janadhvani

Kannada Online News Paper

ಕಳೆದ ವರ್ಷ 40 ಸಾವಿರ ವಿದೇಶಿಯರ ಗಡೀಪಾರು-ಭಾರತೀಯರೇ ಹೆಚ್ಚು

ಕುವೈತ್ ನಗರ: ಕಳೆದ ವರ್ಷ ನಲ್ವತ್ತು ಸಾವಿರ ವಿದೇಶಿಯರನ್ನು ಗಡೀಪಾರು ಮಾಡಲಾಗಿದ್ದು, ಆ ಪೈಕಿ ಹೆಚ್ಚಿನವರು ಭಾರತೀಯರು. ವಿವಿಧ ಕಾರಣಗಳಿಗಾಗಿ ಗಡೀಪಾರು ಮಾಡಲಾದವರ ಪೈಕಿ ಹೆಚ್ಚಿನವರು ನಿವಾಸ ಕಾನೂನು ಉಲ್ಲಂಘನೆಗೈದವರಾಗಿದ್ದಾರೆ.

2018 ಕ್ಕೆ ಹೋಲಿಸಿದರೆ ಕುವೈತ್ ಕಳೆದ ವರ್ಷದಲ್ಲಿ ಗಡಿಪಾರು ಮಾಡಲಾದವರ ಸಂಖ್ಯೆಯಲ್ಲಿ 14,000 ಜನರ ಹೆಚ್ಚಳ ಕಂಡಿದೆ. ಆ ಪೈಕಿ 13,000 ಮಹಿಳೆಯರು ಮತ್ತು 27,000 ಪುರುಷರು ಸೇರಿದ್ದು, ಇವರು ಇಪ್ಪತ್ತು ವಿವಿಧ ದೇಶಗಳಿಗೆ ಸೇರಿದವರು.

ಕ್ರಿಮಿನಲ್ ಪ್ರಕರಣಗಳು ಮತ್ತು ಇತರ ಅಕ್ರಮ ಚಟುವಟಿಕೆಗಳ ಸಂಬಂಧಿಸಿ ಬಂಧನಕ್ಕೊಳಗಾದವರೂ ಗಡಿಪಾರು ಮಾಡಲ್ಪಟ್ಟವರಲ್ಲಿ ಸೇರಿದ್ದಾರೆ. ಹೆಚ್ಚಿನವರು ಭಾರತೀಯರಾಗಿದ್ದು, ಬಾಂಗ್ಲಾದೇಶ ಮತ್ತು ಈಜಿಪ್ಟ್‌ನವರು ನಂತರದ ಸ್ಥಾನದಲ್ಲಿದ್ದಾರೆ.

ಕಳೆದ ವರ್ಷ, ಗಡೀಪಾರು ಕೇಂದ್ರದ ಮೂಲಕ 23,000 ಜನರನ್ನು ಮತ್ತು ಜನರಲ್ ಅಡ್ಮಿನಿಸ್ಟ್ರೇಶನ್ ಆಫ್ ಇನ್ವೆಸ್ಟಿಗೇಷನ್ ಆಫ್ ರೆಸಿಡೆನ್ಸ್ ಅಫೇರ್ಸ್ ಮೂಲಕ 10,000 ಜನರನ್ನು ಗಡೀಪಾರು ಮಾಡಲಾಯಿತು. ಕಳೆದ ನವೆಂಬರ್ ಅಂತ್ಯದ ವೇಳೆಗೆ ಬಂಧಿಸಲ್ಪಟ್ಟವರನ್ನು ಗಡೀಪಾರು ಮಾಡುವುದನ್ನು ಗಡೀಪಾರು ಕೇಂದ್ರದಿಂದ ಮಾತ್ರವಾಗಿ ಸೀಮಿತಗೊಳಿಸಲಾಗಿದೆ. ಅವರ ಬೆರಳಚ್ಚುಗಳನ್ನು ಪಡೆದು ದೇಶದಿಂದ ಹೊರಹಾಕಲಾಗಿದ್ದು, ಈ ಮೂಲಕ ಅವರು ಮತ್ತೆ ಕುವೈತ್‌ಗೆ ಮರಳದಂತೆ ಖಾತರಿಪಡಿಸಲಾಗಿದೆ.

error: Content is protected !! Not allowed copy content from janadhvani.com