂಗಾಳ್, ಯೂಸುಫ್ ಇರ್ಫಾನ್ ಇಂದೋರ್ ಉಪಸ್ಥಿತರಿದ್ದರು. ಶರೀಫ್
ನೂರಾನಿ ಬೆಂಗಾಳ್ ಸ್ವಾಗತಿಸಿ ಶಿಬಿಲಿ ನೂರಾನಿ ಕೇರಳ ವಂದಿಸಿದರು.

ಸಬ್ ಜ್ಯೂನಿಯರ್, ಜ್ಯೂನಿಯರ್ ವಿಭಾಗದಲ್ಲಿ ಮಧ್ಯಪ್ರದೇಶ ತ್ವೈಬಾ ಎಜ್ಯು ಕಾಂಪ್ಲೆಕ್ಸ್, ಇಂದೋರ್. ಸೀನಿಯರ್ ವಿಭಾಗದಲ್ಲಿ ಕೇರಳದ ಮದೀನತ್ತುನ್ನೂರು, ಕ್ಯಾಲಿಕಟ್ ಸ್ಟಾರ್ ಕ್ಯಾಂಪಸ್ಸ್ ವಿಜಯಿಗಳಾದರು.

ಸಬ್ ಜೂನಿಯರ್ ವಿಭಾಗ ಮಧ್ಯಪ್ರದೇಶ ತ್ವೈಬಾ ಎಜ್ಯು ಕಾಂಪ್ಲೆಕ್ಸ್ ಇಂದೋರ್ ವಿದ್ಯಾರ್ಥಿ ತೌಸೀಫ್. ಜ್ಯೂನಿಯರ್ ವಿಭಾಗ ಮರ್ಕಿನ್ಸ್ ಉರ್ದು ಬೆಂಗಳೂರು ಶೇರ್ ಆಲಿ ಮದನಿ ‌ಹಾಗೂ ಸೀನಿಯರ್ ವಿಭಾಗ ದೆಹಲಿ ತ್ವೈಬಾ ಗಾರ್ಡನ್ ಲೋನಿ ನಿಜಾಮ್ ಖಾದ್ರಿ ವೈಯಕ್ತಿಕ ಅಗ್ರೇಸರಾದರು.

ಅವೆನೆಕ್ಸ್ ಅಂಗವಾಗಿ ಮರ್ಕಝ್ ನೋಲೆಜ್ ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಮುಹಮ್ಮದ್ ಅಬ್ದುಲ್ ಹಕೀಂ ಅಝ್ಹರಿ ನೇತೃತ್ವದಲ್ಲಿ ಪ್ರಿಸಂ ಸಪರ್ -2020 ಆತ್ಮೀಯ ಸಾಂಸ್ಕೃತಿಕ ವೈಜ್ಞಾನಿಕ ಯಾತ್ರೆ, ತ್ವೈಬಾ ಗಾರ್ಡನ್ ಅಧೀನದಲ್ಲಿ ಐದು ಮನೆಗಳು ಸಮರ್ಪಣೆ, ತ್ವೈಬಾ ಕ್ಯಾಂಪಸ್ ಮಸ್ಜಿದ್ ಉದ್ಘಾಟನೆ,ಹೈಲೆಟ್ ಮೀಟ್ ಜರುಗಿತು. ಗುರುವಾರ ಬೆಳಗ್ಗೆ ತ್ವೈಬಾ ಗಾರ್ಡನ್ ಕಾಲೇಜು ಆಫ್ ಇಸ್ಲಾಮಿಕ್ ಸೈನ್ಸ್ ಕೊಲ್ಕತ್ತಾ ದಿನೇಜ್ ಪುರ್ ಇಲ್ಲಿನ ಕ್ಯಾಂಪಸ್ಸಿನ ಹೊಸ ವಿದ್ಯಾರ್ಥಿಗಳಿಗೆ ತರಗತಿ ಶುರು ಮಾಡಿದ ಡಾ ಎಂಎಎಚ್ ಅಝ್ಹರಿ ರವರು ಮಾಡಿದರು.

SSF ರಾಷ್ಟ್ರೀಯ ಉಪಾಧ್ಯಕ್ಷ ನೌಶಾದ್ ಆಲಂ ಮಿಸ್ಬಾಹಿ ಒರಿಸ್ಸಾ ಸಂದೇಶ ಭಾಷಣ ಮಾಡುತ್ತಿರುವುದು.

ಬಿಹಾರ್, ಜಾರ್ಖಂಡ್, ಮಣಿಪುರ, ವೆಸ್ಟ್ ಬೆಂಗಾಳ್ ಮುಂತಾದ ರಾಜ್ಯಗಳಿಂದ ನಲ್ವತ್ತು ವಿದ್ಯಾರ್ಥಿಗಳು ಈ ವರ್ಷ ದಾಖಲಾತಿ ಪಡೆದಿರುವುದು. ವೈಜಾನಿಕ ಕ್ರಾಂತಿಯ ಪಾರಂಪರಿಕ ಮೌಲ್ಯವಿರುವ ಆಧುನಿಕ ಚಿಂತನೆಯಿಂದ ಹೊಸ ಭಾರತ ಕಟ್ಟುವೆವು ಎಂದು ಪ್ರತಿಜ್ಞೆ ಮಾಡಿಸಿದ ಮರ್ಕಝ್ ಗಾರ್ಡನ್ ಪೂರ್ವ ವಿದ್ಯಾರ್ಥಿ ಒಕ್ಕೂಟ ಪ್ರಿಸಂ ಫೌಂಡೇಶನ್ ಅವನೆಕ್ಸ್ ಆಯೋಜಿಸಿದೆ.

error: Content is protected !! Not allowed copy content from janadhvani.com