janadhvani

Kannada Online News Paper

SSF, SYS, ಮುಸ್ಲಿಂ ಜಮಾಅತ್ ಕೊಪ್ಪಳ ಜಿಲ್ಲೆ: 50 ಜೋಡಿ ಸರ್ವಧರ್ಮ ಸಾಮೂಹಿಕ ವಿವಾಹ

ಸಿದ್ದಾಪುರ : ಎಸ್ಸೆಸ್ಸೆಫ್ ಎಸ್ವೈಎಸ್ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್ ಕೊಪ್ಪಳ ಜಿಲ್ಲಾ ವತಿಯಿಂದ 50 ಜೋಡಿ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ಬೃಹತ್ ಸರ್ವಧರ್ಮ ಸಮ್ಮೇಳನ ಜೂನ್ 13 ಹಾಗೂ 14 ರಂದು ಕಾರಟಗಿ ತಾಲೂಕಿನ ಸಿದ್ದಾಪುರ APMC ಗ್ರೌಂಡ್‌ನಲ್ಲಿ ನಡೆಯಲಿದೆ.

ಜೂನ್ 13 ಸಂಜೆ 6ಗಂಟೆಗೆ ಬೃಹತ್ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು ರಾಷ್ಟ್ರ ಮಟ್ಟದ ಧರ್ಮಗುರುಗಳು, ಚಿಂತಕರು ಸಾಮಾಜಿಕ ಶೈಕ್ಷಣಿಕ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ.
ಜೂನ್ 14 ರವಿವಾರ ಬೆಳಿಗ್ಗೆ 10 ಘಂಟೆಗೆ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.

ವಧು,ವರರಿಗೆ ಸ್ವರ್ಣದೊಂದಿಗೆ ಉತ್ತರ ಕರ್ನಾಟಕದ ಪದ್ದತಿಯಂತೆ ಬೆಳ್ಳಿ, ವಸ್ತ್ರಗಳು, ಪಾತ್ರೆಗಳು, ಗೋಡ್ರೇಜ್ ಹಾಗೂ ಮಂಚ ಗಾದಿಯನ್ನು ನೀಡಲಾಗುತ್ತದೆ.
ಸಭೆಯಲ್ಲಿ ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಧ್ಯಕ್ಷತೆ ವಹಿಸಿದರು.

ಎಸ್ಸೆಸ್ಸೆಫ್ ರಾಜ್ಯ ಡೆಪ್ಯುಟಿ ಅಧ್ಯಕ್ಷ ಖಾಝಿ ಗುಲಾಂ ಹುಸೈನ್ ನೂರಿ, ಕರ್ನಾಟಕ ಟೆಂಟ್ ಆಂಡ್ ಡೆಕರೇಷನ್ ಸಮಿತಿ ಅಧ್ಯಕ್ಷ ಕರ್ನಾಟಕ ಮುಸ್ಲಿಂ ಜಮಾಅತ್ ಕೊಪ್ಪಳ ಜಿಲ್ಲಾ ಸಂಚಾಲಕ ಮಹಬೂಬ್ ಮುಲ್ಲಾ ಸಿದ್ದಾಪುರ, ಮುಹಮ್ಮದ್ ಆರಿಫ್, ಎಸ್ವೈಎಸ್ ಜಿಲ್ಲಾಧ್ಯಕ್ಷ ಮೌಲಾನ ನಝೀರ್ ಹಝ್ರತ್, ಎಸ್ಸೆಸ್ಸೆಫ್ ಕೊಪ್ಪಳ ಜಿಲ್ಲಾ ಅಧ್ಯಕ್ಷ ಮಹಬೂಬ್ ಬಸವಾಪಟ್ಟಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸಲೀಂ, ದಸ್ತಗೀರ್ ಸಾಬ್ ಸಿದ್ದಾಪುರ, ಬಾಷು ಸಾಹೇಬ್ ಕಟಾಂಬ್ಲಿ, ಅಬ್ದುಲ್ ಹಮೀದ್ ಜಾಗೀರ್‌ದಾರ್ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com