janadhvani

Kannada Online News Paper

ಬಜ್ಪೆ ‘ನಾಗರಿಕ ಹಕ್ಕು ಸಮಾವೇಶ’ ಯಶಸ್ಸಿಗೆ ಎಸ್ಸೆಸ್ಸೆಫ್ ಕರೆ

ಮಂಗಳೂರು: ಸಂವಿಧಾನದ ಸಂರಕ್ಷಣೆಗಾಗಿ ಹಾಗೂ CAA, NRC, NPR ಮುಂತಾದ ಜನವಿರೋಧಿ ಕಾಯ್ದೆಗಳ ವಿರುದ್ಧ ಬಜ್ಪೆ ಸಂವಿಧಾನ ಸಂರಕ್ಷಣಾ ವೇದಿಕೆಯ ವತಿಯಿಂದ ಜನವರಿ 17, ಶುಕ್ರವಾರ ಬಜ್ಪೆಯಲ್ಲಿ ನಡೆಯಲಿರುವ ‘ನಾಗರಿಕ ಹಕ್ಕು’ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ಸಮಿತಿಯು ಕರೆ ನೀಡಿದೆ.

ಸಂವಿಧಾನವು ಅಪಾಯದ ಅಂಚಿನಲ್ಲಿದ್ದು, ಭಾರತದ ಉದ್ದಗಲಕ್ಕೂ ದೇಶಪ್ರೇಮಿಗಳು ಒಕ್ಕೊರಲಿನಿಂದ ತ್ರಿವರ್ಣ ಧ್ವಜವನ್ನು ಎದೆಗೊತ್ತಿ ಸಂವಿಧಾನದ ರಕ್ಷಣೆಗಾಗಿ ಹೋರಾಡುತಿದ್ದಾರೆ. ಭಾರತೀಯರ ಪೌರತ್ವವನ್ನು ಪ್ರಶ್ನಿಸುವವರ ವಿರುದ್ಧ ಧ್ವನಿಯೆತ್ತುವುದು ಕಾಲದ ಬೇಡಿಕೆಯಾಗಿದೆ.

ಈ ನಿಟ್ಟಿನಲ್ಲಿ ಬಜ್ಪೆಯ ಹಳೇ ಪೆಟ್ರೋಲ್ ಬಂಕ್ ಬಳಿ ನಾಳೆ ಮಧ್ಯಾಹ್ನ 2:30ಕ್ಕೆ ನಡೆಯಲಿರುವ ಬೃಹತ್ ನಾಗರಿಕ ಹಕ್ಕು ಸಮಾವೇಶದಲ್ಲಿ ಬಜ್ಪೆ ಪರಿಸರದ ಎಲ್ಲಾ ಎಸ್ಸೆಸ್ಸೆಫ್ ಕಾರ್ಯಕರ್ತರು, ಸುನ್ನಿ ಸಂಘ ಕುಟುಂಬದ ಸರ್ವ ಸದಸ್ಯರು ಹಾಗೂ ಊರಿನ ಎಲ್ಲಾ ನಾಗರಿಕರು ಪಾಲ್ಗೊಂಡು ಸಭೆಯನ್ನು ಯಶಸ್ವಿ ಗೊಳಿಸಬೇಕಾಗಿ ಎಸ್ಸೆಸ್ಸೆಫ್ ಬಜ್ಪೆ ಸೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದೆ.

-ಅಧ್ಯಕ್ಷರು ಮತ್ತು ಸರ್ವ ಸದಸ್ಯರು
🇸🇱 SSF ಬಜ್ಪೆ ಸೆಕ್ಟರ್🇸🇱

error: Content is protected !! Not allowed copy content from janadhvani.com